Old Bakeries in India : ನೀವೊಮ್ಮೆ ಭೇಟಿ ನೀಡಲೇಬೇಕಾದ ಭಾರತದಲ್ಲಿರುವ ಸ್ವಾತಂತ್ರ್ಯ ಪೂರ್ವ ಬೇಕರಿಗಳು ಇಲ್ಲಿದೆ ನೋಡಿ

ನೀವು ಸಿಹಿ ಪ್ರಿಯರಾಗಿದ್ದರೆ ಹಾಗೂ ವಿಭಿನ್ನವಾದದ್ದನ್ನು ಪ್ರಯತ್ನಿಸಲು ಬಯಸಿದರೆ, ನಾವು ಹೇಳುವ ಕೆಲವೊಂದು ಸ್ವಾತಂತ್ರ್ಯ ಪೂರ್ವ ಬೇಕರಿಗಳಿಗೆ ಭೇಟಿ ನೀಡಲೇಬೇಕು.

Old Bakeries in India : ನೀವೊಮ್ಮೆ ಭೇಟಿ ನೀಡಲೇಬೇಕಾದ ಭಾರತದಲ್ಲಿರುವ ಸ್ವಾತಂತ್ರ್ಯ ಪೂರ್ವ ಬೇಕರಿಗಳು ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರImage Credit source: iStock
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Jan 07, 2023 | 1:51 PM

ಸಾಂಪ್ರದಾಯಿಕ(Traditional) ಭಾರತೀಯ ಬೇಕರಿಯಲ್ಲಿ ಸಿಗುವ ತಿನಿಸುಗಳ ರುಚಿ ಹಾಗೂ ಸುವಾಸನೆಯು ಅದ್ಭುತವಾಗಿರುತ್ತದೆ. ಈ ಐಕಾನಿಕ್ ಬೇಕರಿಗಳು ಸ್ವಾತಂತ್ರ್ಯ ಪೂರ್ವದ ಕಾಲದ್ದು, ಹಾಗೂ ಖಂಡಿತವಾಗಿಯೂ ಭೇಟಿ ನೀಡಲು ಯೋಗ್ಯವಾಗಿದೆ.ತಾಜಾ ಬೇಯಿಸಿದ ತಿನಿಸುಗಳನ್ನು ತಿನ್ನುವುದಕ್ಕಿಂತ ತೃಪ್ತಿಕರವಾದುದು ಬೇರೇನೂ ಇಲ್ಲ. ಅದು ಚಾಕೊಲೇಟ್ ಕೇಕ್ ಆಗಿರಬಹುದು ಅಥವಾ ಪುಡ್ಡಿಂಗ್ ಆಗಿರಬಹುದು. ನಿಮ್ಮಲ್ಲಿ ಹೆಚ್ಚಿನವರು ಸಿಹಿಯಾದ ಯಾವುದನ್ನಾದರೂ ಹಂಬಲಿಸುವಾಗ ಜನಪ್ರಿಯ ಪಾಶ್ಚಿಮಾತ್ಯ ಬೇಕರಿಗಳಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ. ಇನ್ನು ಸಾಂಪ್ರದಾಯಿಕ ಭಾರತೀಯ ಬೇಕರಿಗಳಲ್ಲಿ ಸಿಗುವ ತಿಂಡಿಗಳಂತೂ ಬಾಯಲ್ಲಿ ನೀರೂರಿಸುವಂತೆ ಮಾಡುತ್ತದೆ. ಈ ಸಾಂಪ್ರದಾಯಿಕ ಭಾರತೀಯ ಬೇಕರಿಗಳು ಸ್ವಾತಂತ್ರ್ಯಪೂರ್ವದಿಂದಲೂ ಇವೆ. ನೀವು ಸಿಹಿ ಪ್ರಿಯರಾಗಿದ್ದರೆ ಹಾಗೂ ವಿಭಿನ್ನವಾದದ್ದನ್ನು ಪ್ರಯತ್ನಿಸಲು ಬಯಸಿದರೆ, ನಾವು ಹೇಳುವ ಕೆಲವೊಂದು ಸ್ವಾತಂತ್ರ್ಯ ಪೂರ್ವ ಬೇಕರಿಗಳಿಗೆ ಭೇಟಿ ನೀಡಲೇಬೇಕು.

ಭಾರತದಲ್ಲಿ ನೀವು ಪ್ರಯತ್ನಿಸಲೇಬೇಕಾದ ಸ್ವಾತಂತ್ರ್ಯಪೂರ್ವ ಬೇಕರಿಗಳು

ಮಾಂಬಳ್ಳಿಯ ರಾಯಲ್ ಬಿಸ್ಕೆಟ್ ಫ್ಯಾಕ್ಟರಿ:

ಕೇರಳದ ಮಾಂಬಳ್ಳಿಯ ರಾಯಲ್ ಬಿಸ್ಕೆಟ್ ಫ್ಯಾಕ್ಟರಿ 1880 ರಲ್ಲಿ ಪ್ರಾರಂಭವಾಗಿದ್ದು, ಕೇರಳೀಯನ್ನಿಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಇದನ್ನು ತಲಸ್ಸೆರಿಯಲ್ಲಿ ಮಾಂಬಳ್ಳಿ ಬಾಪು ಸ್ಥಾಪಿಸಿದರು. ಇದು ಕೇರಳದ ಇತಿಹಾಸದ ಮೊಟ್ಟ ಮೊದಲ ಬೇಕರಿಯಾಗಿದೆ. ಇದು ಭಾರತದ ಮೊಟ್ಟ ಮೊದಲ ಕ್ರಿಸ್‌ಮಸ್ ಕೇಕ್ ತಯಾರಿಸಿದ ಕೀರ್ತೀಗೂ ಪಾತ್ರವಾಗಿದೆ. ಬಾರ್ಲಿ ಬಿಸ್ಕಿಟ್, ಪ್ಲಮ್ ಕೇಕ್‌ನಿಂದ ಹಿಡಿದು ಸೂಪ್ ಸ್ಟಿಕ್‌ಗಳು, ವೆಜ್ ಪಫ್‌ಗಳು ಮತ್ತು ಇನ್ನು ಹೆಚ್ಚಿನ ತಾಜಾ ಬೇಯಿಸಿದ ತಿಂಡಿಗಳು ಸಿಗುತ್ತವೆ. ಈ ಐಕಾನಿಕ್ ಬೇಕರಿಗೆ ನೀವು ತಪ್ಪದೆ ಭೇಟಿ ನೀಡಲೇಬೇಕು.

ಗ್ಲೆನರಿಸ್, ಡಾರ್ಜಿಲಿಂಗ್:

ಗ್ಲೆನೆರಿಸ್ ಡಾರ್ಜಿಲಿಂಗ್‌ನ ಹೆಗ್ಗುರುತುಗಳಲ್ಲಿ ಒಂದಾಗಿದೆ. ಈ ಕೇಕ್ ಅಂಗಡಿಯ ಅಸ್ತಿತ್ವವು ಬ್ರಿಟೀಷ್ ವಸಾಹತು ವರ್ಷಗಳ ಹಿಂದಿನದು. ಹಿಂದೆ ಅದನ್ನು ವಡೋ ಎಂದು ಕರೆಯಲಾಗುತ್ತಿತ್ತು. ಭಾರತದ ಸ್ವಾತಂತ್ರ್ಯ ನಂತರ ಅದರ ಹೆಸರನ್ನು ಗ್ಲೆನೆರಿಸ್ ಎಂದು ಬದಲಾಯಿತು. ಈ ಕೆಫೆಯು ಬೆಟ್ಟಗಳ ವಿಹಂಗಮ ನೋಟವನ್ನು ನೀಡುತ್ತದೆ. ಬೆಚ್ಚಗಿನ ಒಳಾಂಗಣ ಮತ್ತು ಹಳೆಯ ಶೈಲಿಯದ್ದಾಗಿದೆ. ನೀವು ಎಂದಾದರೂ ಈ ಸ್ಥಳಕ್ಕೆ ಭೇಟಿ ನೀಡಿದರೆ, ನೀವು ಖಂಡಿತವಾಗಿಯೂ ಅವರ ಉಪಹಾರ ಸ್ಯಾಂಡ್‌ವಿಚ್, ಕೇಕ್, ಪಿಜ್ಜಾ ಹಾಗೂ ರೋಲ್‌ಗಳನ್ನು ಪ್ರಯತ್ನಿಸಬೇಕು. ಮತ್ತು ಅವರ ಪ್ರಸಿದ್ಧ ಡಾರ್ಜಿಲಿಂಗ್ ಚಹಾವನ್ನು ಮಿಸ್ ಮಾಡಿಕೊಳ್ಳಲೇಬಾರದು. ಸ್ಥಳ: ಕ್ಲಾಕ್ ಟವರ್ ಹತ್ತಿರ ನೆಹರೂ ರಸ್ತೆ, ಚೌಕ್ ಬಜಾರ್, ಡಾರ್ಜಿಲಿಂಗ್ ಪಶ್ಚಿಮ ಬಂಗಾಳ

ಕಾನ್ಪೀಟೇರಿಯಾ 31 ಡಿ ಜನೇರಿಯೋ, ಗೋವಾ:

ಸ್ವಾತಂತ್ರ್ಯ ಪೂರ್ವದ ಸಾಂಪ್ರದಾಯಿಕ ಬೇಕರಿಯಾದ ಕಾನ್ಪಿಟೇರಿಯಾ 31 ಡಿ ಜನೇರಿಯಾ, ಒಂದು ಪೋರ್ಚುಗೀಸ್ ಬೇಕರಿಯಾಗಿದೆ. ಇದು 1930 ರಿಂದ ಬೇಯಿಸಿದ ಗುಡೀಸ್‌ಗಳನ್ನು ನೀಡುತ್ತಿದೆ. ನೀವು ಹೊಸದಾಗಿ ಬೇಕಿಂಗ್ ತಿನಿಸುಗಳನ್ನು ಇಷ್ಟಪಡುವವರಾಗಿದ್ದರೆ, ಈ ಸ್ಥಳವನ್ನು ಪ್ರಯತ್ನಿಸಲೇಬೇಕು. ಈ ಬೇಕರಿಯು ವಿಂಟೇವ್ ವೈಬ್‌ನ್ನು ಹೊಂದಿದೆ ಮತ್ತು ವ್ಯಾಪಕ ಶ್ರೇಣಿಯ ಪೋರ್ಚುಗೀಸ್ ಮತ್ತು ಸ್ಥಳೀಯ ಗೋವಾದ ಸಿಹಿಭಕ್ಷ್ಯಗಳನ್ನು ನೀಡುತ್ತದೆ. ಅದರ ಮೆನುವಿನಲ್ಲಿರುವ ಪ್ರಸಿದ್ಧ ತಿನಿಸುಗಳೆಂದರೆ ಸ್ವಿಸ್‌ರೋಲ್, ಖರ್ಜೂರದ ಕೇಕ್, ವಾಲ್‌ನಟ್ ಕೇಕ್ ಮತ್ತು ಪ್ಯಾಟೀಸ್.

ಇದನ್ನೂ ಓದಿ: Festivals in January 2023: ಈ ವರ್ಷದ ಮೊದಲ ತಿಂಗಳ ಪ್ರಮುಖ ಹಬ್ಬಗಳ ಮಾಹಿತಿ ಇಲ್ಲಿದೆ

ಬೆಂಗಳೂರು ಕನೆಕ್ಷನ್ 1888, ಬೆಂಗಳೂರು:

ಬೆಂಗಳೂರು ಕನೆಕ್ಷನ್ 1888ನ್ನು ಪ್ರಿಯಾಂಕ್ ಸುಕಾನಂದ್ ಎಂಬವವರು ಸ್ಥಾಪಿಸಿದರು. 1888ರಲ್ಲಿ ಅವರ ಮುತ್ತಜ್ಜನ ಮಾಲಿಕತ್ವದ ನಾಯ್ಡು ಬೇಕರಿಯಿಂದ ಸ್ಪೂರ್ತಿ ಪಡೆದು ಇದನ್ನು ಸ್ಥಾಪಿಸಲಾಗಿದೆ. ಈ ಐಕನಿಕ್ ಬೇಕರಿಯು ಹಳೆಯ ಬೆಂಗಳೂರಿನ ರುಚಿಯನ್ನು ನೀಡುವ ಮೂಲಕ ನಗರದ ಹಳೆಯ ಕಾಲದ ರುಚಿಯನ್ನು ಕೊಡುತ್ತಿದೆ. ಕಡಲೇಕಾಯಿ ಬೆಣ್ಣೆ ಕುಕೀಸ್, ತೆಂಗಿ ಕಾಯಿ ಕುಕೀಸ್, ಐರೀಶ್ ಕಾಫಿ ಟ್ರಫಲ್ಸ್ ಮತ್ತು ಬನಾನಾ ಕ್ಯಾರಮೆಲ್ ಟೀ ಕೇಕ್ ಅವರ ಮೆನುವಿನಲ್ಲಿರುವ ಕೆಲವು ಪ್ರಸಿದ್ಧ ತಿನಿಸುಗಳಾಗಿದೆ. ಸ್ಥಳ: ಮ್ಯೂಸಿಯಂ ರಸ್ತೆ, ಶಾಂತಲಾ ನಗರ, ಅಶೋಕ್ ನಗರ ಬೆಂಗಳೂರು.

ಫ್ಲರೀಸ್, ಕೋಲ್ಕತ್ತಾ:

ಫ್ಲರೀಸ್ ಕೋಲ್ಕತ್ತಾದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಸಿದ್ಧ ಬೇಕರಿಗಳಲ್ಲಿ ಒಂದಾಗಿದೆ. 1927 ರಲ್ಲಿ ಇದನ್ನು ಸ್ಥಾಪಿಸಲಾಯಿತು. ಇದು ತಾಜಾ ಪೇಸ್ಟ್ರಿಗಳು, ಪುಡಿಂಗ್ ಮತ್ತು ಕೇಕ್‌ಗಳಂತಹ ವಿವಿಧ ರುಚಿಕರ ಭಕ್ಷ್ಯಗಳಿಗೆ ಹೆಸರುವಾಸಿಯಾಗಿದೆ. ನೀವು ಈ ಬೇಕರಿಗೆ ಭೇಟಿ ನೀಡಿದರೆ ಅವರ ಬಾದಮಿ ಪೇಸ್ಟ್ರಿ, ಬಾಬಾ ಕೇಕ್, ವಿಯೆನ್ನೀಸ್ ಕಾಫಿ ಮತ್ತು ಮೊಕಾಚಿನೊವನ್ನು ಸವಿಯಲೇಬೇಕು.

ಇದನ್ನೂ ಓದಿ: ಈ ಚಳಿಗಾಲದಲ್ಲಿ ರೋಗನಿರೋಧಕವನ್ನು ಹೆಚ್ಚಿಸುವ ಯೋಗಭಂಗಿಗಳು ಇಲ್ಲಿದೆ ನೋಡಿ

ವೆಂಗರ್ಸ್, ನವದೆಹಲಿ:

1926ರಲ್ಲಿ ಈ ಬೇಕರಿಯನ್ನು ಸ್ಥಾಪನೆ ಮಾಡಲಾಯಿತು. ನವದೆಹಲಿಯ ಅತ್ಯಂತ ಹೆಸರುವಾಸಿ ಬೇಕರಿಯಾದ ಇದರ ಸ್ವೀಸ್ ಶೈಲಿಯ ಮಿಠಾಯಿಯು ವಿಶೇಷ ಸ್ಥಾನಮಾನವನ್ನು ಪಡೆದಿದೆ. ಇದು ವ್ಯಾಪಕ ಶ್ರೇಣಿಯ ಸ್ವಿಸ್ ಶೈಲಿಯ ಪ್ಯಾಟಿಸೆರಿ ಮತ್ತು ಸುವಾಸನೆಯ ತಿಂಡಿಗಳನ್ನು ನೀಡುತ್ತದೆ, ಚಾಕೊಲೇಟ್ ಸ್ವಿಸ್ ರೋಲ್, ಮಟನ್ ಪಫ್, ಮೋಚಾ ಪೇಸ್ಟಿ, ಮಾರ್ಜಿಪಾನ್ ಮತ್ತು ವೆಜ್ ಬ್ಯಾಗೆಟ್ ಇವರ ಮೆನುವಿನ ಜನಪ್ರಿಯ ಭಕ್ಷ್ಯಗಳಾಗಿವೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: