AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navaratri 2024: ನವರಾತ್ರಿ ಎರಡನೇ ದಿನ ದೇವಿಗೆ ಹೆಸರು ಬೇಳೆ ಹಲ್ವಾ ನೈವೇದ್ಯ ಅರ್ಪಿಸಿ, ಸುಲಭ ಪಾಕವಿಧಾನ ಇಲ್ಲಿದೆ

ಹಬ್ಬ ಎಂದ ಮೇಲೆ ಸಿಹಿ ತಿಂಡಿ ಹಾಗೂ ವಿಶೇಷ ಅಡುಗೆ ಇಲ್ಲದಿದ್ದರೆ ಹೇಗೆ ಅಲ್ಲವೇ, ಅದರಲ್ಲಿ ನವರಾತ್ರಿ ಹಬ್ಬ ಬಂತೆಂದರೆ ಒಂಬತ್ತು ದಿನಗಳ ಕಾಲ ಹಬ್ಬದ ಸಂಭ್ರಮವು ಜೋರಾಗಿಯೇ ಇರುತ್ತದೆ. ಹೀಗಾಗಿ ದೇವಿಗೆ ನೈವೇದ್ಯವಿಡಲು ಬಗೆ ಬಗೆ ಸಿಹಿತಿಂಡಿಗಳನ್ನು ಮಾಡಲಾಗುತ್ತದೆ. ಮನೆಯಲ್ಲಿರುವ ಐಟಂಗಳಲ್ಲೆ ದಿಢೀರ್ ಆಗಿ ಸಿಹಿ ತಿನಿಸು ಮಾಡಬೇಕೆಂದುಕೊಂಡಿದ್ದರೆ ಹೆಸರು ಬೇಳೆ ಹಲ್ವಾ ಬೆಸ್ಟ್ ಆಯ್ಕೆಯಾಗಿದೆ. ಆರೋಗ್ಯಕ್ಕೂ ಹಿತಕರವಾಗಿರುವ ಈ ಹಲ್ವಾ ರೆಸಿಪಿಯನ್ನು ಮಾಡುವುದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Navaratri 2024: ನವರಾತ್ರಿ ಎರಡನೇ ದಿನ ದೇವಿಗೆ ಹೆಸರು ಬೇಳೆ ಹಲ್ವಾ ನೈವೇದ್ಯ ಅರ್ಪಿಸಿ, ಸುಲಭ ಪಾಕವಿಧಾನ ಇಲ್ಲಿದೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Oct 03, 2024 | 5:11 PM

Share

ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಕೂಡ ಸಿಹಿ ತಿಂಡಿಯನ್ನು ಇಷ್ಟ ಪಡುತ್ತಾರೆ. ಈ ಹಬ್ಬಗಳು ಬಂತೆಂದರೆ ಸಾಕು, ಮನೆಯಲ್ಲಿ ವಿವಿಧ ಬಗೆಯ ರುಚಿಕರವಾದ ತಿಂಡಿ ತಿನಿಸುಗಳು ಸವಿಯಲು ಸಿದ್ಧವಾಗುತ್ತದೆ. ಈ ಬಾರಿಯ ನವರಾತ್ರಿಗೆ ದೇವಿಗೆ ನೈವೇದ್ಯವಿಡಲು ವಿಶೇಷವಾದ ತಿನಿಸು ಮಾಡಲು ಹೊರಟಿದ್ದರೆ ಹೆಸರು ಬೇಳೆ ಹಲ್ವಾವನ್ನು ಟ್ರೈ ಮಾಡಬಹುದು. ರಾಜಸ್ಥಾನದ ವಿಶೇಷವಾದ ಸಿಹಿತಿಂಡಿಯಾದ ಇದನ್ನು ತುಪ್ಪ, ಬೆಲ್ಲದಿಂದ ಮಾಡಲಾಗುತ್ತದೆ. ಪ್ರೊಟೀನ್ಯುಕ್ತವಾಗಿರುವ ಈ ಸಿಹಿ ತಿನಿಸು ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.

ಹೆಸರು ಬೇಳೆ ಹಲ್ವಾ ಮಾಡಲು ಬೇಕಾಗುವ ಸಾಮಗ್ರಿಗಳು

* ಒಂದು ಕಪ್ ಹೆಸರು ಬೇಳೆ

* ತುಪ್ಪ

* ರವೆ

* ಬೆಲ್ಲ

* ಏಲಕ್ಕಿ ಪುಡಿ

* ಬಾದಾಮಿ

* ನೀರು

* ಉಪ್ಪು

* ತೆಂಗಿನ ತುರಿ

ಹೆಸರು ಬೇಳೆ ಹಲ್ವಾ ಮಾಡುವ ವಿಧಾನ

* ಒಂದು ಪಾತ್ರೆಯಲ್ಲಿ ಹೆಸರು ಬೇಳೆಯನ್ನು ಹಾಕಿ 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.

* ನೆನೆದ ಬೇಳೆಯನ್ನು ನೀರಿನಿಂದ ಬೇರ್ಪಡಿಸಿ, ಕುಕ್ಕರ್ ಬೇಳೆ ಹಾಗೂ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.

* ಒಂದು ಬಾಣಲೆಗೆ ತುಪ್ಪವನ್ನು ಹಾಕಿ ಒಂದೆರಡು ಚಮಚ ರವೆ ಹಾಕಿ ಹುರಿದುಕೊಳ್ಳಿ. ಆ ಬಳಿಕ ರುಬ್ಬಿಟ್ಟ ತೆಂಗಿನ ತುರಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

* ಆ ಬಳಿಕ ಈಗಾಗಲೇ ಚೆನ್ನಾಗಿ ಬೆಂದಿರುವ ಹೆಸರು ಬೇಳೆಯನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

* ತದನಂತರದಲ್ಲಿ ಸಿದ್ಧಪಡಿಸಿಕೊಂಡ ಬೆಲ್ಲದ ಪಾಕವನ್ನು ಸೇರಿಸಿ ಸಾಧಾರಣ ಉರಿಯಲ್ಲಿ ಇದನ್ನು ಬೇಯಿಸಕೊಳ್ಳಿ.

* ಈ ಮಿಶ್ರಣ ಗಂಟು-ಗಂಟಾಗದಂತೆ ನಿರಂತರವಾಗಿ ಕೈ ಆಡಿಸುತ್ತಲೇ ಇರಬೇಕು.

* ಬಣ್ಣ ಬದಲಾಗಿ ಮಿಶ್ರಣವು ಗಟ್ಟಿಯಾಗುತ್ತಿದ್ದಂತೆ ಏಲಕ್ಕಿ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ಹೆಸರು ಬೇಳೆ ಹಲ್ವಾ ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ