AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಷಿಂಗ್ಟನ್ ಸುಂದರ್​ ಅವರ ವಿಶಿಷ್ಠ ಹೆಸರಿನ ಹಿಂದಿರುವ ಕುತೂಹಲಕಾರಿ ಕಥೆ ಏನು ಗೊತ್ತಾ?

ನನಗೆ ತುಂಬಾ ಸಹಾಯ ಮಾಡಿದ ವ್ಯಕ್ತಿಯ ನೆನಪಿಗಾಗಿ ನಾನು ಅವನಿಗೆ ವಾಷಿಂಗ್ಟನ್ ಎಂದು ಹೆಸರಿಸಲು ನಿರ್ಧರಿಸಿದೆ

ವಾಷಿಂಗ್ಟನ್ ಸುಂದರ್​ ಅವರ ವಿಶಿಷ್ಠ ಹೆಸರಿನ ಹಿಂದಿರುವ ಕುತೂಹಲಕಾರಿ ಕಥೆ ಏನು ಗೊತ್ತಾ?
ತಂದೆಯೊಂದಿಗೆ ವಾಷಿಂಗ್ಟನ್​ ಸುಂದರ್​
ಪೃಥ್ವಿಶಂಕರ
| Updated By: ರಾಜೇಶ್ ದುಗ್ಗುಮನೆ|

Updated on:Jan 21, 2021 | 2:46 PM

Share

ವಾಷಿಂಗ್ಟನ್ ಸುಂದರ್​ ಟೀಂ ಇಂಡಿಯಾದ ಪ್ರತಿಭಾನ್ವಿತ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಂಬೆಗಾಲಿಡುತ್ತಿರುವ ಸುಂದರ್​, ಆಸಿಸ್​ ಪ್ರವಾಸದಲ್ಲಿ ಕ್ರಿಕೆಟ್​ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆಸಿಸ್​ ವಿರುದ್ಧ ಬ್ಯಾಟಿಂಗ್​ ಹಾಗೂ ಬೌಲಿಂಗನಲ್ಲೂ ಮಿಂಚಿದ ಸುಂದರ್​ ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಡುವುದರಲ್ಲಿ ಪ್ರಮುಖ ಪಾತ್ರವಹಿಸಿದರು.

ಹೀಗಾಗಿ ಕ್ರಿಕೆಟ್​ ಪ್ರೇಮಿಗಳ ಮನೆಮಾತಾಗಿರುವ ವಾಷಿಂಗ್ಟನ್ ಸುಂದರ್​ ಅವರ ವಿಶೇಷವಾದ ಹೆಸರಿನ ಹಿಂದಿನ ಕುತೂಹಲಕಾರಿ ಮಾಹಿತಿಯನ್ನು ಅವರ ತಂದೆ ಬಹಿರಂಗಪಡಿಸಿದ್ದಾರೆ. ನಾನು ಹಿಂದೂ  ಕುಟುಂಬದಿಂದ ಬಂದವನಾಗಿದ್ದು, ಟ್ರಿಪ್ಲಿಕೇನ್‌ನಲ್ಲಿರುವ ನನ್ನ ಮನೆಯ ಪಕ್ಕದ ಬೀದಿಯಲ್ಲಿ ಪಿ.ಡಿ. ವಾಷಿಂಗ್ಟನ್ ಎಂಬ ನಿವೃತ್ತ ಯೋಧ ವಾಸಿಸುತ್ತಿದ್ದರು. ಅವರು ಕ್ರಿಕೆಟ್ ಬಗ್ಗೆ ತುಂಬಾ ಒಲವು ಹೊಂದಿದ್ದರು ಮತ್ತು ಮರೀನಾ ಮೈದಾನದಲ್ಲಿ ನಾವು ಆಡುವುದನ್ನು ನೋಡಲು ಬರುತ್ತಿದ್ದರು. ಹೀಗಾಗಿ ಅವರು ನನ್ನ ಆಟವನ್ನು ಬಹಳ ಇಷ್ಟಪಡುತ್ತಿದ್ದರು.

ನಾನು ತುಂಬಾ ಬಡತನದ ಕುಟುಂಬದಿಂದ ಬಂದವನು. ಹಾಗಾಗಿ ನನಗೆ ನನ್ನ ವಿದ್ಯಾಭ್ಯಾಸಕ್ಕಾಗಿ ಸಮವಸ್ತ್ರವನ್ನು ಖರೀದಿಸಲಾಗುತ್ತಿರಲಿಲ್ಲ. ಆ ಸಮಯದಲ್ಲಿ ಪಿ.ಡಿ. ವಾಷಿಂಗ್ಟನ್ ಅವರೆ ನನಗೆ ಸಮವಸ್ತ್ರ ಕೊಡಿಸುತ್ತಿದ್ದರು. ನನ್ನ ಶಾಲಾ ಶುಲ್ಕವನ್ನು ಪಾವತಿಸುತ್ತಿದ್ದರು. ಅಲ್ಲದೆ ನನಗಾಗಿ ಪುಸ್ತಕಗಳನ್ನು ಕೊಂಡು ತರುತ್ತಿದ್ದರು. ಜೊತೆಗೆ ನನ್ನ ಕ್ರಿಕೆಟ್​ ಅಭ್ಯಾಸಕ್ಕಾಗಿ ನನ್ನನ್ನು ಅವರ ಸೈಕಲ್​ನಲ್ಲಿ ಮೈದಾನಕ್ಕೆ ಕರೆದೊಯ್ಯುತ್ತಿದ್ದರು. ಹೀಗೆ ನಿರಂತರವಾಗಿ ನನ್ನನ್ನು ಅವರು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಅವರು ನನಗೆ ತುಂಬಾ ಇಷ್ಟದ ವ್ಯಕ್ತಿಯಾಗಿದ್ದರು ಎಂದರು.

ವಾಷಿಂಗ್ಟನ್ ನಿಧನರಾದ ಕೆಲವು ತಿಂಗಳ ನಂತರ ಸುಂದರ್ ಅವರ ಮೊದಲ ಮಗ ಜನಿಸಿದ. ನನ್ನ ಹೆಂಡತಿಗೆ ಹೆರಿಗೆ ಕಷ್ಟವಾಗಿತ್ತು. ಹಾಗಾಗಿ ಮಗು ಬದುಕುಳಿಯಿತ್ತಾದರು ನನ್ನ ಹೆಂಡತಿ ಉಳಿಯಲಿಲ್ಲ. ಹಿಂದೂ ಪದ್ಧತಿಯ ಪ್ರಕಾರ ನನ್ನ ಮಗನ ಕಿವಿಯಲ್ಲಿ ಶ್ರೀನಿವಾಸನ್ ಎಂದು ಪಿಸುಗುಟ್ಟಿದೆ. ಆದರೆ ನನಗೆ ತುಂಬಾ ಸಹಾಯ ಮಾಡಿದ ವ್ಯಕ್ತಿಯ ನೆನಪಿಗಾಗಿ ನಾನು ಅವನಿಗೆ ವಾಷಿಂಗ್ಟನ್ ಎಂದು ಹೆಸರಿಸಲು ನಿರ್ಧರಿಸಿದೆ ಎಂದರು. ಅಲ್ಲದೆ ನನಗೆ ಎರಡನೇ ಮಗ ಏನಾದರೂ ಜನಿಸಿದ್ದರೆ, ನಾನು ಅವನನ್ನು ವಾಷಿಂಗ್ಟನ್ ಜೂನಿಯರ್ ಎಂದು ಕರೆಯುತ್ತಿದ್ದೆ ಎಂದು ತಮಗೆ ಸಹಾಯ ಮಾಡಿದ ವ್ಯಕ್ತಿಯ ಬಗೆಗಿನ ಗೌರವವನ್ನು ಈ ರೀತಿ ವ್ಯಕ್ತಪಡಿಸಿದರು.

Team India ಗೆಲುವಿನ ರೂವಾರಿಗಳ ತೆರೆಯ ಹಿಂದಿನ ರೋಚಕ ಕಹಾನಿ ತೆರೆದಿಟ್ಟಾಗ!

Published On - 2:37 pm, Thu, 21 January 21

ಜನತೆಗೆ ಗುಡ್​ ನ್ಯೂಸ್ ಕೊಟ್ಟ ಕೇಂದ್ರ: ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?
ಜನತೆಗೆ ಗುಡ್​ ನ್ಯೂಸ್ ಕೊಟ್ಟ ಕೇಂದ್ರ: ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ