ಬಾಟಲಿ, ಫ್ಲಾಸ್ಕ್​​​​ನಿಂದ ಕೆಟ್ಟ ವಾಸನೆ ಬರುತ್ತಿದ್ದೀಯಾ? ಹೀಗೆ ಮಾಡಿ

ಬಾಟಲಿ, ಫ್ಲಾಸ್ಕ್​​​​ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದರೆ ರೋಗ ಕೂಡ ನಿಮ್ಮ ಸೇರಸಿಕೊಳ್ಳುತ್ತಿದೆ ಎಂದರ್ಥ, ಅದಕ್ಕಾಗಿ ಬಾಟಲಿ, ಫ್ಲಾಸ್ಕ್​​​​ನಿಂದ ಕೆಟ್ಟ ವಾಸನೆ ಬರಬಾರದು ಎಂದರೆ ಮಾಸ್ಟರ್‌ಶೆಫ್ ಪಂಕಜ್ ಭಡೋರಿಯಾ ಅವರ ಈ ಸಲಹೆಯನ್ನು ಪಾಲಿಸಲೇಬೇಕು. ಇವರು ಹೇಳಿರುವ ಸಲಹೆಗಳೇನು ಎಂಬದು ಇಲ್ಲಿದೆ.

ಬಾಟಲಿ, ಫ್ಲಾಸ್ಕ್​​​​ನಿಂದ ಕೆಟ್ಟ ವಾಸನೆ ಬರುತ್ತಿದ್ದೀಯಾ? ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
Edited By:

Updated on: Jun 23, 2025 | 4:40 PM

ಸೆಲೆಬ್ರಿಟಿ ಮಾಸ್ಟರ್‌ಶೆಫ್ ಪಂಕಜ್ ಭಡೋರಿಯಾ, (Pankaj Bhadoria) ಇವರು ಆಗ್ಗಾಗೆ ಕೆಲವೊಂದು ಆಹಾರಕ್ಕೆ ಸಂಬಂಧಿಸಿದ ಟಿಪ್ಸ್​​​ಗಳನ್ನು ನೀಡುತ್ತಾರೆ. ಆರೋಗ್ಯ ಹಾಗೂ ದೇಹಕ್ಕೆ ಹೊಂದಿಕೊಳ್ಳುವ ಆಹಾರಗಳ ಸಲಹೆಗಳನ್ನು ನೀಡುತ್ತಿರುತ್ತಾರೆ. ಪಂಕಜ್ ಭಡೋರಿಯಾ ಬಹಳ ಪ್ರಸಿದ್ಧ ಮಾಸ್ಟರ್‌ಶೆಫ್, ಇವರು ಈಗಾಗಲೇ, ಸ್ಟಾರ್ ಪ್ಲಸ್‌ನ ಮಾಸ್ಟರ್‌ಶೆಫ್ ಕಾರ್ಯಕ್ರಮದಲ್ಲೂ ಕೂಡ ತಮ್ಮ ಕಲೆಯನ್ನು ತೋರಿಸಿದ್ದಾರೆ ಹಾಗೂ ಒಬ್ಬ ಮಾರ್ಗದರ್ಶಕರಾಗಿ ಭಾಗಹಿಸುತ್ತಿದ್ದಾರೆ. ಇದರಲ್ಲಿ ಅವರು ಕೆಲವೊಂದು ಆಹಾರಗಳ ಬಗ್ಗೆ ಎಚ್ಚರ ಇರುವಂತೆ, ಉತ್ತಮವಾದ ಆಹಾರ ಪದ್ಧತಿಗಳು ಯಾವುದು? ಹೀಗೆಲ್ಲ ಕೆಲವೊಂದು ಸಲಹೆಯನ್ನು ನೀಡುತ್ತಾರೆ. ಇದೀಗ ಬಾಟಲಿಗಳಿಂದ ಬರುವ ವಾಸನೆಯನ್ನು (Bottle Bad Odor) ಹೇಗೆ ತೆಗೆದು ಹಾಕುವುದು, ವಾಸನೆ ಬರದಂತೆ ಮಾಡುವುದು ಹೇಗೆ ಎಂಬ ಬಗ್ಗೆ ಹೇಳಿದ್ದಾರೆ. ನೀರು ಮಾತ್ರವಲ್ಲದೆ ಹಲವು ಬಾರಿ ಲಸ್ಸಿ, ಮಜ್ಜಿಗೆ ಅಥವಾ ಜ್ಯೂಸ್ ಇತ್ಯಾದಿಗಳನ್ನು ಫ್ಲಾಸ್ಕ್‌ಗಳು ಮತ್ತು ಬಾಟಲಿಗಳಲ್ಲಿ ಇಡಲಾಗುತ್ತದೆ, ಇದರಿಂದಾಗಿ ಈ ಬಾಟಲಿಗಳು ವಾಸನೆ ಬರಲು ಪ್ರಾರಂಭಿಸುತ್ತವೆ. ಇದಕ್ಕಿಂತಲ್ಲೂ ಡಿಟಾಕ್ಸ್ ನೀರು, ಚಹಾ ಅಥವಾ ಕಾಫಿಯ ವಾಸನೆಯು ಬಾಟಲಿಗಳಿಂದ ಬೇಗನೆ ಹೋಗುವುದಿಲ್ಲ. ಅಂತಹ ಸಮಯದಲ್ಲಿ ಪಂಕಜ್ ಹೇಳಿದ ಟ್ರಿಕ್ ಉಪಯೋಗಿಸಬೇಕು.

ನೀರಿನ ಬಾಟಲಿಯಿಂದ ಕೆಟ್ಟ ವಾಸನೆ ದೂರ ಮಾಡುವುದು ಹೇಗೆ?

ನೀರಿನ ಬಾಟಲ್ ಅಥವಾ ಫ್ಲಾಸ್ಕ್ ನಿಂದ ವಾಸನೆಯನ್ನು ತೆಗೆದುಹಾಕಲು ಅಡುಗೆ ಸೋಡಾವನ್ನು ಬಳಸಬಹುದು. ಒಂದು ಚಮಚ ಬಿಳಿ ವಿನೆಗರ್ ಮತ್ತು ಒಂದು ಚಮಚ ಅಡುಗೆ ಸೋಡಾವನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಬಾಟಲಿಗೆ ಹಾಕಿ, ನಂತರ ಚೆನ್ನಾಗಿ ಶೇಕ್ ಮಾಡಿ. ಹೀಗೆ ಮಾಡಿ ನಂತರ ಬಾಟಲಿಯನ್ನು ನೀರಿನಿಂದ ತೊಳೆಯಿರಿ. ಬಾಟಲಿಯ ವಾಸನೆ ಸಂಪೂರ್ಣವಾಗಿ ಹೋಗುತ್ತದೆ.

ಇದನ್ನೂ ಓದಿ
ಟ್ರೆಂಡ್ ಆಗುತ್ತಿದೆ ಹಾಟ್‌ವೈಫಿಂಗ್, ಇದು ದೈಹಿಕ ಸಂಪರ್ಕದ ಹೊಸ ಪ್ರವೃತ್ತಿ
ಸಂಗಾತಿಗೆ ತುಂಬಾ ನಿಷ್ಠವಾಗಿರುವ ಜೀವಿಗಳಿವು
ಪರ್ಸ್‌ನಲ್ಲಿ ಹೆಂಡ್ತಿ ಫೋಟೋ ಇಟ್ಕೊಂಡ್ರೆ ಏನಾಗುತ್ತೆ ಗೊತ್ತಾ?
ಗಂಡ ತನ್ನ ಹೆಂಡ್ತಿಯ ದೌರ್ಜನ್ಯದ ವಿರುದ್ಧ ಹೇಗೆ ಕಾನೂನಿನ ಸಹಾಯ ಪಡೆಯಬಹುದು?

ಇದನ್ನೂ ಓದಿ: ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ?

ಇಲ್ಲಿದೆ ನೋಡಿ ವಿಡಿಯೋ:

ಈ ತಂತ್ರ ಪ್ರಯತ್ನಿಸಿ:

  • ಅಡಿಗೆ ಸೋಡಾ ಮತ್ತು ವಿನೆಗರ್ ಜೊತೆಗೆ, ನಿಂಬೆ ರಸವು ಬಾಟಲಿಗಳಿಂದ ವಾಸನೆಯನ್ನು ತೆಗೆದು ಹಾಕುತ್ತದೆ. ಬಾಟಲಿಯಲ್ಲಿ ನಿಂಬೆ ರಸವನ್ನು ಸಿಂಪಡಿಸಿ ಮತ್ತು ಅದಕ್ಕೆ ಸ್ವಲ್ಪ ನೀರು ಸೇರಿಸಿ, ಬಾಟಲಿಯನ್ನು ಮುಚ್ಚಿ ಜೋರಾಗಿ ಶೇಕ್ ಮಾಡಿದ ನಂತರ ತೊಳೆಯಿರಿ. ನಿಂಬೆ ಹೋಳುಗಳು ಅಥವಾ ಕಿತ್ತಳೆ ಸಿಪ್ಪೆಗಳನ್ನು ಕೂಡ ಇದಕ್ಕೆ ಬಳಸಬಹುದು.
  • ಟೀ ಬ್ಯಾಗ್‌ಗಳು ಸಹ ತುಂಬಾ ಉಪಯುಕ್ತ ನೀರಿನ ಬಾಟಲ್ ಅಥವಾ ಫ್ಲಾಸ್ಕ್‌ನಲ್ಲಿ ನೀರು ಮತ್ತು ಟೀ ಬ್ಯಾಗ್ ಅನ್ನು ಹಾಕಿ, ರಾತ್ರಿಯಿಡೀ ನೆನೆಯಲು ಬಿಡಿ. ಮರುದಿನ ಬೆಳಿಗ್ಗೆ ಈ ನೀರನ್ನು ಎಸೆಯಿರಿ. ಬಾಟಲಿಯ ವಾಸನೆ ಹೋಗಿ ಎಂದು ನೋಡಿ.
  • ಪ್ರತಿ ಕೆಲವು ದಿನಗಳಿಗೊಮ್ಮೆ ನಿಮ್ಮ ಬಾಟಲಿಗಳನ್ನು ಸೋಪು ಮತ್ತು ನೀರಿನಿಂದ ಚೆನ್ನಾಗಿ ಸ್ವಚ್ಛ ಮಾಡಿ. ಆಗಾ ವಾಸನೆ ಬರುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ