Sleep: ಉತ್ತಮವಾಗಿ ನಿದ್ರಿಸಬೇಕೆ? ಮಲಗುವ ಮುನ್ನ ಈ ಅಭ್ಯಾಸಗಳು ಬೇಡವೇ ಬೇಡ
ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿತ್ಯ 7-8 ತಾಸುಗಳ ಕಾಲ ನಿದ್ರೆ ಮಾಡುವುದು ಬಹುಮುಖ್ಯ. ಉತ್ತಮ ನಿದ್ರೆಯಿಂದ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳು ನಿಮ್ಮ ಬಳಿ ಸುಳಿಯದು.
ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿತ್ಯ 7-8 ತಾಸುಗಳ ಕಾಲ ನಿದ್ರೆ ಮಾಡುವುದು ಬಹುಮುಖ್ಯ. ಉತ್ತಮ ನಿದ್ರೆಯಿಂದ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳು ನಿಮ್ಮ ಬಳಿ ಸುಳಿಯದು. ಹಾಗೆಯೇ ನಿತ್ಯ ನೀವು ವ್ಯಾಯಾಮ ಹಾಗೂ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ನಿದ್ರಾಹೀನತೆ ಸಮಸ್ಯೆಯನ್ನು ಹೋಗಲಾಡಿಸಬಹುದು.
ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ, ಅದು ನಿಮ್ಮ ಆರೋಗ್ಯದ ಮೇಲೆ ಮತ್ತು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮೆದುಳು ಸರಿಯಾಗಿ ವಿಶ್ರಾಂತಿ ಪಡೆಯದಿದ್ದರೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.
ಕೆಲವೊಮ್ಮೆ, ನೀವು ನಿದ್ರಿಸುವುದು ಕಷ್ಟವಾಗಬಹುದು. ಆದರೆ ರಾತ್ರಿಯ ನಿದ್ರೆ ತುಂಬಾ ಮುಖ್ಯವಾಗುತ್ತದೆ, ಏಕೆಂದರೆ ಇದು ಹಾರ್ಮೋನುಗಳು ಮತ್ತು ಕಿಣ್ವಗಳ ಉತ್ತಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ನಿಮ್ಮ ರಾತ್ರಿಯ ನಿದ್ರೆಯನ್ನು ಹಾಳು ಮಾಡುವ ಕಾರಣಗಳು ಇಲ್ಲಿವೆ.
ಸಂಜೆ ಮತ್ತು ರಾತ್ರಿ ನೀಲಿ ಬೆಳಕಿಗೆ ಮೈಯೊಡ್ಡಬೇಡಿ ಸಂಜೆ ಮತ್ತು ರಾತ್ರಿಯಲ್ಲಿ ನೀಲಿ ಬೆಳಕಿಗೆ ಮೈಯೊಡ್ಡುವುದನ್ನು ತಪ್ಪಿಸಿ. ನೀವು ನೀಲಿ ಬೆಳಕಿಗೆ ಒಡ್ಡಿಕೊಂಡಾಗ, ನಿಮ್ಮ ದೇಹವು ಹಗಲೆಂದು ಭಾವಿಸಿ ಕಡಿಮೆ ಮೆಲಟೋನಿನ್ ಅನ್ನು ಉತ್ಪಾದಿಸುತ್ತದೆ. ಆಗ ನಿದ್ರೆ ಬರುವುದಿಲ್ಲ. ಹಾಗಾಗಿ ರಾತ್ರಿ ಹೊತ್ತು ಮೊಬೈಲ್ , ಲ್ಯಾಪ್ಟಾಪ್, ಟಿವಿ ಬಳಕೆಯನ್ನು ಕಡಿಮೆ ಮಾಡಿ.
ರಾತ್ರಿ ಹೊತ್ತು ಕೆಫೀನ್ ಪಾನೀಯಗಳನ್ನು ಕಡಿಮೆ ಮಾಡಿ ರಾತ್ರಿ ಹೊತ್ತು ಕೆಫೀನ್ಯುಕ್ತ ಪಾನೀಯವನ್ನು ಸೇವಿಸುವುದನ್ನು ಕಡಿಮೆ ಮಾಡಿ. ಅದು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ನಂತರ ನೀವು ದಿನವಿಡೀ ಕೆಲಸ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ತಡವಾಗಿ ಕೆಫೀನ್ ಮಾಡಿದ ಪಾನೀಯಗಳನ್ನು ಕುಡಿಯುವುದು ನಿಮ್ಮ ನರಮಂಡಲವನ್ನು ಉತ್ತೇಜಿಸಬಹುದು ಮತ್ತು ಅದು ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು. ಈ ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸುವುದು ಉತ್ತಮ.
ಮಲಗುವ ಮುನ್ನ ವ್ಯಾಯಾಮ ಬೇಡ ಮಲಗುವ ಮುನ್ನ ದೇಹವನ್ನು ದಂಡಿಸುವ ಯಾವುದೇ ಕೆಲಸವನ್ನು ಮಾಡಬೇಡಿ. ಮಲಗುವ 3-4 ಗಂಟೆಗಳ ಮೊದಲು ವ್ಯಾಯಾಮ ಮಾಡುವುದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ. ಆದಾಗ್ಯೂ, ನೀವು ಮಲಗುವ ಮುನ್ನ ವ್ಯಾಯಾಮ ಮಾಡುವುದು ಉತ್ತಮ ಆಯ್ಕೆಯಲ್ಲ.