ಸಾಕಷ್ಟು ಕನಸುಗಳನ್ನು ಹೊತ್ತುಕೊಂಡು ಬೆಂಗಳೂರಿಗೆ ಬರುವವರೂ ಸಾಕಷ್ಟಿದ್ದಾರೆ. ಇದೀಗಾ ಐಟಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳ ನಗರ ಎಂದೇ ಕರೆಯಬಹುದಾಗಿದೆ. ಆದ್ದರಿಂದ ಇಲ್ಲಿ ಸಾಕಷ್ಟು ಫುಡ್ ಸ್ಟ್ರೀಟ್ಗಳನ್ನು ಕಾಣಬಹುದು. ಇಲ್ಲಿ ನೀವು ಸೇವಿಸಬೇಕಾದ ಪ್ರಮುಖ ತಿಂಡಿಗಳ ಕುರಿತು ಮಾಹಿತಿ ಇಲ್ಲಿದೆ. ಚಟ್ನಿಗಳಿಂದ ತುಂಬಿದ ದಪ್ಪ ದೋಸೆಗಳಿಂದ ಹಿಡಿದು ಸಿಹಿತಿಂಡಿಗಳವರೆಗೆ, ಸಾಕಷ್ಟು ಬಗೆಗಳನ್ನು ಕಾಣಬಹುದು. ಆದರೆ ಏನನ್ನು ಪ್ರಯತ್ನಿಸಬೇಕೆಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮಗಾಗಿ ವಿಶೇಷ ರುಚಿಕರ ಆಹಾರದ ಪಟ್ಟಿ ಇಲ್ಲಿದೆ.
ದಿಲ್ಕುಶ್:
ನೀವು ಸಿಹಿ ರುಚಿಯನ್ನು ಕಡಿಮೆ ಇಷ್ಟಪಡುವವರಾಗಿದ್ದರೆ, ಈ ದಿಲ್ಕುಶ್ ಪ್ರಯತ್ನಿಸಲೇಬೇಕು. ತೆಂಗಿನಕಾಯಿ ಬೆರೆಸಿದ ಮಿಠಾಯಿಗಳ ತುಂಡುಗಳನ್ನು ಪೇಸ್ಟ್ರಿಯಲ್ಲಿ ತುಂಬಿಸಲಾಗುತ್ತದೆ ಮತ್ತು ಬೇಯಿಸಲಾಗುತ್ತದೆ. ರುಚಿಯಂತೂ ಅತ್ಯುತ್ತಮ.
ತಟ್ಟೆ ಇಡ್ಲಿ:
ವಿವಿಧ ರುಚಿಯ ಚಟ್ನಿಗಳೊಂದಿಗೆ ಸರಳವಾದ ರುಚಿಯನ್ನು ನೀಡುತ್ತದೆ. ತಟ್ಟೆ ಇಡ್ಲಿ ಎಂದರೆ ಅದೇ ಅಕ್ಕಿ ಹಿಟ್ಟನ್ನು ಬಳಸಿ ಮಾಡುವ ಒಂದು ರೀತಿಯ ಇಡ್ಲಿ.ಆದಾಗ್ಯೂ, ಇಡ್ಲಿಯ ಆಕಾರ ಮತ್ತು ಗಾತ್ರವು ವಿಭಿನ್ನವಾಗಿರುತ್ತದೆ. ಇದನ್ನು ಪೋಡಿ ಮತ್ತು ತುಪ್ಪ ಹಾಗೂ ಚಟ್ನಿ ಸಾಂಬಾರಿನೊಂದಿಗೆ ಬಡಿಸಲಾಗುತ್ತದೆ.
ಮಂಗಳೂರು ಬನ್ಸ್ :
ಹೆಸರು ಮಾತ್ರ ಮಂಗಳೂರು ಬನ್ಸ್ ಅಂತಾ ಇದ್ದರೂ ಕೂಡ, ಇದು ಬೆಂಗಳೂರಿನಲ್ಲಿ ಸಕ್ಕತ್ತ್ ಫೇಮಸ್. ಇದು ಬಾಳೆಹಣ್ಣಿನಿಂದ ಮಾಡಿದ ಸಿಹಿ, ಮೃದುವಾದ ಮತ್ತು ನಯವಾದ ಪುರಿಯಾಗಿದೆ. ಈ ಸರಳವಾಗಿ ತಯಾರಿಸಬಹುದಾದ ಮಂಗಳೂರು ಬಾಳೆಹಣ್ಣಿನ ಬನ್‌ಗಳನ್ನು ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ವಿಶಿಷ್ಟವಾಗಿ ಆನಂದಿಸಬಹುದಾಗಿದೆ.
ಇದನ್ನೂ ಓದಿ: ನೀವೊಮ್ಮೆ ಭೇಟಿ ನೀಡಲೇಬೇಕಾದ ಭಾರತದಲ್ಲಿರುವ ಸ್ವಾತಂತ್ರ್ಯ ಪೂರ್ವ ಬೇಕರಿಗಳು ಇಲ್ಲಿದೆ ನೋಡಿ
ಬೆಣ್ಣೆ ದೋಸೆ:
ದಾವಣಗೆರೆ ಬೆಣ್ಣೆ ದೋಸೆ ಎಂದೂ ಕೂಡ ಕರೆಯುತ್ತಾರೆ. ಬೆಂಗಳೂರಿನ ಸಾಕಷ್ಟು ಸ್ಟ್ರೀಟ್ ಫುಡ್ ಅಂಗಡಿಗಳಲ್ಲಿ ಬೆಣ್ಣೆ ದೋಸೆಗೆ ತುಂಬಾ ಬೇಡಿಕೆ ಇದೆ. ಆದ್ದರಿಂದ ನೀವು ಬೆಂಗಳೂರಿಗೆ ಹೊಸಬ್ಬರಾಗಿದ್ದರೆ ಒಮ್ಮೆ ಬೆಣ್ಣೆ ದೋಸೆಯ ರುಚಿ ನೋಡಿ.
ಫಿಲ್ಟರ್ ಕಾಫಿ:
ಸಾಮಾನ್ಯವಾಗಿ ಕಾಫಿ ಕೆಫೆಗಳಲ್ಲಿ ಕಾಫಿ ಸವಿಯುವುದಕ್ಕಿಂತ ಒಂದು ಸಲ ನಿಮ್ಮ ಆಫೀಸಿನ ಹತ್ತಿರದ ಚಿಕ್ಕ ಅಂಗಡಿಯಲ್ಲಿ ಕಾಫಿ ಸವಿಯಿರಿ. ಇಲ್ಲಿನ ಫಿಲ್ಟರ್ ಕಾಫಿಯ ಪರಿಮಳವು ನಿಮ್ಮನ್ನು ಒತ್ತಡದಿಂದ ಹೊರತರುತ್ತದೆ ಜೊತೆಗೆ ರುಚಿಯಂತೂ ಅದ್ಭುತ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:00 pm, Sat, 7 January 23