
ನೀವು ಫಿಟ್ ಅಂಡ್ ಫೈನ್ ಆಗಿರಬೇಕೆಂದರೆ ಅದಕ್ಕೆ ಪೂರಕವಾಗುವ ಆರೋಗ್ಯಕರ ಜೀವನಶೈಲಿ (healthy lifestyle) ಬಹಳ ಮುಖ್ಯ. ಸರಿಯಾದ ಆಹಾರಪದ್ಧತಿಯಿಂದ ಹಿಡಿದು ಸರಿಯಾದ ವ್ಯಾಯಾಮಕ್ರಮದವರೆಗೆ ಎಲ್ಲವೂ ಅಗತ್ಯವೇ. ಇವತ್ತಿನ ಕಾಲದಲ್ಲಿ ಡೆಸ್ಕ್ನಲ್ಲಿ ಕೂತು ಕೆಲಸ ಮಾಡುವವರೇ ಹೆಚ್ಚು ಇರುವುದು. ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕೂತುಕೊಳ್ಳುವುದು ಅನಿವಾರ್ಯ ಎಂಬಂತಾಗಿದೆ. ಚೇರ್ನಿಂದ ಎದ್ದು ಹೋಗಿ ನೀರು ಕುಡಿಯಲೂ ಪುರುಸೊತ್ತಿಲ್ಲದಂತಿರುತ್ತದೆ. ಈ ರೀತಿ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ತಲೆನೋವು, ಭುಜದ ನೋವು ಅಥವಾ ಬೆನ್ನು ನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈ ಸಮಸ್ಯೆಗಳನ್ನು ತಪ್ಪಿಸಲು, ಸಕ್ರಿಯವಾಗಿರುವ ಜೀವನಶೈಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ.
ಹಗಲಿನಲ್ಲಿ ನಿಮಗಾಗಿ ಹೆಚ್ಚು ಸಮಯ ಕೊಡಲು ಆಗದಿದ್ದರೆ, ಬೆಳಿಗ್ಗೆ ಕೆಲವು ನಿಮಿಷಗಳಾದರೂ ವ್ಯಾಯಾಮ ಮಾಡಲು ಅಥವಾ ವಾರ್ಮಪ್ ಮಾಡಬಹುದು. ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮದೇವ್ ಕೂಡ ವಾರ್ಮ್ ಅಪ್ನ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಪ್ರತಿದಿನ ಬೆಳಿಗ್ಗೆ ಕೆಲವು ವಾರ್ಮ್ ಅಪ್ ವ್ಯಾಯಾಮಗಳನ್ನು ಮಾಡಲು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಚಳಿಗಾಲದಲ್ಲಿ ಮೂಲಂಗಿ ಹೇಗೆ ತಿನ್ನಬೇಕು, ಇದರ ಪ್ರಯೋಜನಗಳೇನು? ಬಾಬಾ ರಾಮದೇವ್ರಿಂದ ಮಾಹಿತಿ
ಯೋಗ ಗುರು ಬಾಬಾ ರಾಮದೇವ್ ಅವರು ಕನಿಷ್ಠ ಎರಡು ಸುತ್ತಿನ ಯೌಗಿಕ ಜಾಗಿಂಗ್ ಅಭ್ಯಾಸ ಮಾಡಲು ಶಿಫಾರಸು ಮಾಡುತ್ತಾರೆ. ಸೂರ್ಯ ನಮಸ್ಕಾರ ಮಾಡಬಲ್ಲವರು ಅದನ್ನು ಪೂರ್ಣವಾಗಿ ಮಾಡಬಹುದು. ಪೂರ್ಣ ಸೂರ್ಯ ನಮಸ್ಕಾರ ಮಾಡಲು ಸಾಧ್ಯವಾಗದಿದ್ದರೆ, ತಾಡಾಸನ, ತಿರ್ಯಕ್ ತಾಡಾಸನ, ಕಟಿ ಚಕ್ರಾಸನ, ತ್ರಿಕೋನಾಸನ, ಕೋನಾಸನ, ಪಾದಹಸ್ತಾಸನ ಮತ್ತು ಲಘು ವ್ಯಾಯಾಮಗಳನ್ನು ಪ್ರಯತ್ನಿಸಬಹುದು. ಒಬ್ಬರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವುಗಳನ್ನು ಅಭ್ಯಾಸ ಮಾಡಬೇಕೆನ್ನುವುದು ಬಾಬಾ ಕಿವಿಮಾತು.
ಆನಾರೋಗ್ಯದೊಂದಿಗೆ ಯಾವತ್ತೂ ರಾಜಿಯಾಗಬಾರದು. ಎಲ್ಲಾ ರೀತಿಯ ರೋಗ, ಅಂಧಕಾರ, ಅಸ್ವಸ್ಥತೆ ಮತ್ತು ದೌರ್ಬಲ್ಯವನ್ನು ಬೇರುಸಹಿತ ಕಿತ್ತುಹಾಕುವ ಧೈರ್ಯ ಹೊಂದಿರಬೇಕು ಎಂದು ಪತಂಜಲಿ ಸಂಸ್ಥಾಪಕರು ಹುರಿದುಂಬಿಸುತ್ತಾರೆ. ವ್ಯಾಯಾಮ, ಯೋಗ ಮತ್ತು ಪ್ರಾಣಾಯಾಮವನ್ನು ನಿಯಮಿತವಾಗಿ ಮತ್ತು ಮುತುವರ್ಜಿಯಿಂದ ಮಾಡುವುದು ತುಂಬಾ ಪ್ರಯೋಜನಕಾರಿ. ತಾಡಾಸನ, ತಿರ್ಯಕ್ ತಾಡಾಸನ, ಕಟಿ ಚಕ್ರಾಸನ, ತ್ರಿಕೋನಾಸನ, ಕೋನಾಸನ ಮತ್ತು ಪಾದಹಸ್ತಾಸನಗಳನ್ನು ಮಾಡುವುದು ಸುಲಭ ಎಂದೆನ್ನುತ್ತಾರೆ. ಈ ಎಲ್ಲಾ ವ್ಯಾಯಾಮಗಳು ದೇಹವನ್ನು ಸ್ಟ್ರೆಚ್ ಮಾಡಲು, ವಾರ್ಮಪ್ ಮಾಡಲು ಸಹಾಯವಾಗುತ್ತವೆ. ಪೂರ್ಣ ಯೋಗಾಸನ ಮಾಡಲು ದೇಹವನ್ನು ಸಿದ್ಧಗೊಳಿಸುತ್ತವೆ. ಈ ವ್ಯಾಯಾಮಗಳನ್ನು ಯೋಗದ ಆರಂಭವೆಂದು ಸಹ ಪರಿಗಣಿಸಬಹುದು.
ಇದನ್ನೂ ಓದಿ: ಶೀತ, ಕೆಮ್ಮು ಯಾಕೆ ಬರುತ್ತೆ? ಅದಕ್ಕೆ ಪರಿಹಾರ ಹೇಗೆ? ಬಾಬಾ ರಾಮದೇವ್ ಸಲಹೆಗಳಿವು
ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮ, ಯೋಗ ಆಸನಗಳು ಅಥವಾ ವಾರ್ಮ್-ಅಪ್‌ಗಳನ್ನು ಅಭ್ಯಾಸ ಮಾಡಬೇಕು. ನೀವು ಕಠಿಣ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಯೋಗ ಜಾಗಿಂಗ್, ಸೂರ್ಯ ನಮಸ್ಕಾರ, ಸಿಟಪ್ ಮತ್ತು ಲಘು ವ್ಯಾಯಾಮಗಳನ್ನು ಪ್ರಯತ್ನಿಸಬಹುದು. ಇವೆಲ್ಲವೂ ಸಾಧ್ಯವಾಗದಿದ್ದರೆ, ಕನಿಷ್ಠ ಐದರಿಂದ ಏಳು ರೀತಿಯ ವ್ಯಾಯಾಮಗಳು ಮತ್ತು ಐದರಿಂದ ಏಳು ರೀತಿಯ ಪ್ರಾಣಾಯಾಮಗಳನ್ನು ಮಾಡಬಹುದು. ಇವುಗಳನ್ನು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಬೇಕು ಎಂದು ಯೋಗ ಗುರುಗಳು ಶಿಫಾರಸು ಮಾಡಿದ್ದಾರೆ.
ಇಂದು ಯೋಗವನ್ನು ವಿಶ್ವಾದ್ಯಂತ ಅಳವಡಿಸಿಕೊಳ್ಳಲಾಗುತ್ತಿದೆ. ಇದು ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಭಂಗಿಯನ್ನು ಸುಧಾರಿಸುತ್ತದೆ, ಏಕಾಗ್ರತೆಯನ್ನು ಸುಧಾರಿಸುತ್ತದೆ, ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ ಮತ್ತು ದೇಹವನ್ನು ಚೈತನ್ಯಗೊಳಿಸುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಪ್ರಾಣಾಯಾಮವು ಒತ್ತಡವನ್ನು ಕಡಿಮೆ ಮಾಡಲು, ಶ್ವಾಸಕೋಶದ ಕಾರ್ಯವನ್ನು ಸುಧಾರಿಸಲು ಮತ್ತು ದೇಹದಾದ್ಯಂತ ಆಮ್ಲಜನಕದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನಿಮ್ಮ ದೇಹದ ಸಾಮರ್ಥ್ಯ ಮತ್ತು ಅಗತ್ಯಗಳಿಗೆ ಅನುಗುಣವಾಗಿ ನೀವು ಯೋಗ ಆಸನಗಳನ್ನು ಅಭ್ಯಾಸ ಮಾಡಬಹುದು. ಕಠಿಣ ಆಸನಗಳನ್ನು ಹಾಕುವ ಮೊದಲು ವಾರ್ಮಪ್ ವ್ಯಾಯಾಮಗಳು ಹಾಗೂ ಸರಳ ಯೋಗಾಸನಗಳನ್ನು ಪ್ರಯತ್ನಿಸಬಹುದು.
ಬಾಬಾ ರಾಮದೇವ್ ಅವರ ಯೂಟ್ಯೂಬ್ ವಿಡಿಯೋ
ಇನ್ನಷ್ಟು ಲೈಫ್ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:17 pm, Sun, 9 November 25