AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀಚ್ ವೆಕೇಶನ್‌ಗೆ ಹೋಗ್ತಿದ್ದೀರಾ? ಬ್ಯಾಗ್ ಪ್ಯಾಕ್ ಮಾಡುವಾಗ ಈ ವಸ್ತುಗಳನ್ನು ಮರೆಯಬೇಡಿ!

ಬೀಚ್ ವೆಕೇಶನ್‌ಗೆ ಹೊರಡುವ ಮುನ್ನ ಪ್ಯಾಕಿಂಗ್ ಸರಿಯಾಗಿದ್ದರೆ ಪ್ರವಾಸ ಇನ್ನಷ್ಟು ಆರಾಮದಾಯಕವಾಗುತ್ತದೆ. ಬಟ್ಟೆಗಳ ಜೊತೆಗೆ ಸನ್‌ಸ್ಕ್ರೀನ್, ಸನ್‌ಗ್ಲಾಸ್, ಹ್ಯಾಟ್, ಜಿಪ್‌ಲಾಕ್ ಬ್ಯಾಗ್, ಆರಾಮದಾಯಕ ಫುಟ್‌ವೇರ್, ವಾಟರ್‌ಪ್ರೂಫ್ ಪೌಚ್ ಮತ್ತು ಅಗತ್ಯ ವಸ್ತುಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ. ಬೀಚ್‌ನಲ್ಲಿ ಸೂರ್ಯನಿಂದ, ನೀರಿನಿಂದ ಮತ್ತು ಮರಳಿನಿಂದ ನಿಮ್ಮ ವಸ್ತುಗಳನ್ನು ರಕ್ಷಿಸಿಕೊಳ್ಳಲು ಈ ಸ್ಮಾರ್ಟ್ ಪ್ಯಾಕಿಂಗ್ ಟಿಪ್ಸ್ ಸಹಾಯ ಮಾಡುತ್ತವೆ.

ಬೀಚ್ ವೆಕೇಶನ್‌ಗೆ ಹೋಗ್ತಿದ್ದೀರಾ? ಬ್ಯಾಗ್ ಪ್ಯಾಕ್ ಮಾಡುವಾಗ ಈ ವಸ್ತುಗಳನ್ನು ಮರೆಯಬೇಡಿ!
Beach Vacation Packing TipsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on:Sep 29, 2026 | 8:22 PM

Share

ಸಮುದ್ರದ ಅಲೆಗಳ ಸದ್ದು, ತಂಪಾದ ಗಾಳಿ, ಬಿಳಿ ಮರಳಿನ ಮೇಲೆ ವಾಕಿಂಗ್, ಸೂರ್ಯಾಸ್ತದ ಸುಂದರ ದೃಶ್ಯಗಳು… ಬೀಚ್ ವೆಕೇಶನ್ ಎಂದರೆ ಮನಸ್ಸಿಗೆ ಒಂಥರಾ ರಿಫ್ರೆಶಿಂಗ್ ಅನುಭವ. ಗೋವಾ, ಕೇರಳ ಅಥವಾ ದೇಶದ ಬೇರೆ ಯಾವುದೇ ಬೀಚ್ ಡೆಸ್ಟಿನೇಶನ್‌ಗೆ ಹೋಗುವ ಪ್ಲಾನ್ ಮಾಡುತ್ತಿದ್ದರೆ, ಪ್ರವಾಸದ ಮಜಾ ಹೆಚ್ಚಿಸಲು ಪ್ಯಾಕಿಂಗ್ ಕೂಡ ಸರಿಯಾಗಿರಬೇಕು. ಬಟ್ಟೆ, ಟೂತ್‌ಬ್ರಶ್, ಚಾರ್ಜರ್‌ಗಳ ಜೊತೆಗೆ ಬೀಚ್‌ನಲ್ಲಿ ನಿಜವಾಗಿಯೂ ಉಪಯೋಗವಾಗುವ ಕೆಲವು ವಸ್ತುಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಅದು ಯಾವುದು, ಇದು ಏಕೆ ಮುಖ್ಯವಾಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜಿಪ್‌ಲಾಕ್ ಬ್ಯಾಗ್ ಮರೆಯಬೇಡಿ

ಬೀಚ್‌ಗೆ ಹೋದಾಗ ಮೊಬೈಲ್, ಹಣ, ಚಾವಿ, ಹೆಡ್‌ಫೋನ್‌ಗಳಂತಹ ವಸ್ತುಗಳನ್ನು ನೀರು ಮತ್ತು ಮರಳಿನಿಂದ ರಕ್ಷಿಸುವುದು ಕಷ್ಟವಾಗಬಹುದು. ಹೀಗಾಗಿ ಎರಡು ಅಥವಾ ಮೂರು ಜಿಪ್‌ಲಾಕ್ ಬ್ಯಾಗ್‌ಗಳನ್ನು ಕೊಂಡೊಯ್ಯಿರಿ. ಸಣ್ಣ ವಸ್ತುಗಳನ್ನು ಸುರಕ್ಷಿತವಾಗಿ ಇಡಲು ಇವು ತುಂಬಾ ಉಪಯುಕ್ತವಾಗುತ್ತದೆ.

ಹ್ಯಾಟ್ ಮತ್ತು ಸನ್‌ಗ್ಲಾಸ್‌ಗಳು ಇರಲಿ

ಬೀಚ್ ಟ್ರಿಪ್‌ಗೆ ಸ್ಟೈಲಿಶ್ ಹ್ಯಾಟ್ ಮತ್ತು ಸನ್‌ಗ್ಲಾಸ್‌ಗಳು ಲುಕ್ ಹೆಚ್ಚಿಸುವುದಷ್ಟೇ ಅಲ್ಲ, ಬಿಸಿಲಿನಿಂದ ರಕ್ಷಣೆ ಪಡೆಯಲೂ ಸಹಾಯ ಮಾಡುತ್ತವೆ. ಅಗಲವಾದ ಬ್ರಿಮ್ ಇರುವ ಹ್ಯಾಟ್ ಮುಖ, ಕುತ್ತಿಗೆ ಮತ್ತು ತಲೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡಲು ಸಹಾಯ ಮಾಡುತ್ತದೆ.

ಬೀಚ್‌ಗೆ ಸೂಕ್ತವಾದ ಬಟ್ಟೆ ಪ್ಯಾಕ್ ಮಾಡಿ

ಹೆಚ್ಚು ಬಿಸಿ ಇರುವ ಪ್ರದೇಶಕ್ಕೆ ಹೋಗುತ್ತಿದ್ದರೆ ಕಾಟನ್ ಅಥವಾ ಲಿನನ್ ಬಟ್ಟೆಗಳನ್ನು ಆಯ್ಕೆ ಮಾಡುವುದು ಆರಾಮದಾಯಕ. ಶಾರ್ಟ್ಸ್, ಟ್ಯಾಂಕ್ ಟಾಪ್‌ಗಳು, ಲೂಸ್ ಶರ್ಟ್‌ಗಳು, ಲಿನನ್ ಪ್ಯಾಂಟ್‌ಗಳು, ಮ್ಯಾಕ್ಸಿ ಡ್ರೆಸ್‌ಗಳು ಮತ್ತು ಕವರ್-ಅಪ್‌ಗಳನ್ನು ಪ್ಯಾಕ್ ಮಾಡಬಹುದು. ವಾಟರ್ ಆಕ್ಟಿವಿಟಿಗಳಲ್ಲಿ ಭಾಗವಹಿಸುವ ಪ್ಲಾನ್ ಇದ್ದರೆ ಸೂಕ್ತವಾದ ಸ್ವಿಮ್‌ವೇರ್ ಕೂಡ ತೆಗೆದುಕೊಂಡು ಹೋಗಿ. ಹೆಚ್ಚುವರಿ ಬಟ್ಟೆಗಳ ಒಂದು ಸೆಟ್ ಇಟ್ಟುಕೊಳ್ಳುವುದನ್ನು ಮರೆಯಬೇಡಿ.

ಸನ್‌ಸ್ಕ್ರೀನ್ ಕಡ್ಡಾಯ

ಬೀಚ್ ವೆಕೇಶನ್‌ನಲ್ಲಿ ಸನ್‌ಸ್ಕ್ರೀನ್ ನಿಮ್ಮ ಬ್ಯಾಗ್‌ನ ಪ್ರಮುಖ ವಸ್ತುಗಳಲ್ಲಿ ಒಂದಾಗಿರಬೇಕು. ಹೊರಗಡೆ ಹೆಚ್ಚು ಸಮಯ ಕಳೆಯುವಾಗ ಸೂರ್ಯನ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸೂಕ್ತವಾದ ಸನ್‌ಸ್ಕ್ರೀನ್ ಬಳಸಿ. ಈಜಿದ ನಂತರ ಅಥವಾ ಬೆವರು ಹೆಚ್ಚಾದಾಗ ಹಚ್ಚುವುದು ಅಗತ್ಯವಾಗಬಹುದು. ಅಲೋವೆರಾ ಜೆಲ್ ಅಥವಾ ಮಾಯಿಶ್ಚರೈಸರ್ ಕೂಡ ಜೊತೆಯಲ್ಲಿದ್ದರೆ ಬಿಸಿಲಿನಿಂದ ಚರ್ಮಕ್ಕೆ ಉಂಟಾಗುವ ಒಣತನ ಅಥವಾ ಅಸ್ವಸ್ಥತೆಯ ಸಂದರ್ಭದಲ್ಲಿ ಉಪಯೋಗವಾಗಬಹುದು.

ಸರಿಯಾದ ಫುಟ್‌ವೇರ್ ಆಯ್ಕೆ ಮಾಡಿ

ಬೀಚ್‌ನಲ್ಲಿ ನಡೆಯಲು ಆರಾಮದಾಯಕವಾದ ಫ್ಲಾಟ್ ಸ್ಯಾಂಡಲ್ಸ್ ಅಥವಾ ಫ್ಲಿಪ್-ಫ್ಲಾಪ್ಸ್ ಸೂಕ್ತ. ಕೇವಲ ಫ್ಯಾಷನ್‌ಗಾಗಿ ಶೂಗಳನ್ನು ತೆಗೆದುಕೊಂಡು ಹೋಗಬೇಡಿ. ಹೆಚ್ಚು ವಾಕಿಂಗ್ ಮಾಡುವ ಪ್ಲಾನ್ ಇದ್ದರೆ ಆರಾಮದಾಯಕ ಸ್ನೀಕರ್ಸ್ ಕೂಡ ಬ್ಯಾಗ್‌ನಲ್ಲಿ ಇರಲಿ.

ಇನ್ನೂ ಕೆಲವು ಸ್ಮಾರ್ಟ್ ಪ್ಯಾಕಿಂಗ್ ಟಿಪ್ಸ್

ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಿಗೆ ವಾಟರ್‌ಪ್ರೂಫ್ ಪೌಚ್, ಸಣ್ಣ ಟವೆಲ್, ಮರುಬಳಕೆ ಮಾಡಬಹುದಾದ ನೀರಿನ ಬಾಟಲಿ, ಪವರ್ ಬ್ಯಾಂಕ್, ವೈಯಕ್ತಿಕ ಔಷಧಿಗಳು ಮತ್ತು ಅಗತ್ಯವಾದ ವೈಯಕ್ತಿಕ ಆರೈಕೆ ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳಿ.

ಬೀಚ್ ವೆಕೇಶನ್‌ನಲ್ಲಿ ಹೆಚ್ಚು ವಸ್ತುಗಳನ್ನು ತುಂಬಿಕೊಳ್ಳುವುದಕ್ಕಿಂತ, ನಿಜವಾಗಿಯೂ ಬೇಕಾಗುವ ವಸ್ತುಗಳನ್ನು ಸರಿಯಾಗಿ ಆಯ್ಕೆ ಮಾಡುವುದು ಮುಖ್ಯ. ಹೀಗೆ ಮುಂಚಿತವಾಗಿ ಪ್ಯಾಕಿಂಗ್ ಮಾಡಿಕೊಂಡರೆ ಪ್ರವಾಸದ ಸಮಯದಲ್ಲಿ ಅನಗತ್ಯ ಟೆನ್ಶನ್ ಕಡಿಮೆಯಾಗುತ್ತದೆ. ಆಗ ನೀವು ಬ್ಯಾಗ್ ಬಗ್ಗೆ ಯೋಚಿಸುವ ಬದಲು ಸಮುದ್ರದ ಅಲೆಗಳು, ಸುಂದರ ದೃಶ್ಯಗಳು ಮತ್ತು ನಿಮ್ಮ ವೆಕೇಶನ್‌ನ ಪ್ರತಿಯೊಂದು ಕ್ಷಣವನ್ನೂ ಎಂಜಾಯ್ ಮಾಡಬಹುದು. ಹಾಗಿದ್ರೆ ಇನ್ನೇಕೆ ತಡ ನಿಮ್ಮ ಬ್ಯಾಗ್ ಪ್ಯಾಕ್ ಮಾಡಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳಿ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Published On - 8:21 pm, Tue, 29 September 26

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More