ಪಾರಿವಾಳ ವಿಚಾರಕ್ಕೆ ಗೆಳೆಯರ ಜಗಳ: ಬಿಡಿಸಲು ಹೋದವ ಮಸಣ ಸೇರಿದ
ಹಾಸನ: ಪಾರಿವಾಳ ವಿಚಾರಕ್ಕಾಗಿ ಇಬ್ಬರು ಗೆಳೆಯರ ನಡುವೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಹೋದ ಯುವಕ ಚಾಕುವಿನಿಂದ ಇರಿತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಸಮೀವುಲ್ಲಾ ಮೃತ ದುರ್ದೈವಿ. ನಿನ್ನೆ ರಾತ್ರಿ ಇಬ್ಬರು ಗೆಳೆಯರ ನಡುವೆ ಪಾರಿವಾಳ ವಿಚಾರಕ್ಕಾಗಿ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೇರಿದನ್ನು ಕಂಡು ಅಲ್ಲೇ ಇದ್ದ ಸಮೀವುಲ್ಲಾ ಇಬ್ಬರ ನಡುವೆ ಜಗಳ ನಿಲ್ಲಿಸಲು ಹೋಗಿದ್ದಾನೆ. ಆದರೆ ಇಬ್ಬರು ಗೆಳೆಯರ ಜಗಳದ ನಡುವೆ […]
ಹಾಸನ: ಪಾರಿವಾಳ ವಿಚಾರಕ್ಕಾಗಿ ಇಬ್ಬರು ಗೆಳೆಯರ ನಡುವೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಹೋದ ಯುವಕ ಚಾಕುವಿನಿಂದ ಇರಿತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಸಮೀವುಲ್ಲಾ ಮೃತ ದುರ್ದೈವಿ. ನಿನ್ನೆ ರಾತ್ರಿ ಇಬ್ಬರು ಗೆಳೆಯರ ನಡುವೆ ಪಾರಿವಾಳ ವಿಚಾರಕ್ಕಾಗಿ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೇರಿದನ್ನು ಕಂಡು ಅಲ್ಲೇ ಇದ್ದ ಸಮೀವುಲ್ಲಾ ಇಬ್ಬರ ನಡುವೆ ಜಗಳ ನಿಲ್ಲಿಸಲು ಹೋಗಿದ್ದಾನೆ.
ಆದರೆ ಇಬ್ಬರು ಗೆಳೆಯರ ಜಗಳದ ನಡುವೆ ಜಗಳ ಬಿಡಿಸಲು ಹೋದ ಸಮೀವುಲ್ಲಾ ಚಾಕುವಿನಿಂದ ಹಲ್ಲೆಗೆ ಒಳಗಾಗಿದ್ದು, ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ. ಚನ್ನರಾಯಪಟ್ಟಣ ನಗರ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
Published On - 2:03 pm, Thu, 30 July 20