AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಹೆಚ್ಚು ಎನರ್ಜಿ ಡ್ರಿಂಕ್ ಕುಡಿಯುತ್ತೀರಾ?; ಈ ರೋಗದ ಬಗ್ಗೆಯೂ ಎಚ್ಚರವಿರಲಿ

ಡ್ರೈವ್ ಮಾಡುವಾಗ, ವರ್ಕ್​ಔಟ್ ಮಾಡಿದ ನಂತರ, ಆಯಾಸವಾದಾಗ ಕೆಲವರು ಎನರ್ಜಿ ಡ್ರಿಂಕ್ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಆದರೆ, ಈ ಎನರ್ಜಿ ಡ್ರಿಂಕ್​ನಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಅಡ್ಡಪರಿಣಾಮಗಳು ಉಂಟಾಗುತ್ತವೆ? ಇದರಿಂದ ಬೇರೆ ಯಾವ ಕಾಯಿಲೆಗಳು ಬರುತ್ತವೆ? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ನೀವು ಹೆಚ್ಚು ಎನರ್ಜಿ ಡ್ರಿಂಕ್ ಕುಡಿಯುತ್ತೀರಾ?; ಈ ರೋಗದ ಬಗ್ಗೆಯೂ ಎಚ್ಚರವಿರಲಿ
ಎನರ್ಜಿ ಡ್ರಿಂಕ್ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Jan 24, 2024 | 1:30 PM

ನೀವು ತಿಂಗಳಿಗೊಮ್ಮೆ ಎನರ್ಜಿ ಡ್ರಿಂಕ್ಸ್ ಸೇವಿಸುತ್ತೀರಾ? ಅಥವಾ ನಿಯಮಿತವಾಗಿ ಎನರ್ಜಿ ಡ್ರಿಂಕ್ ಕುಡಿಯುತ್ತೀರಾ? ಇದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಎನರ್ಜಿ ಡ್ರಿಂಕ್ ನಿಮ್ಮಲ್ಲಿ ನಿದ್ರಾಹೀನತೆಗೆ ಕಾರಣವಾಗಬಹುದು ಎಂದು ಅಧ್ಯಯನವು ಕಂಡುಹಿಡಿದಿದೆ. ಮಾರುಕಟ್ಟೆಯಲ್ಲಿರುವ ಶಕ್ತಿ ಪಾನೀಯಗಳನ್ನು ಸಾಮಾನ್ಯವಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಜನರು ಹೆಚ್ಚಾಗಿ ಸೇವಿಸುತ್ತಾರೆ.

ನೀವು ಎನರ್ಜಿ ಡ್ರಿಂಕ್ಸ್​ ಜಾಸ್ತಿ ಕುಡಿದಷ್ಟೂ ರಾತ್ರಿಯ ನಿದ್ರೆಯ ಅವಧಿ ಕಡಿಮೆಯಾಗುತ್ತದೆ ಎಂದು ಅಧ್ಯಯನ ಹೇಳಿದೆ. ಏಕೆಂದರೆ ಶಕ್ತಿ ಪಾನೀಯಗಳು ಪ್ರತಿ ಲೀಟರ್‌ಗೆ ಸರಾಸರಿ 150 ಮಿಗ್ರಾಂ ಕೆಫೀನ್ ಅಂಶವನ್ನು ಹೊಂದಿರುತ್ತವೆ. ಇದರಲ್ಲಿ ಸಕ್ಕರೆ, ವಿಟಮಿನ್‌ಗಳು, ಖನಿಜಗಳು ಮತ್ತು ಅಮೈನೋ ಆಮ್ಲಗಳು ಕೂಡ ಇರುತ್ತವೆ ಎಂದು ನಾರ್ವೆಯ ಓಸ್ಲೋ ಮತ್ತು ಬರ್ಗೆನ್ ವಿಶ್ವವಿದ್ಯಾಲಯಗಳ ಸಂಶೋಧಕರು ವಿವರಿಸಿದ್ದಾರೆ.

ಇದನ್ನೂ ಓದಿ: ಉತ್ತಮ ನಿದ್ರೆಗೆ ರಾತ್ರಿ ಯಾವ ದಿಕ್ಕಿನಲ್ಲಿ ತಲೆಯಿಟ್ಟು ಮಲಗಬೇಕು?

ಎನರ್ಜಿ ಡ್ರಿಂಕ್ ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸೂಚಿಸಲು ಕೆಲವು ಪುರಾವೆಗಳಿವೆ. ಈ ಬಗ್ಗೆ ಅಧ್ಯಯನಕ್ಕಾಗಿ ಸಂಶೋಧಕರು ನಾರ್ವೆಯಲ್ಲಿ 18 ರಿಂದ 35 ವರ್ಷ ವಯಸ್ಸಿನ 53,266 ಯುವಕರ ಮೇಲೆ ಪ್ರಯೋಗ ನಡೆಸಿದರು. ಇದರಲ್ಲಿ ಭಾಗವಹಿಸುವವರು ಪ್ರತಿವಾರ 2-3 ಬಾರಿ ಮತ್ತು 4-6 ಬಾರಿ ಎನರ್ಜಿ ಡ್ರಿಂಕ್ ಸೇವಿಸುತ್ತಿದ್ದರು. ಇನ್ನು ಕೆಲವರು ತಿಂಗಳಿಗೆ 1-3 ಬಾರಿ ಎನರ್ಜಿ ಡ್ರಿಂಕ್ ಸೇವಿಸುತ್ತಿದ್ದರು. ಇದರ ಜೊತೆಗೆ ಅವರ ಸಾಮಾನ್ಯ ನಿದ್ರೆಯ ಮಾದರಿಗಳ ಬಗ್ಗೆ ವಿವರವಾದ ಪ್ರಶ್ನೆಗಳನ್ನು ಸಹ ಕೇಳಲಾಯಿತು. ಅವರು ನಿದ್ರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ, ನಿದ್ರೆಯ ವೇಳೆ ಎಷ್ಟು ಬಾರಿ ಎಚ್ಚರಗೊಳ್ಳುತ್ತಾರೆ, ಒಟ್ಟು ಎಷ್ಟು ಗಂಟೆ ನಿದ್ರೆ ಮಾಡುತ್ತಾರೆಂಬುದರ ವಿವರ ಪಡೆಯಲಾಯಿತು.

ಇದನ್ನೂ ಓದಿ: ಬಿಸಿ ಹಾಲು ಕುಡಿದರೆ ನಿಜಕ್ಕೂ ಚೆನ್ನಾಗಿ ನಿದ್ರೆ ಬರುತ್ತಾ?

ತಾವು ಎನರ್ಜಿ ಡ್ರಿಂಕ್ ಸೇವಿಸಿದ್ದೇವೆ ಎಂದು ಹೇಳಿದವರಲ್ಲಿ ಶೇ. 5.5ರಷ್ಟು ಮಹಿಳೆಯರು ವಾರಕ್ಕೆ 4-6 ಬಾರಿ ಎನರ್ಜಿ ಡ್ರಿಂಕ್ ಕುಡಿಯುತ್ತಾರೆ. ಕೇವಲ ಶೇ. 3ರಷ್ಟು ಜನರು ದಿನವೂ ಎನರ್ಜಿ ಡ್ರಿಂಕ್ ಕುಡಿಯುತ್ತಾರೆ. ದಿನವೂ ಎನರ್ಜಿ ಡ್ರಿಂಕ್ ಕುಡಿಯುವ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಾಂದರ್ಭಿಕವಾಗಿ ಆಗಾಗ ಎನರ್ಜಿ ಡ್ರಿಂಕ್ ಕುಡಿಯುವ ಅಥವಾ ಎನರ್ಜಿ ಡ್ರಿಂಕ್ ಸೇವನೆಯನ್ನೇ ಮಾಡಿದವರಿಗಿಂತ ಅರ್ಧ ಗಂಟೆ ಕಡಿಮೆ ನಿದ್ರೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಊರ ಜನರಿಂದ ಸೋಫಿಯ ಮಾವ, ಕುಟುಂಬಸ್ಥರಿಗೆ ಅಭಿನಂದನೆ
ಊರ ಜನರಿಂದ ಸೋಫಿಯ ಮಾವ, ಕುಟುಂಬಸ್ಥರಿಗೆ ಅಭಿನಂದನೆ
ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ