Yoga Poses: ಈ ಚಳಿಗಾಲದಲ್ಲಿ ರೋಗನಿರೋಧಕವನ್ನು ಹೆಚ್ಚಿಸುವ ಯೋಗಭಂಗಿಗಳು ಇಲ್ಲಿದೆ ನೋಡಿ

ಆರಂಭಿಕರಿಗಾಗಿ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಹಂತ-ಹಂತದ ಯೋಗದ ಭಂಗಿಗಳನ್ನು ತಿಳಿಸಿಕೊಡುತ್ತೇವೆ.

Yoga Poses: ಈ ಚಳಿಗಾಲದಲ್ಲಿ ರೋಗನಿರೋಧಕವನ್ನು ಹೆಚ್ಚಿಸುವ ಯೋಗಭಂಗಿಗಳು ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 07, 2023 | 7:06 AM

ವ್ಯಾಯಾಮವು ನಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಮತ್ತು ನೀವು ಸರಿಯಾದ ವ್ಯಾಯಾಮವನ್ನು ಆರಿಸಿದರೆ, ಅದು ನಿಮ್ಮ ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶ್ವಾಸಕೋಶದ ಬಲವನ್ನು ನಿರ್ಮಿಸಲು ಯೋಗವು ಅತ್ಯುತ್ತಮ ಮಾರ್ಗವಾಗಿದೆ. ಇದು ಚಳಿಗಾಲದಲ್ಲಿ ನಿಮ್ಮ ವಿವಿಧ ಸಾಂಕ್ರಾಮಿಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಸಾಂಪ್ರದಾಯಿಕ ಭಾರತೀಯ ವ್ಯಾಯಾಮ ಅನೇಕ ಆರೋಗ್ಯ ಪ್ರಯೋಜನಗಳನ್ನು ವಿಜ್ಞಾನವು ಧೃಡಪಡಿಸಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಶ್ವಾಸಕೋಶದ ಸ್ನಾಯುಗಳನ್ನು ಬಲಪಡಿಸಲು ಸರಳವಾದ ಯೋಗ ಭಂಗಿಗಳನ್ನು ಅಭ್ಯಾಸ ಮಾಡಬಹುದು. ಆರಂಭಿಕರಿಗಾಗಿ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಹಂತ-ಹಂತದ ಯೋಗದ ಭಂಗಿಗಳ ಬಗ್ಗೆ ತಿಳಿಸಿಕೊಡುತ್ತೇವೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆರಂಭಿಕ

ಯೋಗ ಭಂಗಿಗಳು:

ಭುಜಂಗಾಸನ (ನೆಲಕ್ಕೆ ಮುಖ ಮಾಡಿ, ಮಲಗಿ: ಈಗ, ನಿಮ್ಮ ಅಂಗೈಗಳನ್ನು ನಿಮ್ಮ ಬದಿಗಳಲ್ಲಿ ಇರಿಸಿ ಮತ್ತು ನಿಧಾನವಾಗಿ ಮುಂಡವನ್ನು ಮೇಲಕ್ಕೆತ್ತಿ ಈ ಹಂತದಲ್ಲಿ, ನೆಲವನ್ನು ಸ್ಪರ್ಶಿಸುವ ಏಕೈಕ ದೇಹದ ಭಾಗಗಳು ನಿಮ್ಮ ಅಂಗೈಗಳು ಮತ್ತು ದೇಹದ ಕೆಳ ಭಾಗವಾಗಿರವೇಕು. ಈ ಭಂಗಿಯಲ್ಲಿ 30 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ. ದಿನಕ್ಕೆ 3-4 ಬಾರಿ ಪುನರಾವರ್ತಿಸಿ

ಅಧೋ ಮುಖ ಸ್ವನಾಸನ(ನೆಲಕ್ಕೆ ಮುಖಮಾಡಿ ನೆಲದ ಚಪ್ಪಟೆಯಾಗಿ ಮಲಗಿಕೊಳ್ಳಿ): ನಿಮ್ಮ ಮುಂಡವನ್ನು ನಿಧಾನವಾಗಿ ಮೇಲಕ್ಕೆತ್ತಿ ಮತ್ತು ನಿಮ್ಮ ದೇಹದಲ್ಲಿ ಪರ್ವತದಂತಹ ರಚನೆಯನ್ನು ರೂಪಿಸಿ. ನಿಮ್ಮ ಅಂಗೈಗಳು ಹೆಚ್ಚು ದೂರದಲ್ಲಿರಬೇಕು. ನಿಮ್ಮ ಪಾದಗಳು ಪರಸ್ಪರ ಪಕ್ಕದಲ್ಲಿ ಇರಬೇಕಾಗುತ್ತದೆ. ಈ ಹಂತದಲ್ಲಿ ನೆಲವನ್ನು ಸ್ಪರ್ಶಿಸುವ ದೇಹದ ಭಾಗಗಳು ಅಂಗೈ ಮತ್ತು ಪಾದಗಳಾಗಿರಬೇಕು. ನಿಮ್ಮ ಮುಖವು ತೋಳುಗಳಂತೆಯೇ ಅದೇ ಕೋನದಲ್ಲಿ ಒಳಮುಖವಾಗಿ ಮತ್ತು ಕೆಳಮುಖವಾಗಿರಬೇಕು. ಕನಿಷ್ಠ 10 ಬಾರಿ ಆ ಆಸನವನ್ನು ಪುನರಾವರ್ತಿಸಿ.

ಉತ್ತಾನಾಸನ(ನೇರವಾಗಿ ನಿಲ್ಲಿ): ಈಗ ನಿಧಾನವಾಗಿ ಮುಂದಕ್ಕೆ ಬಾಗಿ, ಅರ್ಧದಷ್ಟು ಬಾಗಿ ನಿಮ್ಮ ಅಂಗೈಗಳನ್ನು ನೆಲದ ಮೇಲೆ ಇಡಬೇಕು. ನೆಲವನ್ನು ಮುಟ್ಟುವಂತೆ ಬಾಗಲು ಸಾಧ್ಯವಾಗದಿದ್ದರೆ ನಿಮ್ಮ ಕಾಲ್ಬೆರಳುಗಳನ್ನು ಸ್ಪರ್ಶಿಸಿದರೆ ಸಾಕಾಗುತ್ತದೆ.

ಪಶ್ಚಿಮೋತ್ತನಾಸನ( ಕಾಲುಗಳನ್ನು ಚಾಚಿ ನೇರವಾಗಿ ಕುಳಿತುಕೊಳ್ಳಿ): ನಿಧಾನವಾಗಿ ನಿಮ್ಮ ಮುಂಡವನ್ನು ನಿಮ್ಮ ಕಾಲುಗಳಿಗೆ ಹತ್ತಿರವಾಗುವಂತೆ ತನ್ನಿ. ಪಾದಗಳನ್ನು ಹಿಡಿಯಲು ಕೈಗಳನ್ನು ಬಳಸಬಹುದು. ಈ ಸ್ಥಿತಿಯಲ್ಲಿ ನಿಮ್ಮ ಹೊಟ್ಟೆ ಮತ್ತು ಎದೆಯು ನಿಮ್ಮ ತೊಡೆಯನ್ನು ಸ್ಪರ್ಶಿಸುತ್ತಿರಬೇಕು.

ಇದನ್ನು ಓದಿ:Yoga Benefits : 49 ವರ್ಷದವರೂ ಇನ್ನೂ ಅದೇ ಫಿಟ್ನೆಸ್ ಮೈಂಟೇನ್ ಮಾಡುತ್ತಿರುವ ಮಲೈಕಾ ಅರೋರಾ

ಬಾಲಾಸನ (ನಿಮ್ಮ ಕಾಲುಗಳನ್ನು ಮಡಚಿ ನೇರವಾಗಿ ಕುಳಿತುಕೊಳ್ಳಿ): ಈ ಹಂತದಲ್ಲಿ ನಿಮ್ಮ ಪಾದಗಳು ಮೇಲ್ಮುಖವಾಗಿ ಇರುತ್ತದೆ. ಈಗ ನಿಧಾನವಾಗಿ ನಿಮ್ಮ ಮುಂಡವನ್ನು ನೆಲದ ಮೇಲೆ ಮುಂದಕ್ಕೆ ಬಾಗಿಸಿ, ನಿಮ್ಮ ಕಣೆ ಮತ್ತು ಅಂಗೈಗಳು ಈ ಸ್ಥಾನದಲ್ಲಿ ನೆಲವನ್ನು ಸ್ಪರ್ಶಿಸಬೇಕು. ಇದು ನಿಮ್ಮ ದೇಹವನ್ನು ಮಾತ್ರ ವಿಸ್ತರಿಸುವುದರಿಂದ ಮತ್ತು ವಿಶ್ರಾಂತಿ ಭಂಗಿಯಾಗಿರುವುದರಿಂದ ಇದು ಆರಾಮ ಮತ್ತು ವಿಶ್ರಾಂತಿ ನೀಡುತ್ತದೆ.

ಧನುರಾಸನ: ನಿಮ್ಮ ಹೊಟ್ಟೆಯ ಮೇಲೆ ಮಲಗಿಕೊಳ್ಳಿ, ಕೈಗಳನ್ನು ಬದಿಯಲ್ಲಿ ಇರಿಸಿ ಹಾಗೂ ಕಾಲುಗಳನ್ನು ನೇರವಾಗಿ ಇರಿಸಿ. ನಿಮ್ಮ ಮೊಣಕಾಲುಗಳನ್ನು ಹಿಂದಕ್ಕೆ ಬಗ್ಗಿಸುವಾಗ ನಿಮ್ಮ ಪಾದಗಳನ್ನು ಪೃಷ್ಠದ ಹತ್ತಿರಕ್ಕೆ ತನ್ನಿ, ನಿಮ್ಮ ಹಿಂಬದಿಯ ತೋಳಿನಿಂದ ನಿಮ್ಮ ಕಣಕಾಲುಗಳನ್ನು ನಿಧಾನವಾಗಿ ಹಿಡಿಯಿರಿ. ನಿಮ್ಮ ಪಾದಗಳು ನಿಮ್ಮ ತಲೆಗೆ ಹತ್ತಿರವಾಗುವಂತೆ ನಿಮ್ಮ ತೊಡೆಗಳನ್ನು ಸ್ವಲ್ಪ ಮೇಲಕ್ಕೆ ಎತ್ತಿ, ಒಂದೇ ಕ್ಷಣದಲ್ಲಿ ನಿಮ್ಮ ತಲೆ ಮತ್ತು ಎದೆಯನ್ನು ಮೇಲಕ್ಕೆತ್ತಿ.

4-5 ಬಾರಿ ಉಸಿರಾಟವನ್ನು ನಿರ್ವಹಿಸಿ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಚಳಿಗಾಲದಲ್ಲಿ ನಿಮ್ಮ ವ್ಯಾಯಾಮದ ದಿನಚರಿಯಲ್ಲಿ ಈ ಯೋಗಭಂಗಿಗಳನ್ನು ಸೇರಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ