ಹೆಣ್ಣು ಮಕ್ಕಳು ಸೌಂದರ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಹೀಗಾಗಿ ತ್ವಚೆಯ ಅಂದವನ್ನು ಹೆಚ್ಚಿಸಲು ಒಂದಲ್ಲ ಒಂದು ಉತ್ಪನ್ನಗಳನ್ನು ಬಳಸುತ್ತಿರುತ್ತಾರೆ. ಆದರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಬಾಳೆಹಣ್ಣು ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುವುದಲ್ಲದೆ ಕೂದಲಿನ ಸೌಂದರ್ಯವನ್ನೂ ಹೆಚ್ಚಿಸಬಲ್ಲದು. ಇದನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಕಲೆಗಳು, ಸುಕ್ಕುಗಳು ಮತ್ತು ಮೊಡವೆಗಳು ಕಡಿಮೆ ಮಾಡಿ, ಚರ್ಮವನ್ನು ಮೃದುವಾಗಿಸುವುದಲ್ಲದೆ, ಕಾಂತಿಯುತವಾಗಿಸುತ್ತದೆ. ಈ ಬಾಳೆ ಹಣ್ಣಿನಿಂದ ತಯಾರಿಸಿದ ಫೇಸ್ ಪ್ಯಾಕ್‌ಗಳು ಚರ್ಮಕ್ಕೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿರುವ ಕಾರಣ ವಾರಕ್ಕೊಮ್ಮೆಯಾದರು ಇದನ್ನು ಟ್ರೈ ಮಾಡಬಹುದು.
* ಬಾಳೆಹಣ್ಣು ಹಾಗೂ ಜೇನು ಫೇಸ್ ಪ್ಯಾಕ್ : ಬಾಳೆಹಣ್ಣಿನ ತಿರುಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಚರ್ಮಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ತಣ್ಣನೆಯ ನೀರಿನಿಂದ ಮುಖ ತೊಳೆಯಬೇಕು.ಇದು ತ್ವಚೆಗೆ ನೈಸರ್ಗಿಕ ಹೊಳಪನ್ನು ತಂದು ಕೊಡುವುದಲ್ಲದೇ ಚರ್ಮವನ್ನು ತೇವಾಂಶವಾಗಿರಿಸುತ್ತದೆ.
* ಬಾಳೆಹಣ್ಣು ಹಾಗೂ ಮೊಸರಿನ ಫೇಸ್ ಪ್ಯಾಕ್ : ಬಾಳೆಹಣ್ಣು ಹಾಗೂ ಮೊಸರಿನ ಫೇಸ್ ಪ್ಯಾಕನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ಕಾಲ ಬಿಟ್ಟು ತೊಳೆಯಬೇಕು. ಈ ಫೇಸ್ ಪ್ಯಾಕ್ ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮುಖದಲ್ಲಿರುವ ಎಣ್ಣೆ ಮತ್ತು ಕಲೆಗಳು ಕಡಿಮೆ ಮಾಡಿ ಇದು ವಯಸ್ಸಾಗುವವುದನ್ನು ತಪ್ಪಿಸುತ್ತದೆ. ಚರ್ಮವನ್ನು ಮೃದುವಾಗಿಸುತ್ತದೆ.
* ಬಾಳೆಹಣ್ಣು ಹಾಗೂ ನಿಂಬೆ ರಸದ ಫೇಸ್ ಪ್ಯಾಕ್ : ತ್ವಚೆಯನ್ನು ಆರೋಗ್ಯವಾಗಿಡಲು ನಿಂಬೆ ಸಹಾಯ ಮಾಡುತ್ತದೆ. ಹೀಗಾಗಿ ಬಾಳೆಹಣ್ಣಿನ ತಿರುಳಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪ್ಯಾಕ್ ಅನ್ನು ಮುಖದ ಮೇಲೆಲ್ಲಾ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ..ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ತ್ವಚೆಯ ಮೇಲಿನ ಕಲೆಯೂ ಕಡಿಮೆಯಾಗಿ ಹೊಳಪು ಹೆಚ್ಚಾಗುತ್ತದೆ.
ಇದನ್ನೂ ಓದಿ: ಎಷ್ಟೇ ಪ್ರಾಬ್ಲಮ್ ಇದ್ರು ಟೆನ್ಶನ್ ಮಾಡಿಕೊಳ್ಳಬೇಡಿ ಈ ಟಿಪ್ಸ್ ಪಾಲಿಸಿ
* ಬಾಳೆಹಣ್ಣು ಮತ್ತು ಆವಕಾಡೊ ಫೇಸ್ ಪ್ಯಾಕ್ : ಬಾಳೆಹಣ್ಣು ಮತ್ತು ಅವಕಾಡೊವನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ, 20 ನಿಮಿಷಗಳ ಕಾಲ ಬಿಡಿ. ನಂತರ ಮುಖವನ್ನು ತಣ್ಣನೆಯ ನೀರಿನಿಂದ ತೊಳೆಯಬೇಕು. ಈ ಬಾಳೆಹಣ್ಣು ಮತ್ತು ಆವಕಾಡೊ ತ್ವಚೆಯನ್ನು ತೇವಾಂಶವಾಗಿರಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ