ಠೇವಣಿ ಇಡುವಾಗ ಎಂಥ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಬೇಕು: ಆತುರದ ನಿರ್ಧಾರ ಬೇಡ

ಖಾಸಗಿ  ಬ್ಯಾಂಕ್​ಗಳಲ್ಲಿ ಠೇವಣಿ ಇಡುವಾಗ ಎಚ್ಚರ ಇರಲಿ. ಶೇ 1 ಅಥವಾ 2 ರಷ್ಟು  ಬಡ್ಡಿ ಹೆಚ್ಚು ಕೊಡುತ್ತಿದ್ದರೂ ಆತುರದ ನಿರ್ಧಾರ ಮಾಡಬಾರದು. ಯೋಚಿಸಿ ಎಚ್ಚರಿಕೆಯಿಂದ ಹೆಜ್ಜೆಯಿಡಿ, ನಿಮ್ಮ ಹಣವನ್ನು ಜೋಪಾನವಾಗಿ ರಕ್ಷಿಸಿಕೊಳ್ಳಿ.

ಠೇವಣಿ ಇಡುವಾಗ ಎಂಥ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಬೇಕು: ಆತುರದ ನಿರ್ಧಾರ ಬೇಡ
ಹಿರಿಯ ಲೆಕ್ಕ ಪರಿಶೋಧಕ ವಿವೇಕ್ ಮಲ್ಯ
Follow us
Lakshmi Hegde
| Updated By: ganapathi bhat

Updated on:Nov 24, 2020 | 6:24 PM

ಈಗಂತೂ ಬ್ಯಾಂಕ್​, ಕೋ-ಆಪರೇಟಿವ್​ ಸೊಸೈಟಿಗಳು, ಹಣಕಾಸು ಸಂಸ್ಥೆಗಳನ್ನು ನಂಬುವುದೇ ಕಷ್ಟ ಆಗತೊಡಗಿದೆ. ಹಾಗಂತ ಎಲ್ಲ ಬ್ಯಾಂಕ್​ಗಳೂ ಅಸಮರ್ಪಕವಾಗಿಯೇ ಕಾರ್ಯನಿರ್ವಹಿಸುತ್ತವೆ ಎಂದಲ್ಲ. ಆದರೆ ಇತ್ತೀಚೆಗಂತೂ ನಷ್ಟಕ್ಕೀಡಾದ, ಅವ್ಯವಹಾರ ನಡೆಸಿದ, ಗೋಲ್​ಮಾಲ್​ ಮಾಡಿ ಸಿಕ್ಕಿಬಿದ್ದ ಹಣಕಾಸು ಸಂಸ್ಥೆಗಳ ಸಂಖ್ಯ ಹೆಚ್ಚುತ್ತಿದೆ. ಅದರಲ್ಲೂ ವಾರದ ಹಿಂದೆ ಲಕ್ಷ್ಮೀ ವಿಲಾಸ ಬ್ಯಾಂಕ್​ ಮೇಲೆ ಆರ್​ಬಿಐ ಒಂದು ತಿಂಗಳ ನಿರ್ಬಂಧ ಹೇರಿ, ಠೇವಣಿ ದಾರರಿಗೆ ತಿಂಗಳಿಗೆ ₹ 25,000 ವಿತ್​ ಡ್ರಾ ಮಿತಿ ಹೇರಿದ ನಂತರ ಗ್ರಾಹಕರಿಗೆ ಸಹಜವಾಗಿಯೇ ಅಭದ್ರತೆ ಹೆಚ್ಚಾಗಿದೆ.

ಠೇವಣಿ ಇಡುವಾಗ ಬ್ಯಾಂಕ್​ಗಳ ಆಯ್ಕೆ ಹೇಗಿರಬೇಕು? ಹಣ ಡಿಪೋಸಿಟ್​​ ಇಡುವಾಗ ಆತುರದ ನಿರ್ಧಾರ ಮಾಡಬೇಡಿ ಎನ್ನುತ್ತಾರೆ ಹಿರಿಯ ಲೆಕ್ಕ ಪರಿಶೋಧಕ ವಿವೇಕ್​ ಮಲ್ಯ. ಟಿವಿ9 ಜೊತೆ ಫೇಸ್​ಬುಕ್​ ಲೈವ್​ ಸಂವಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದ ಕಾನೂನುಗಳು ಸಾಲ ಕೊಡುವವರ ವಿರುದ್ಧ ಹಾಗೂ ಸಾಲ ಪಡೆದವರ ಮೇಲಿನ ದಬ್ಬಾಳಿಕೆ ತಡೆಯುವುದಕ್ಕೋಸ್ಕರ ಇದೆ. ಆದರೆ ಠೇವಣಿ ಇಟ್ಟವರ ಭದ್ರತೆಗಾಗಿ ಯಾವುದೇ ಪ್ರಬಲ ಕಾನೂನುಗಳು ಇಲ್ಲ ಎಂದು ವಿಷಾದಿಸಿದರು.

ನಾವು ಬ್ಯಾಂಕ್​ ಮೇಲೆಯೇ ಅವಲಂಬಿತರಾಗಬೇಕಾಗುತ್ತದೆ. ನೀವು ಠೇವಣಿ ಇಟ್ಟ ಬ್ಯಾಂಕ್​ ಒಂದೊಮ್ಮೆ ಬಾಗಿಲು ಮುಚ್ಚಿದರೆ ನಿಮ್ಮ ಹಣಕ್ಕೆ ₹ 5 ಲಕ್ಷ ರೂ. ಇನ್ಶೂರೆನ್ಸ್​ ನೀಡಬೇಕು ಎಂಬ ನಿಯಮವಿದೆ. ಆದರೆ ಕಾನೂನು ಕ್ರಮಗಳೆಲ್ಲ ಮುಗಿದ ಮೇಲೆ ನಿಮ್ಮ ಹಣ ಕೈಗೆ ಸೇರುತ್ತದೆ. ನೀವು ಒಂದೇ ಬ್ಯಾಂಕ್​ನ ನಾಲ್ಕು ಬ್ರ್ಯಾಂಚ್​ಗಳಲ್ಲಿ ಠೇವಣಿ ಹಣ ಇಟ್ಟಿದ್ದರೆ ನಿಮಗೆ ಸಿಗುವ ಇನ್ಶೂರೆನ್ಸ್​ ಮಿತಿ ₹​ 5 ಲಕ್ಷ ಮಾತ್ರ. ಆದರೆ ನಾಲ್ಕು ಬೇರೆ ಬೇರೆ ಬ್ಯಾಂಕ್​ಗಳಲ್ಲೇ ಠೇವಣಿ ಇಟ್ಟು, ಆ ಬ್ಯಾಂಕ್​ಗಳಿಗೆ ತೊಂದರೆಯಾದರೆ ಪ್ರತಿ ಬ್ಯಾಂಕ್​ನಿಂದ ನಿಮ್ಮ ಠೇವಣಿಗೆ ತಲಾ ₹ 5 ಲಕ್ಷ ಇನ್ಶೂರೆನ್ಸ್​ ರಕ್ಷಣೆ ಇರುತ್ತದೆ. ನೀವು ಇರಿಸಿದ ಠೇವಣಿಯ ಮೊತ್ತ ₹ 5 ಲಕ್ಷಕ್ಕಿಂತಲೂ ಹೆಚ್ಚಾಗಿದ್ದರೂ ಠೇವಣಿಯ ಮಿತಿ ₹ 5 ಲಕ್ಷಕ್ಕೇ ಸೀಮಿತವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು ಎಂದು ಎಚ್ಚರಿಸುತ್ತಾರೆ ಅವರು.

ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ಏನಾದರೂ ತೊಂದರೆಯಾದರೆ ಸರ್ಕಾರ ಮಧ್ಯ ಪ್ರವೇಶ ಮಾಡುತ್ತದೆ. ಕಾನೂನಿನ ಅನ್ವಯ ಕ್ರಮ ತೆಗೆದುಕೊಂಡು ಗ್ರಾಹಕರಿಗೆ ಮೋಸವಾಗದಂತೆ ನೋಡಿಕೊಳ್ಳುತ್ತದೆ. ಆದರೆ ಖಾಸಗಿ  ಬ್ಯಾಂಕ್​ಗಳಲ್ಲಿ ಠೇವಣಿ ಇಡುವಾಗ ಎಚ್ಚರ ಇರಲಿ. ಶೇ 1 ಅಥವಾ 2 ರಷ್ಟು  ಬಡ್ಡಿ ಹೆಚ್ಚು ಕೊಡುತ್ತಿದ್ದರೂ ಆತುರದ ನಿರ್ಧಾರ ಮಾಡಬಾರದು. ಈಗಿನ ದಿನಗಳಲ್ಲಂತೂ ಬ್ಯಾಂಕ್​ಗಳ ಆಯ್ಕೆ ಅತ್ಯಂತ ಮಹತ್ವ ಎಂದು ಹೇಳಿದರು.

ವಿಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Tue, 24 November 20

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು