ಮುಖದ ಕೂದಲನ್ನು ನೈಸರ್ಗಿಕವಾಗಿ ತೆಗೆದು ಹಾಕಲು ಸಿಂಪಲ್​ ಟಿಪ್ಸ್

ಮಹಿಳೆಯರಲ್ಲಿ ಮುಖದ ಕೂದಲು ಸೌಂದರ್ಯವನ್ನೇ ಹಾಳು ಮಾಡುತ್ತದೆ. ಆದ್ದರಿಂದ ಮನೆಯಲ್ಲೇ ಸಿಗುವ ಪದಾರ್ಥಗಳ ಮೂಲಕ ಮುಖದ ಮೇಲಿನ ಅನಗತ್ಯ ಕೂದಲನ್ನು ಹೇಗೆ ತೆಗೆದುಹಾಕಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮುಖದ ಕೂದಲನ್ನು ನೈಸರ್ಗಿಕವಾಗಿ ತೆಗೆದು ಹಾಕಲು ಸಿಂಪಲ್​ ಟಿಪ್ಸ್
Reduce Facial Hair
Follow us
ಅಕ್ಷತಾ ವರ್ಕಾಡಿ
|

Updated on: Oct 06, 2024 | 8:53 PM

ಮುಖದ ಕೂದಲನ್ನು ತೆಗೆಯಲು ಮಹಿಳೆಯರು ರೇಜರ್ ಮತ್ತು ಅನೇಕ ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ. ಇದು ಕೆಲವೊಮ್ಮೆ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಹಾಗಾದರೆ ಮನೆಯಲ್ಲೇ ಸಿಗುವ ಪದಾರ್ಥಗಳ ಮೂಲಕ ಅನಗತ್ಯ ಮುಖದ ಕೂದಲನ್ನು ಹೇಗೆ ತೆಗೆದುಹಾಕಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕಾಫಿ ಮತ್ತು ಅರಿಶಿನ:

ಅಡುಗೆಮನೆಯಲ್ಲಿ ಲಭ್ಯವಿರುವ ಕಾಫಿ ಮತ್ತು ಅರಿಶಿನವು ಅನಗತ್ಯ ಮುಖದ ಕೂದಲನ್ನು ತೆಗೆದುಹಾಕಲು ಉಪಯುಕ್ತವಾಗಿದೆ. ಇದಕ್ಕಾಗಿ ನೀವು ಪಾರ್ಲರ್‌ಗೆ ಹೋಗಿ ಸಾಕಷ್ಟು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. 1 ಚಮಚ ಕಾಫಿ ಪುಡಿಯನ್ನು ಸ್ವಲ್ಪ ನೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದರ ನಂತರ ಅದಕ್ಕೆ ಅರಿಶಿನ ಸೇರಿಸಿ. ನಂತರ ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀರನ್ನು ಸೇರಿಸಿ ಮತ್ತು ಪೇಸ್ಟ್ ಆಗಿ ತಯಾರಿಸಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿದರೆ ತ್ವಚೆಯ ಮೇಲಿನ ಕೂದಲು ಸ್ವಲ್ಪಮಟ್ಟಿಗೆ ಮಾಯವಾಗುತ್ತದೆ. ಈ ಮಿಶ್ರಣವು ನಿಮ್ಮ ಮುಖದ ಮೇಲೆ ಒಣಗಿದ ನಂತರ, ನಿಮ್ಮ ಕೈಗಳಿಗೆ ತೆಂಗಿನ ಎಣ್ಣೆಯನ್ನು ಅನ್ವಯಿಸಿ ಮತ್ತು ನಿಮ್ಮ ಮುಖವನ್ನು ಮಸಾಜ್ ಮಾಡಿ, ನಂತರ ಅದನ್ನು ತೊಳೆಯಿರಿ.

ಉಪ್ಪು ಮತ್ತು ಅಕ್ಕಿ ಹಿಟ್ಟು:

ಒಂದು ಚಿಟಿಕೆ ಉಪ್ಪನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಮತ್ತು ಮೊಸರಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿದರೆ ಅನಗತ್ಯ ಕೂದಲು ನಿವಾರಣೆಯಾಗುತ್ತದೆ. ಇದನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಬಾರಿ ಹೀಗೆ ಮಾಡುವುದರಿಂದ ಮುಖದಲ್ಲಿ ಬೇಡದ ಕೂದಲು ಬೆಳೆಯುವುದು ಕಡಿಮೆಯಾಗುತ್ತದೆ ಮತ್ತು ಸ್ವಲ್ಪ ಸಮಯದ ನಂತರ ಕೂದಲು ಮಾಯವಾಗುತ್ತದೆ.

ಸಕ್ಕರೆ ಮತ್ತು ನಿಂಬೆ ರಸ:

ಮುಖದ ಕೂದಲು ತೆಗೆಯಲು ಪಾರ್ಲರ್‌ಗೆ ಹೋಗುವುದು ದುಬಾರಿ. ಹೀಗಾಗಿ, ಇದನ್ನು ಸಕ್ಕರೆ ಮತ್ತು ನಿಂಬೆಯೊಂದಿಗೆ ಮನೆಯಲ್ಲಿ ಸುಲಭವಾಗಿ ತೆಗೆಯಬಹುದು. ಸಣ್ಣ ಬಾಣಲೆಯಲ್ಲಿ ಸ್ವಲ್ಪ ಸಕ್ಕರೆ, ನಿಂಬೆ ರಸ ಮತ್ತು ನೀರನ್ನು ಬೆರೆಸಿ ಸ್ವಲ್ಪ ಬಿಸಿ ಮಾಡಿ. ಮಧ್ಯಮ ಶಾಖ ಸಾಕು. ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡರೆ ಉತ್ತಮ ಫಲಿತಾಂಶವನ್ನು ಶೀಘ್ರದಲ್ಲೇ ಪಡೆಯಬಹುದು.

ಇದನ್ನೂ ಓದಿ: ಜನನದ ಸಮಯದಲ್ಲಿ ನವಜಾತ ಶಿಶುವಿನ ತೂಕ ಎಷ್ಟಿರಬೇಕು? ತೂಕ ಕಡಿಮೆಯಾದಾಗ ಏನಾಗುತ್ತದೆ?

ಅಕ್ಕಿ ಹಿಟ್ಟು ಮತ್ತು ಸಾಸಿವೆ ಎಣ್ಣೆ:

ಅಕ್ಕಿಹಿಟ್ಟು ಮತ್ತು ಸಾಸಿವೆ ಎಣ್ಣೆ ಎಲ್ಲರ ಮನೆಯಲ್ಲೂ ಸುಲಭವಾಗಿ ಸಿಗುತ್ತದೆ. 1 ಚಮಚ ಅಕ್ಕಿ ಹಿಟ್ಟಿಗೆ ಒಂದು ಚಮಚ ಅರಿಶಿನ ಮತ್ತು ಸ್ವಲ್ಪ ಸಾಸಿವೆ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇವುಗಳನ್ನು ಮುಖಕ್ಕೆ ಹಜ್ಜಿದರೆ ಕೂದಲು ಬೇಗನೆ ಮಾಯವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ