
ಮುಂಬೈ: ನಟಿ ಅನುಷ್ಕಾ ಶರ್ಮಾ ಮತ್ತು ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಒಂದಲ್ಲಾ ಒಂದು ವಿಷಯಕ್ಕೆ ಟ್ರೆಂಡ್ ಆಗುತ್ತಲೇ ಇರುತ್ತಾರೆ. ಸದ್ಯ ವಿರುಷ್ಕಾ ಜೋಡಿ ಇಂದು ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಕುರಿತು ವಿರಾಟ್ ತಮ್ಮ ಟ್ವಿಟರ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಸದ್ಯ, ಪುಟ್ಟ ಕಂದಮ್ಮನ ಆಗಮನದ ನಿರೀಕ್ಷೆಯಲ್ಲಿರುವ ಈ ಸೆಲೆಬ್ರಿಟಿ ದಂಪತಿ, ತಮ್ಮ ವಿವಾಹ ವಾರ್ಷಿಕೋತ್ಸವದ ದಿನದಂದು ಮದುವೆಯ ಫೋಟೊವೊಂದನ್ನು ಟ್ವಿಟರ್ನಲ್ಲಿ ಪೊಸ್ಟ್ ಮಾಡಿ ದಾಂಪತ್ಯ ಜೀವನದ ಹಾದಿಯಲ್ಲಿ 3 ವರ್ಷಗಳನ್ನು ಪೂರೈಸಿದ್ದೇವೆ. ಜೀವನ ಪೂರ್ತಿ ನಿನ್ನ ಜೊತೆಗಿರುವೆ ಎಂದು ವಿರಾಟ್ ಬರೆದುಕೊಂಡಿದ್ದಾರೆ.
ಅನುಷ್ಕಾ ಕೂಡ ಇನ್ಸ್ಟಾಗ್ರಾಂನಲ್ಲಿ ವಿರಾಟ್ಗೆ ಶುಭಾಶಯ ಕೋರಿದ್ದು ಮದುವೆಯಾಗಿ ಮೂರು ವರ್ಷಗಳಾಗಿದ್ದು, ಶೀಘ್ರದಲ್ಲಿ ನಾವು ಕೂಡ ಮೂರು ಮಂದಿಯಾಗುತ್ತಿದ್ದೇವೆ ಎಂದು ಹೇಳಿ.. ಮಿಸ್ ಯು ಎಂದು ಬರೆದುಕೊಂಡಿದ್ದಾರೆ.
2017ರಲ್ಲಿ ವಿರಾಟ್ ಮತ್ತು ಅನುಷ್ಕಾ ಇಟಲಿಯಲ್ಲಿ ವಿವಾಹವಾಗಿದ್ದರು. ಸದ್ಯ, ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಡಿಸೆಂಬರ್ 17ರಂದು ಅಡಿಲೇಡ್ನಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದ ನಂತರವಷ್ಟೇ ಭಾರತಕ್ಕೆ ಮರಳಿದ್ದಾರೆ.
3 years and onto a lifetime together ❤️ pic.twitter.com/a30gdU87vS
— Virat Kohli (@imVkohli) December 11, 2020