ಕೇರಳದ ವರ್ಕ್ ಫ್ರಮ್ ಹೋಟೆಲ್ ಪ್ಯಾಕೇಜ್‌ಗಳ ಬಗ್ಗೆ ನೀವೂ ತಿಳಿದುಕೊಳ್ಳಿ

| Updated By: shruti hegde

Updated on: Jul 28, 2021 | 1:10 PM

Work From Hotel: ಲಾಕ್‌ಡೌನ್ ಅವಧಿಯಲ್ಲಿ, ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ ಲಿಮಿಟೆಡ್ (ಐಆರ್‌ಸಿಟಿಸಿ) ವೃತ್ತಿಪರರಿಗೆ ಹೋಟೆಲ್ ಕೋಣೆಗಳ ಸೌಕರ್ಯದಿಂದ ವಿಭಿನ್ನವಾದ ಮತ್ತು ಮತ್ತು ಹಿತವಾದ ವಾತಾವರಣದೊಂದಿಗೆ ತಮ್ಮ ಕೆಲಸವನ್ನು ಮುಂದುವರಿಸಲು ವಿಶೇಷ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಿದೆ.

ಕೇರಳದ ವರ್ಕ್ ಫ್ರಮ್ ಹೋಟೆಲ್ ಪ್ಯಾಕೇಜ್‌ಗಳ ಬಗ್ಗೆ ನೀವೂ ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Follow us on

ಕೇರಳದ ಐಆರ್‌ಸಿಟಿಸಿ ಹೋಟೆಲ್ ‘ವರ್ಕ್ ಫ್ರಮ್ ಹೋಟೆಲ್’(Work From Hotel) ಎಂಬ ವಿಶೇಷ ಯೋಜನೆಯನ್ನು ಪ್ರಾರಂಭಿಸಿದ್ದು, ಇದು ವರ್ಕ್ ಫ್ರಮ್ ಹೋಮ್​ನ ಪರ್ಯಾಯವಾಗಿದೆ. ‘ವೃತ್ತಿಪರರಿಗೆ ಕೇರಳದ ಹೋಟೆಲ್ ಕೋಣೆಗಳಲ್ಲಿ ಉಲ್ಲಾಸಕರ ಮತ್ತು ಹಿತವಾದ ವಾತಾವರಣವನ್ನು ಒದಗಿಸುತ್ತದೆ ಎಂದು ವರದಿಯಿಂದ ತಿಳಿದು ಬಂದಿದೆ.

ಲಾಕ್‌ಡೌನ್ ಅವಧಿಯಲ್ಲಿ, ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ ಲಿಮಿಟೆಡ್ (ಐಆರ್‌ಸಿಟಿಸಿ) ವೃತ್ತಿಪರರಿಗೆ ಹೋಟೆಲ್ ಕೋಣೆಗಳ ಸೌಕರ್ಯದಿಂದ ವಿಭಿನ್ನವಾದ ಮತ್ತು ಮತ್ತು ಹಿತವಾದ ವಾತಾವರಣದೊಂದಿಗೆ ತಮ್ಮ ಕೆಲಸವನ್ನು ಮುಂದುವರಿಸಲು ವಿಶೇಷ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಅವರು ತಮ್ಮ ದಿನಚರಿಯನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಬಹುದು ಎಂದು ಹೇಳಿಕೆ ತಿಳಿಸಿದೆ.

ಐದು ರಾತ್ರಿ ವಾಸ್ತವ್ಯಕ್ಕಾಗಿ ಒಬ್ಬ ವ್ಯಕ್ತಿಗೆ 10,126 ರೂ.ಗಳಿಂದ ಪ್ರಾಕೇಜ್​ ಪ್ರಾರಂಭವಾಗುತ್ತದೆ. ಮತ್ತು ದಿನದಲ್ಲಿ ಮೂರು ಹೊತ್ತು ಊಟ, ಎರಡು ಬಾರಿ ಚಹಾ / ಕಾಫಿ, ವೈ-ಫೈ, ವಾಹನಕ್ಕಾಗಿ ಸುರಕ್ಷಿತ ಪಾರ್ಕಿಂಗ್ ಸ್ಥಳ ಮತ್ತು ಪ್ರಯಾಣ ವಿಮೆಯನ್ನು ಒಳಗೊಂಡಿದೆ. ಕೊವಿಡ್​ ಸುರಕ್ಷಿತ ಕ್ರಮಗಳನ್ನು ಅಳವಡಿಸಲಾಗಿದೆ.

ಕೇರಳದಲ್ಲಿನ ‘ವರ್ಕ್ ಫ್ರಮ್ ಹೋಟೆಲ್’ ಯೋಜನೆಯ ಅಡಿಯಲ್ಲಿ ನೀಡಲಾಗುವ ಹೋಟೆಲ್‌ಗಳಲ್ಲಿ  ನೆಚ್ಚಿನ ತಾಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊದಲಿಗೆ, ಮುನ್ನಾರ್, ತೆಕ್ಕಡಿ, ಕುಮಾರಕೋಮ್, ಮರಾರಿ (ಅಲೆಪ್ಪಿ), ಕೋವಲಂ, ವಯನಾಡ್ ಮತ್ತು ಕೊಚ್ಚಿನ್ ನಡುವೆ ಆಯ್ಕೆ ಮಾಡಬಹುದು. ಪ್ಯಾಕೇಜ್‌ನ ಅವಧಿಯು ಕನಿಷ್ಠ ಐದು ರಾತ್ರಿಗಳವರೆಗೆ ಇರುತ್ತದೆ.

ಕಟ್ಟುನಿಟ್ಟಾದ ಕೊವಿಡ್​ ಸುರಕ್ಷತಾ ಪ್ರೋಟೋಕಾಲ್‌ಗಳು ಮತ್ತು ಉತ್ತಮ ಗುಣಮಟ್ಟದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲಾಗುತ್ತದೆ. ಪ್ಯಾಕೇಜ್‌ಗಳನ್ನು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಐಆರ್‌ಸಿಟಿಸಿ ಪ್ರವಾಸೋದ್ಯಮ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು. ಪ್ರಸ್ತುತದಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಹಾಗೂ
ಕೊವಿಡ್​19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ:

ಕೇರಳದಲ್ಲಿ ಮತ್ತಿಬ್ಬರಿಗೆ ಝಿಕಾ ವೈರಸ್ ಸೋಕು, ಸೋಂಕಿತರ ಒಟ್ಟು ಸಂಖ್ಯೆ 48ಕ್ಕೆ ಏರಿಕೆ

Inspiration: ಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕ ಒಂಟಿ ಕಾಲಿನಲ್ಲಿ ಸೈಕಲ್ ತುಳಿದು ಕೇರಳದಿಂದ ಹೈದರಾಬಾದ್ ತಲುಪಿದ; ಮುಂದಿನ ಗುರಿ ಲಡಾಕ್