Fitness Tips: ನೀವು ಪ್ರತಿನಿತ್ಯ ವಾರ್ಮ್ ಅಪ್ ಮಾಡುತ್ತೀರಾ? ಹಾಗಾದರೆ ಈ ತಪ್ಪುಗಳನ್ನು ಮಾಡಬೇಡಿ
ಕೆಲವರು ಕೆಲವೊಮ್ಮೆ ನೇರವಾಗಿ ವ್ಯಾಯಾಮ ಮಾಡಲು ಪ್ರಾರಂಭಿಸುತ್ತಾರೆ. ಇದು ಸಂಪೂರ್ಣ ತಪ್ಪು ಕ್ರಮ ಎನ್ನುತ್ತಾರೆ ಫಿಟ್ನೆಸ್ ತಜ್ಞರು.
ಆರೋಗ್ಯಕರವಾಗಿರಲು ವ್ಯಾಯಾಮ (Exercise) ಅತ್ಯಗತ್ಯ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಅದಕ್ಕಿಂತ ಮುಖ್ಯವಾದುದು ಸರಿಯಾಗಿ ವ್ಯಾಯಾಮ ಮಾಡುವುದಾಗಿದೆ. ಏಕೆಂದರೆ ಕೆಲವರು ಕೆಲವೊಮ್ಮೆ ನೇರವಾಗಿ ವ್ಯಾಯಾಮ ಮಾಡಲು ಪ್ರಾರಂಭಿಸುತ್ತಾರೆ. ಇದು ಸಂಪೂರ್ಣ ತಪ್ಪು ಕ್ರಮ ಎನ್ನುತ್ತಾರೆ ಫಿಟ್ನೆಸ್ ತಜ್ಞರು. ಸರಳ ವ್ಯಾಯಾಮ ದೇಹಕ್ಕೆ ಸಾಕಷ್ಟು ತ್ರಾಣವನ್ನು ನೀಡುತ್ತದೆ. ಇದು ನಿಮಗೆ ಹೆಚ್ಚು ಸಮಯ ವ್ಯಾಯಾಮ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ ವ್ಯಾಯಾಮ ಮಾಡುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಪರಿಣಾಮವಾಗಿ, ಅಂತಹ ಜನರು ವ್ಯಾಯಾಮದಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವುದಿಲ್ಲ. ಹಾಗಾದರೆ ವ್ಯಾಯಾಮ ಮಾಡುವ ಸರಿಯಾದ ಕ್ರಮ ಏನು ಎಂದು ತಿಳಿಯೋಣ.
ಇದನ್ನೂ ಓದಿ; Calcium Deficiency: ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ಏನಾಗುತ್ತದೆ ಗೊತ್ತಾ? ಇಲ್ಲಿದೆ ಮಾಹಿತಿ
ಈ ತಪ್ಪುಗಳನ್ನು ಮಾಡಬೇಡಿ!
ಸರಳ ವ್ಯಾಯಾಮ:
ಯಾವುದೇ ವ್ಯಾಯಾಮಕ್ಕೂ ಅಭ್ಯಾಸವು ತುಂಬಾ ಮುಖ್ಯವಾಗಿದೆ. ನೀವು ಯಾವಾಗಲೂ ಕನಿಷ್ಠ 10 ನಿಮಿಷಗಳ ಕಾಲ ಸರಳ ವ್ಯಾಯಾಮ ಮಾಡುವುದು ಉತ್ತಮ. ಹೀಗೆ ಮಾಡುವುದರಿಂದ ಮಾತ್ರ ವ್ಯಾಯಾಮದ ನಂತರ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯ.
ಸ್ಟ್ರೆಚಿಂಗ್ ಚೆನ್ನಾಗಿ ಮಾಡಬೇಕು:
ವ್ಯಾಯಾಮದ ಮೊದಲು ಸ್ಟ್ರೆಚಿಂಗ್ ಮಾಡುವುದು ಅತ್ಯಗತ್ಯ. ಫಿಟ್ ಆಗಿ ಉಳಿಯಲು ಸರಿಯಾದ ವ್ಯಾಯಾಮ ಅಭ್ಯಾಸವು ಪ್ರಯೋಜನಕಾರಿಯಾಗಿದೆ. ಸ್ಟ್ರೆಚಿಂಗ್ ದೇಹದಾದ್ಯಂತ ರಕ್ತ ಮತ್ತು ಆಮ್ಲಜನಕದ ಪೂರೈಕೆಯನ್ನು ಸುಧಾರಿಸುತ್ತದೆ. ಆದ್ದರಿಂದ ನೀವು ವ್ಯಾಯಾಮ ಮಾಡುತ್ತಿದ್ದರೆ ಸರಿಯಾಗಿ ಸ್ಟ್ರೆಚಿಂಗ್ ಮಾಡಲು ಮರೆಯದಿರಿ.
ಇದನ್ನೂ ಓದಿ: Headache: ಬೆಳಗ್ಗೆ ಎದ್ದ ತಕ್ಷಣ ತಲೆನೋವಿನಿಂದ ಬಳಲುತ್ತೀರಾ? ಇಲ್ಲಿದೆ ಪರಿಹಾರ
ಪ್ರತಿದಿನ ನಿಮ್ಮ ಅಭ್ಯಾಸವನ್ನು ಬದಲಾಯಿಸುವುದು ಒಳ್ಳೆಯದು:
ವ್ಯಾಯಾಮದಂತೆಯೇ ವಾರ್ಮ್ ಅಪ್ ಮಾಡುವುದನ್ನು ಪ್ರತಿದಿನ ಅಭ್ಯಾಸ ಮಾಡಿಕೊಳ್ಳಿ. ಅದರ ಪರಿಣಾಮಕಾರಿತ್ವವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹಾಗಾಗಿ ವ್ಯಾಯಾಮದ ಜೊತೆಗೆ ವಾರ್ಮ್ ಅಪ್ ವ್ಯಾಯಾಮದಲ್ಲೂ ವೈವಿಧ್ಯತೆಯನ್ನು ತರಲು ಪ್ರಯತ್ನಿಸಿ.
(ಸೂಚನೆ: ಈ ಮೇಲೆ ನೀಡಿದ ವಿಷಯವು ಮಾಹಿತಿಗಾಗಿ ಮಾತ್ರವಾಗಿದ್ದು, ಟಿವಿ9 ಡಿಜಿಟಲ್ಗೆ ಸಂಬಂಧಿಸಿರುವುದಿಲ್ಲ. ಸೂಕ್ತ ಮಾರ್ಗದರ್ಶನ ಅಥವಾ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.)