Beauty Care Tips in Kannada: ಮೊಡವೆ ಕಲೆಗಳು ನಿಮ್ಮ ಮುಖದ ಅಂದವನ್ನು ಹಾಳು ಮಾಡುತ್ತಿವೆಯೇ? ಇಲ್ಲಿದೆ ಸರಳ ಮನೆಮದ್ದು

| Updated By: ಗಂಗಾಧರ​ ಬ. ಸಾಬೋಜಿ

Updated on: May 13, 2024 | 6:17 PM

ಹೆಣ್ಣಿಗೆ ಸೌಂದರ್ಯವೆನ್ನುವುದು ಬಹಳ ಮುಖ್ಯ. ಹೀಗಾಗಿ ಹೆಣ್ಣು ಮಕ್ಕಳು ತಮ್ಮ ಸೌಂದರ್ಯದ ಕುರಿತು ಹೆಚ್ಚು ಗಮನ ಕೊಡುತ್ತಾರೆ. ಬೇಸಿಗೆಯಲ್ಲಿ ಎಣ್ಣೆ ತ್ವಚೆ ಇರುವವರಲ್ಲಿ ಮುಖವು ಅಂದಗೆಡುತ್ತದೆ. ಧೂಳು, ಬೆವರು ಹಾಗೂ ಮಾಲಿನ್ಯವು ಮುಖದ ಮೇಲೆ ದಾಳಿ ಮಾಡಿ ಮೊಡವೆ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಮೊಡವೆಗಳನ್ನು ಹೋಗಲಾಡಿಸುವುದು ಸುಲಭದ ಕೆಲಸವಲ್ಲ. ಆದರೆ ಮನೆಯಲ್ಲೇ ಕೆಲವು ನೈಸರ್ಗಿಕವಾಗಿ ಮನೆ ಮದ್ದಿನ ಮೂಲಕ ಮೊಡವೆ ಕಲೆಗಳು ದೂರವಾಗುತ್ತವೆ.

Beauty Care Tips in Kannada: ಮೊಡವೆ ಕಲೆಗಳು ನಿಮ್ಮ ಮುಖದ ಅಂದವನ್ನು ಹಾಳು ಮಾಡುತ್ತಿವೆಯೇ? ಇಲ್ಲಿದೆ ಸರಳ ಮನೆಮದ್ದು
ಮೊಡವೆ ಕಲೆಗಳು ನಿಮ್ಮ ಮುಖದ ಅಂದವನ್ನು ಹಾಳು ಮಾಡುತ್ತಿವೆಯೇ? ಇಲ್ಲಿದೆ ಸರಳ ಮನೆಮದ್ದು
Follow us on

ಎಲ್ಲರಿಗಿಂತ ಸುಂದರವಾಗಿರಬೇಕೆಂದು (Beauty) ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಆದರೆ ಹವಾಮಾನ ಬದಲಾಗುತ್ತಿದ್ದಂತೆ ತ್ವಚೆಯಲ್ಲಾಗುವ ಬದಲಾವಣೆಯಿಂದ ಹೆಚ್ಚಿನವರು ತಲೆಕೆಡಿಸಿಕೊಳ್ಳುತ್ತಾರೆ. ಈ ಬೇಸಿಗೆಯಲ್ಲಿ ಸೂರ್ಯನ ಅತಿಯಾದ ಶಾಖದ ಕಾರಣ ಚರ್ಮ ಕಪ್ಪಾಗುವುದು, ಸುಕ್ಕುಗಟ್ಟುವುದು, ಮೊಡವೆಗಳು (Acne), ಉರಿಯೂತ ಸಮಸ್ಯೆ, ತ್ವಚೆಯಲ್ಲಿ ಕಿರಿಕಿರಿ ಹೀಗೆ ನಾನಾ ರೀತಿಯ ಸಮಸ್ಯೆಗಳು ಕಾಡುತ್ತವೆ. ಮೊಡವೆ ಹಾಗೂ ಅದರ ಕಲೆಗಳು ಮುಖ ಸೌಂದರ್ಯವನ್ನು ಹಾಳು ಮಾಡುವ ಕಾರಣ ಮನೆಯಲ್ಲೇ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

* ಅರಿಶಿನ ಮತ್ತು ತುಳಸಿ ಮೊಡವೆಗಳನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಎರಡು ಚಮಚ ಹಸಿ ಅರಿಶಿನ ಹಾಗೂ ಮೂವತ್ತು ತುಳಸಿ ಎಲೆಗಳನ್ನು ತೊಳೆದು ರುಬ್ಬಿಕೊಳ್ಳಬೇಕು. ಈ ಪೇಸ್ಟ್ ಅನ್ನು ಮೊಡವೆಗಳ ಮೇಲೆ ಹಚ್ಚಿ, ಒಣಗಿದ ಬಳಿಕ ತೊಳೆಯುವುದರಿಂದ ಮೊಡವೆ ಸಮಸ್ಯೆಗಳು ದೂರವಾಗುತ್ತವೆ.

ಇದನ್ನೂ ಓದಿ: Kitchen Tips in Kannada : ರೆಫ್ರಿಜರೇಟರ್ ಇಲ್ಲದೆ ದೀರ್ಘಕಾಲದವರೆಗೆ ಆಹಾರವನ್ನು ಸಂಗ್ರಹಿಸಿಡುವುದ್ಹೇಗೆ? ಈ ಟಿಪ್ಸ್ ಪಾಲಿಸಿ

* ಬೇವಿನ ಎಲೆಗಳು ಉತ್ತಮ ನಂಜುನಿರೋಧಕ ಗುಣವನ್ನು ಹೊಂದಿದೆ. ಈ ಬೇವಿನ ಎಲೆಗಳನ್ನು ಪುಡಿಮಾಡಿ, ಒಂದೆರಡು ಚಮಚ ರೋಸ್ ವಾಟರ್‌ನೊಂದಿಗೆ ಬೆರೆಸಿ ಸೇವಿಸಿದರೆ ಮೊಡವೆಗಳ ಮೇಲೆ ಹಚ್ಚುವುದರಿಂದ ಪರಿಣಾಮಕಾರಿ ಫಲಿತಾಂಶ ದೊರೆಯುತ್ತದೆ.

* ಒಂದು ಚಮಚ ಶುದ್ಧ ಜೇನುತುಪ್ಪವನ್ನು ಸಣ್ಣ ಹತ್ತಿ ಉಂಡೆಯನ್ನು ಅದ್ದಿ ಮೊಡವೆಗಳ ಮೇಲೆ ಇಟ್ಟುಕೊಂಡು ಅರ್ಧ ಗಂಟೆಯ ನಂತರ ತೊಳೆದರೆ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: Health Tips: ನಿಂತು ನೀರು ಕುಡಿಯುವುದು ಆರೋಗ್ಯಕ್ಕೆ ಕೆಟ್ಟದ್ದಾ? ತಜ್ಞರು ಹೇಳುವುದೇನು?

* ಮೊಡವೆಗಳ ನಿವಾರಣೆ ಶ್ರೀಗಂಧ ಉತ್ತಮ ಔಷದಿ ಎನ್ನಲಾಗಿದೆ. ಶ್ರೀಗಂಧದ ಪುಡಿಯನ್ನು ರೋಸ್ ವಾಟರ್ ನಲ್ಲಿ ಬೆರೆಸಿ ದಪ್ಪ ಪೇಸ್ಟ್ ಮಾಡಿ ಮತ್ತು ಮೊಡವೆಗಳ ಮೇಲೆ ಹಚ್ಚಿದರೆ ತಂಪಾದ ಅನುಭವವಾಗುತ್ತದೆ. ಸ್ವಲ್ಪ ಸಮಯದ ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

* ಸ್ವಲ್ಪ ಪ್ರಮಾಣದ ನಿಂಬೆ ರಸಕ್ಕೆ ಎರಡು ಚಮಚ ನೀರನ್ನು ಸೇರಿಸಬೇಕು. ಈ ಮಿಶ್ರಣದಲ್ಲಿ ಹತ್ತಿ ಉಂಡೆಯನ್ನು ನೆನೆಸಿ ಮೊಡವೆಗಳ ಮೇಲೆ ಇಟ್ಟುಕೊಂಡರೆ ಮೊಡವೆಗಳು ಬೇಗನೆ ಒಣಗುತ್ತವೆ. ಆದರೆ ಸೂಕ್ಷ್ಮ ಚರ್ಮ ಹೊಂದಿರುವವರು ತ್ವಚೆಗೆ ನಿಂಬೆ ರಸವನ್ನು ಬಳಸುವ ಮುನ್ನ ಎಚ್ಚರ ವಹಿಸಿ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:16 pm, Mon, 13 May 24