Headache: ಬೆಳಗ್ಗೆ ಎದ್ದ ತಕ್ಷಣ ತಲೆನೋವಿನಿಂದ ಬಳಲುತ್ತೀರಾ? ಇಲ್ಲಿದೆ ಪರಿಹಾರ

ಬೆಳಗ್ಗೆ ಎದ್ದ ನಂತರ ತಲೆ ನೋವು ಬರಲು ಕಾರಣವೇನು? ಈ ಸಮಸ್ಯೆಯಿಂದ ಮುಕ್ತಿ ಹೊಂದುವುದಾದರೂ ಹೇಗೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

Headache: ಬೆಳಗ್ಗೆ ಎದ್ದ ತಕ್ಷಣ ತಲೆನೋವಿನಿಂದ ಬಳಲುತ್ತೀರಾ? ಇಲ್ಲಿದೆ ಪರಿಹಾರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 30, 2022 | 7:00 AM

ಬೆಳಿಗ್ಗೆ ಎದ್ದ ತಕ್ಷಣ ಅನೇಕ ಜನರು ತಲೆನೋವಿನ (Headache) ಸಮಸ್ಯೆಯನ್ನು ಎದುರಿಸುತ್ತಾರೆ. ಈ ತಲೆನೋವನ್ನ ಸಾಮಾನ್ಯ ಎಂದು ನಿರ್ಲಕ್ಷಿಸಲಾಗುತ್ತದೆ. ಆದರೆ ಇದು ಸಾಮಾನ್ಯವಲ್ಲ, ಎಚ್ಚರವಿರಲಿ ಎಂದು ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ ಈ ತಲೆನೋವಿನ ಹಿಂದೆ ಹಲವು ಕಾರಣಗಳಿರಬಹುದು. ಉದಾಹರಣೆಗೆ ತೀವ್ರ ಒತ್ತಡ, ದೇಹದಲ್ಲಿ ನೀರಿನ ಕೊರತೆ ಮತ್ತು ನಿದ್ರೆಯ ಕೊರತೆಯಂತಹ ಸಮಸ್ಯೆಗಳಿಂದ ತಲೆನೋವು ಉಂಟಾಗಬಹುದು. ಒಂದು ವೇಳೆ ನೀವೂ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಆರೋಗ್ಯದ ಕಡೆ ಗಮನ ಹರಿಸಬೇಕು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಇದು ಗಂಭೀರ ಸಮಸ್ಯೆಯೂ ಆಗಬಹುದು. ಹಾಗಾದರೆ ಬೆಳಗ್ಗೆ ಎದ್ದ ನಂತರ ತಲೆ ನೋವು ಬರಲು ಕಾರಣವೇನು? ಈ ಸಮಸ್ಯೆಯಿಂದ ಮುಕ್ತಿ ಹೊಂದುವುದಾದರೂ ಹೇಗೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಮುಂದೆ ಓದಿ.

ಇದನ್ನೂ ಓದಿ: Monkeypox Symptoms: ಮಂಕಿಪಾಕ್ಸ್ ಸೋಂಕಿನ​ ರೋಗಲಕ್ಷಣಗಳು ಈಗ ಮೊದಲಿನಂತಿಲ್ಲ

ತಲೆನೋವಿನ ಕಾರಣಗಳು:

ಈ ತಲೆನೋವಿಗೆ ಪ್ರಮುಖವಾಗಿ ದೇಹದಲ್ಲಿ ರಕ್ತದ ಕೊರತೆಯಾದರೆ ತಲೆನೋವುಂಟಾಗುತ್ತದೆ ಎನ್ನುತ್ತಾರೆ ತಜ್ಞರು. ಅದೇ ಸಮಯದಲ್ಲಿ ದೇಹದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ತಲೆನೋವು ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಸಕ್ಕರೆ ಮಟ್ಟ:

ನಿಮ್ಮ ದೇಹದಲ್ಲಿನ ಸಕ್ಕರೆ ಅಸಹಜವಾಗಿದ್ದರೆ ನೀವು ಬೆಳ್ಳಗೆ ತ್ರಾಸದಾಯಕ ಲಕ್ಷಣಗಳನ್ನು ಅನುಭವಿಸಬಹುದು. ತಲೆನೋವು ಕೂಡ ಬೆಳಗಿನ ಬೇನೆಯ ಲಕ್ಷಣವಾಗಿದೆ. ಮತ್ತೊಂದೆಡೆ, ನೀವು ತಲೆನೋವಿನೊಂದಿಗೆ ಎದ್ದರೆ ಪ್ರತಿದಿನ ಬೆಳಿಗ್ಗೆ ನಿಮ್ಮ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು.

ನಿರ್ಜಲೀಕರಣ: 

ಸಾಮಾನ್ಯವಾಗಿ ಜನರು ರಾತ್ರಿ ಹೊತ್ತಲ್ಲಿ ಅಥವಾ ಮಲಗುವ ವೇಳೆಯಲ್ಲಿ ಕಡಿಮೆ ನೀರು ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಬೆಳಗ್ಗೆ ಎದ್ದ ನಂತರ ತಲೆನೋವು ಬರುವ ಸಂಭವವಿದ್ದು, ಇದಕ್ಕೆ ಮುಖ್ಯ ಕಾರಣ ದೇಹದಲ್ಲಿ ನೀರಿನ ಕೊರತೆಯಾಗಿದೆ. ಬೆಳಿಗ್ಗೆ ಎದ್ದ ನಂತರ ಸಾಕಷ್ಟು ನೀರು ಕುಡಿಯದಿದ್ದರೆ ತಲೆನೋವು ಉಂಟಾಗುತ್ತದೆ.

ಇದನ್ನೂ ಓದಿ: ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ಉತ್ತಮ ಆರೋಗ್ಯಕ್ಕಾಗಿ ಈ 5 ಆಸನಗಳನ್ನು ಮಾಡಿ

ನಿದ್ರಾಹೀನತೆ:

ನಿದ್ರೆಯ ಕೊರತೆಯಿಂದ ಕೂಡ ಬೆಳಿಗ್ಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಅದೇ ಸಮಯದಲ್ಲಿ ಅನೇಕ ಜನರು ಒತ್ತಡದಿಂದಾಗಿ ತಲೆನೋವು ತಂದುಕೊಳ್ಳುತ್ತಾರೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರೂ ತಲೆನೋವಿನಿಂದ ಬಳಲುವ ಸಾಧ್ಯತೆ ಹೆಚ್ಚು.

ಬೆಳಿಗ್ಗೆ ತಲೆನೋವು ಇದ್ದಾಗ ಈ ಕೆಲಸಗಳನ್ನು ಮಾಡಿ:

ಬೆಳಿಗ್ಗೆ ಎದ್ದಾಗ ನಂತರ ತಣ್ಣೀರಿನ ಬದಲಿಗೆ, ನಿಂಬೆ ರಸವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ತಲೆನೋವನ್ನು ತಪ್ಪಿಸಬಹುದಾಗಿದೆ. ತಲೆನೋವು ಕಡಿಮೆಯಾಗಲು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ. ಹಾಗೆಯೇ ಸ್ವಲ್ಪ ಹೊತ್ತು ನಿದ್ರೆ, ಯೋಗ ಮತ್ತು ಧ್ಯಾನ ಮಾಡುವುದರಿಂದ ತಲೆನೋವಿನ ಸಮಸ್ಯೆ ಕಡಿಮೆ ಮಾಡಬಹುದು. ಒಂದು ವೇಳೆ ತಲೆನೋವು ಯಾವುದೇ ಕಾರಣಕ್ಕೂ ಕಡಿಮೆಯಾಗದಿದ್ದರೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.