Hyderabad: ಕಳೆದ ವರ್ಷ 24 ತಾಸುಗಳ ಕಾಲವೂ ಲಭ್ಯವಿರುವ ಇಡ್ಲಿ ವೆಂಡಿಂಗ್ ಮಶೀನ್ ಬೆಂಗಳೂರಿನಲ್ಲಿ ಆರಂಭಗೊಂಡಾಗ ಸವಿದು ಬಂದಿರಿ. ಇದೀಗ ವಿಶ್ವದ ಮೊಟ್ಟ ಮೊದಲ ನೀರು, ಚಹಾ, ಕಾಫೀ, ಬಿಸ್ಕೆಟ್ ಎಟಿಎಂ ಮಶೀನ್ ನೋಡಲು ಹೈದರಾಬಾದಿಗೆ ಹೋಗೋಣವೆ? ಮನುಷ್ಯರ ಹಸ್ತಕ್ಷೇಪವಿಲ್ಲದೆ ಈ ಸ್ವಯಂಚಾಲಿತ ಯಂತ್ರವು ಮೇಲಿನ ಪಾನೀಯಗಳನ್ನು ತಯಾರುಗೊಳಿಸುತ್ತದೆ. ಜೊತೆಗೆ ಬಿಸ್ಕೆಟ್ ಕೂಡ ನೀಡುತ್ತದೆ. QR ಕೋಡ್ ಬಳಸಿ ಗ್ರಾಹಕರು ತಮಗೆ ಬೇಕಾದ್ದನ್ನು ಪಡೆಯಬಹುದಾಗಿದೆ. ಗ್ರಾಹಕಸ್ನೇಹಿಯಾಗಿರಲು ಧ್ವನಿ-ಸಹಾಯಕವನ್ನೂ ಅಳವಡಿಸಲಾಗಿದೆ.
ಇದನ್ನೂ ಓದಿ : Viral Video: ಸೋರುತಿಹುದು ರೈಲುಮಾಳಿಗೀ; ವಂದೇಭಾರತ್ನ ಪ್ರಯಾಣಿಕರಿಗೆ ಉಚಿತ ಶವರ್
ರೆಫ್ರಿಜರೇಟರ್ಗಿಂತ ಕಡಿಮೆ ಬೆಲೆಯಲ್ಲಿ ಇದನ್ನು ಖರೀದಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಸಾಲ ಮತ್ತು ವಿಮಾ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಈ ಯಂತ್ರದ ಸಂಶೋಧಕ ಪಿ. ವಿನೋದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : Viral: ಗುಳೇದಗುಡ್ಡದ ಖಣ ತೊಟ್ಟುಬಂದ ಜವಾರೀ ನೋಟ್ಬುಕ್ಗಳು
“ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ, ಇಂಥ ಮಾರಾಟ ಯಂತ್ರಗಳು ಸಾಮಾನ್ಯ ಜನರಿಗೆ ತಲುಪಲು ಸಾಧ್ಯವಿಲ್ಲ, ನೂರರಲ್ಲಿ ಕೇವಲ ಒಂದು ಮಾಲ್ ಮತ್ತು ಮೆಟ್ರೋಗಳಲ್ಲಿ ಇಂಥ ಯಂತ್ರಗಳನ್ನು ಸ್ಥಾಪಿಸಬಹುದಾಗಿದ” ಎಂದಿದ್ದಾರೆ ಅವರು.