ಕೊರೊನಾ.. ನುಂಗಿಬಿಡ್ತು ನೇಕಾರನ ಪ್ರಾಣ, ಪತ್ನಿ 4 ದಿನ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು
ದೊಡ್ಡಬಳ್ಳಾಪುರ: ಕೊರೊನಾ ಮಹಾಮಾರಿ ದೇಶದಲ್ಲಿ ಹಲವಾರು ಸೋಂಕಿತರನ್ನ ನೇರವಾಗಿ ಬಲಿ ಪಡೆಯುತ್ತಿದ್ದರೆ ಇನ್ನೊಂದೆಡೆ ಅದರಿಂದ ಎದುರಾಗಿರುವ ಆರ್ಥಿಕ ಸಂಕಷ್ಟಗಳಿಂದ ಹಲವಾರು ಜನ ಪ್ರಾಣ ಬಿಡುವಂಥ ದುಃಸ್ಥಿತಿ ಉಂಟಾಗಿದೆ. ಇಂಥದ್ದೇ ಒಂದು ಘಟನೆ ನಡೆದಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ. ಸಂಕಷ್ಟಗಳು ಶುರುವಾಗಿದ್ದೇ ಲಾಕ್ಡೌನ್ ಸಮಯದಲ್ಲಿ ದೊಡ್ಡಬಳ್ಳಾಪುರದ ಭುವನೇಶ್ವರಿ ನಗರದಲ್ಲಿ ವಾಸವಾಗಿದ್ದ 45 ವರ್ಷದ ನಾರಾಯಣ ಎಂಬುವವರು ಬಾಡಿಗೆಗೆ ಮಗ್ಗ ಪಡೆದು ನೇಕಾರಿಕೆ ಮಾಡುತ್ತಿದ್ದರು. ಹೇಗೋ ಬದುಕು ಸಾಗಿಸುತ್ತಿದ್ದ ಅವರಿಗೆ ಸಂಕಷ್ಟಗಳು ಶುರುವಾಗಿದ್ದೇ ಲಾಕ್ಡೌನ್ ಸಮಯದಲ್ಲಿ. ವ್ಯಾಪಾರ ವಹಿವಾಟು […]
ದೊಡ್ಡಬಳ್ಳಾಪುರ: ಕೊರೊನಾ ಮಹಾಮಾರಿ ದೇಶದಲ್ಲಿ ಹಲವಾರು ಸೋಂಕಿತರನ್ನ ನೇರವಾಗಿ ಬಲಿ ಪಡೆಯುತ್ತಿದ್ದರೆ ಇನ್ನೊಂದೆಡೆ ಅದರಿಂದ ಎದುರಾಗಿರುವ ಆರ್ಥಿಕ ಸಂಕಷ್ಟಗಳಿಂದ ಹಲವಾರು ಜನ ಪ್ರಾಣ ಬಿಡುವಂಥ ದುಃಸ್ಥಿತಿ ಉಂಟಾಗಿದೆ. ಇಂಥದ್ದೇ ಒಂದು ಘಟನೆ ನಡೆದಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ.
ಸಂಕಷ್ಟಗಳು ಶುರುವಾಗಿದ್ದೇ ಲಾಕ್ಡೌನ್ ಸಮಯದಲ್ಲಿ ದೊಡ್ಡಬಳ್ಳಾಪುರದ ಭುವನೇಶ್ವರಿ ನಗರದಲ್ಲಿ ವಾಸವಾಗಿದ್ದ 45 ವರ್ಷದ ನಾರಾಯಣ ಎಂಬುವವರು ಬಾಡಿಗೆಗೆ ಮಗ್ಗ ಪಡೆದು ನೇಕಾರಿಕೆ ಮಾಡುತ್ತಿದ್ದರು. ಹೇಗೋ ಬದುಕು ಸಾಗಿಸುತ್ತಿದ್ದ ಅವರಿಗೆ ಸಂಕಷ್ಟಗಳು ಶುರುವಾಗಿದ್ದೇ ಲಾಕ್ಡೌನ್ ಸಮಯದಲ್ಲಿ. ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡು ಜೀವನ ನಡೆಸುವುದೇ ಕಷ್ಟವಾಗಿಬಿಡ್ತು. ಒಂದು ಕಡೆ ಮಗ್ಗದ ಬಾಡಿಗೆ ಮತ್ತು ಕರೆಂಟ್ ಬಿಲ್ನ ಹೊಡೆತ ಮತ್ತೊಂದ್ಕಡೆ ಸಾಲಬಾಧೆ. ಇವೆರಡರ ಮಧ್ಯೆ ಸಿಕ್ಕಿಹಾಕಿಕೊಂಡು ಪರದಾಡುತ್ತಿದ್ದರು.
ಪತ್ನಿ 4 ದಿನ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು ಇತ್ತ ಮನೆಯಲ್ಲಿ ಕುಟುಂಬದ ನಿರ್ವಹಣೆ ಮಾಡಲಾಗದೆ ಅವರ ಪತ್ನಿ ಮಂಜುಳಾ ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವೆಲ್ಲವುದರಿಂದ ಬೇಸತ್ತ ನಾರಾಯಣ ಇಂದು ನೇಣಿಗೆ ಶರಣಾಗಿದ್ದಾರೆ.