ಅನ್ಯ ಯುವತಿಯೊಂದಿಗೆ ಪತಿಯ ಪಾರ್ಟಿ ಸೆಲೆಬ್ರೇಷನ್.. ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣು
ಕೈ ಹಿಡಿದ ಪತ್ನಿಯಿದ್ದರೂ ಅನ್ಯ ಯುವತಿಯೊಂದಿಗೆ ನ್ಯೂ ಇಯರ್ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ಕೈ ಹಿಡಿದ ಪತ್ನಿಯಿದ್ದರೂ ಅನ್ಯ ಯುವತಿಯೊಂದಿಗೆ ನ್ಯೂ ಇಯರ್ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಭಿಲಾಷ ತ್ರಿವೇಣಿ (30) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
ಅಭಿಲಾಷ ತ್ರಿವೇಣಿ ಮತ್ತು ಶಶಿಕುಮಾರ್ ಇಬ್ಬರದ್ದೂ ಇದು ಎರಡನೇ ಮದುವೆ. ಇಬ್ಬರಿಗೂ ಈ ಹಿಂದೆ ಪ್ರತ್ಯೇಕ ಮದುವೆಯಾಗಿ ಬಳಿಕ ವಿಚ್ಛೇದನ ಪಡೆದಿದ್ದರು. ಎರಡು ವರ್ಷದ ಹಿಂದೆ ಪರಸ್ಪರ ಪರಿಚಯವಾಗಿ ಪ್ರೀತಿಸಿ ವಿವಾಹವಾಗಿದ್ರು. ಆದರೆ ಇವರ ಜೀವನದಲ್ಲಿ ಅನುಮಾನ ಎಂಬ ಭೂತದ ಛಾಯೆ ಹೆಚ್ಚಿತ್ತು.
ಪತಿ ಶಶಿಕುಮಾರ್ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಬಹುತೇಕ ಬಾರಿ ನೈಟ್ ಶಿಫ್ಟ್ ನೆಪ ಹೇಳಿ ಗೆಳತಿ ಮನೆಗೆ ಹೋಗುತ್ತಿದ್ದ. ಹಾಗೂ ಒಮ್ಮೆ ರಾತ್ರಿ 10 ಗಂಟೆಯ ಸಮಯದಲ್ಲಿ ಶಶಿಕುಮಾರ್, ಮಹಿಳೆಯ ಜೊತೆ ವಿಡಿಯೋ ಕಾಲ್ನಲ್ಲಿದ್ದದನ್ನು ತ್ರಿವೇಣಿ ನೋಡಿ ಅಂದು ಮನೆಯಲ್ಲಿ ದೊಡ್ಡ ರಂಪವೇ ಆಗಿತ್ತು.
ಇದೇ ರೀತಿ ಹೊಸ ವರ್ಷದ ದಿನವೂ ರಾತ್ರಿ ಶಶಿಕುಮಾರ್ಗೆ ಕರೆ ಬಂದಿರುತ್ತೆ. ಆಗ ಆತ ನನಗೆ ಕೆಲಸ ಇದೆ ಎಂದು ಮನೆಯಿಂದ ಎದ್ದು ಹೋಗಿದ್ದ. ಅನುಮಾನಗೊಂಡ ತ್ರಿವೇಣಿ ತನ್ನ ಪತಿಯನ್ನೇ ಹಿಂಬಾಲಿಸುತ್ತಾಳೆ. ಬಳಿಕ ಅನ್ಯ ಯುವತಿಯೊಂದಿಗೆ ನ್ಯೂ ಇಯರ್ ಪಾರ್ಟಿಯಲ್ಲಿ ಭಾಗಿಯಾಗಿರುವುದನ್ನು ನೋಡಿದ್ದಾಳೆ.
ಪತಿ ಶಶಿಕುಮಾರ್ ಅನೈತಿಕ ಸಂಬಂಧದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತ್ರಿವೇಣಿ ಕುಟುಂಬಸ್ಥರ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡಿರುವ ಶ್ರೀರಾಂಪುರ ಪೊಲೀಸರು ಪತಿ ಶಶಿಕುಮಾರ್ನನ್ನು ಬಂಧಿಸಿದ್ದಾರೆ.
ಪ್ರೀತಿಸಿ ಮದುವೆಯಾದ ಪತ್ನಿಗೆ ವರದಕ್ಷಿಣೆ ಕಿರುಕುಳ.. 3ನೆ ಮಹಡಿಯಿಂದ ನೂಕಿ ಕೊಲೆಗೈದೇಬಿಟ್ಟ ಪಾಪಿ ಪತಿ