ಮದುವೆಯ ದಿನ ವಧುವಿನ ಅಂದವನ್ನು ಹೆಚ್ಚಿಸಲು, ತಿಂಗಳುಗಳ ಮುನ್ನವೇ ಈ ಜೀವನಶೈಲಿ ರೂಢಿಸಿ
ಮದುವೆಯಂದು ಸುಂದರವಾಗಿ ಕಾಣಲು ಮಾಡುವ ಮೇಕ್ಅಪ್ ಮಾತ್ರ ಮುಖ್ಯ ಅಲ್ಲ, ಬದಲಾಗಿ ತಿಂಗಳುಗಳ ಮುಂಚೆಯಿಂದಲೇ ನೀವು ಜೀವನಶೈಲಿಯಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನು ಮಾಡಿಕೊಂಡರೆ ನೈಸರ್ಗಿಕವಾಗಿ ಸೌಂದರ್ಯವನ್ನು ಪಡೆಯಬಹುದು.
ಪ್ರತೀ ವಧುವಿಗೆ ತಾನು ಮದುವೆಯ ದಿನ ಅತ್ಯಂತ ಸುಂದರವಾಗಿ ಕಾಣಬೇಕು ಎಂಬ ಕನಸಿರುತ್ತದೆ. ಆದರೆ ಮದುವೆಯಂದು ಸುಂದರವಾಗಿ ಕಾಣಲು ಮಾಡುವ ಮೇಕ್ಅಪ್ ಮಾತ್ರ ಮುಖ್ಯ ಅಲ್ಲ, ಬದಲಾಗಿ ತಿಂಗಳುಗಳ ಮುಂಚೆಯಿಂದಲೇ ನೀವು ಜೀವನಶೈಲಿಯಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನು ಮಾಡಿಕೊಂಡರೆ ನೈಸರ್ಗಿಕವಾಗಿ ಸೌಂದರ್ಯವನ್ನು ಪಡೆಯಬಹುದು. ನೀವು ನೈಸರ್ಗಿಕ ಹೊಳಪನ್ನು ಪಡೆಯಲು , ನೀವು ಆರೋಗ್ಯಕರವಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ಅಗತ್ಯ. ಮದುವೆ ಕನಿಷ್ಟ ಆರು ವಾರಗಳ ಮೊದಲು ನಿಮ್ಮ ಚರ್ಮವನ್ನು ಆರೋಗ್ಯವಾಗಿಟ್ಟುಕೊಳ್ಳಲು ಈ ಸಲಹೆಗಳನ್ನು ಪಾಲಿಸಿ.
ವಧುವಿನ ಆಹಾರಕ್ರಮ:
- ಆಲ್ಕೋಹಾಲ್ ತಪ್ಪಿಸಿ
- ನೀರು,ತಾಜಾ ಹಣ್ಣಿನ ರಸಗಳನ್ನು ಹೆಚ್ಚು ಕುಡಿಯಿರಿ
- ನಿಮ್ಮ ಆಹಾರದಲ್ಲಿ ಪ್ರತಿದಿನ ಕನಿಷ್ಠ ಐದು ಹಣ್ಣುಗಳನ್ನು ಸೇರಿಸಿ.
ವಧುವಿನ ಡಾರ್ಕ್ ಸರ್ಕಲ್ ನಿವಾರಣೆಗಾಗಿ:
ಮದುವೆಯ ಸಂಭ್ರಮದ ಸಮಯದಲ್ಲಿ ಸಾಕಷ್ಟು ಒತ್ತಡದ ಜೀವನಶೈಲಿ ಇರುವುದರಿಂದ ನಿದ್ದೆಯು ಕಡಿಮೆಯಾಗಬಹುದು. ಆದರೆ ನಿಮ್ಮ ಆರೋಗ್ಯ ಹಾಗೂ ಸೌಂದರ್ಯದ ದೃಷ್ಟಿಯಿಂದ ಸರಿಯಾಗಿ ನಿದ್ದೆ ಮತ್ತು ವಿಶ್ರಾಂತಿ ಅಗತ್ಯವಾಗಿರುತ್ತದೆ. ನಿದ್ದೆಗೆ ಸರಿಯಾದ ಸಮಯ ಮೀಸಲಿಡುವುದರಿಂದ ನೈಸರ್ಗಿಕವಾಗಿ ಡಾರ್ಕ್ ಸರ್ಕಲ್ ಸಮಸ್ಯೆಯನ್ನು ನಿವಾರಿಸಬಹುದು.
ಇದನ್ನೂ ಓದಿ: ನಿಮ್ಮ ಸಂಗಾತಿಯ ಸುರಕ್ಷಿತ ಭಾವನೆಗಳಿಗೆ ನೀವು ಹೇಗೆ ಸಹಾಯ ಮಾಡಬಹುದು? ಇಲ್ಲಿದೆ ತಜ್ಞರ ಸಲಹೆ
ವಧುವಿನ ಚರ್ಮದ ಕಾಂತಿಗಾಗಿ:
1 ಟೀಸ್ಪೂನ್ ಹಾಲು,1 ಟೀಸ್ಪೂನ್ ಜೇನುತುಪ್ಪ ಮತ್ತ ಬಾದಾಮಿಯನ್ನು ಸೇರಿಸಿ ಚೆನ್ನಾಗಿ ಪೇಸ್ಟ್ ಮಾಡಿ ಮುಖ, ಬೆನ್ನು ಹಾಗೂ ಕೈ ಕಾಲುಗಳಿಗೆ ಹಚ್ಚಿ. 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ವಧುವಿನ ಕೂದಲಿನ ಆರೈಕೆಗಾಗಿ:
ಭೃಂಗರಾಜ್ ಎಣ್ಣೆ ಕೂದಲಿಗೆ ಮಸಾಜ್ ಮಾಡಿ. ಇದು ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ರಾಮಬಾಣವಾಗಿದೆ. ಇದಲ್ಲದೇ ಹೇರ್ ಪೇಸ್ಟ್ ಕೂಡ ತಯಾರಿಸಬಹುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ 1 ಹಿಸುಕಿದ ಆವಕಾಡೊವನ್ನು ಸ್ವಲ್ಪ ಹಾಲು ಮತ್ತು 1 ಟೀಸ್ಪೂನ್ ಶುದ್ಧ ದೇಸಿ ತುಪ್ಪ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 30 ನಿಮಿಷಗಳ ವರೆಗೆ ಹಾಗೆಯೇ ಬಿಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: