World Habitat Day 2024 : ಸ್ವಚ್ಛ ಪರಿಸರ ಸುರಕ್ಷಿತ ಸೂರು ಎಲ್ಲರ ಹಕ್ಕು

ಪ್ರತಿ ವರ್ಷ ಅಕ್ಟೋಬರ್ ಮೊದಲ ಸೋಮವಾರದಂದು ವಿಶ್ವ ಆವಾಸ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಈ ದಿನವನ್ನು ಅಕ್ಟೋಬರ್ 7 ರಂದು ಆಚರಿಸಲಾಗುತ್ತಿದೆ. ಸುರಕ್ಷಿತ ಮತ್ತು ಸ್ವಚ್ಛ ವಸತಿಯೂ ಎಲ್ಲಾ ಜೀವಿಗಳ ಹಕ್ಕಾಗಿದೆ. ಈ ದಿನವು ನಗರಗಳು ಮತ್ತು ಪಟ್ಟಣಗಳಲ್ಲಿನ ಅಭಿವೃದ್ಧಿಯಿಂದಾಗುವ ಸಮಸ್ಯೆಗಳು ಮತ್ತು ಪರಿಸರದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಹಾಗಾದ್ರೆ ವಿಶ್ವ ಆವಾಸ ದಿನದ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

World Habitat Day 2024 : ಸ್ವಚ್ಛ ಪರಿಸರ ಸುರಕ್ಷಿತ ಸೂರು ಎಲ್ಲರ ಹಕ್ಕು
ಸಾಂದರ್ಭಿಕಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 07, 2024 | 10:10 AM

ಮನೆಯು ನಮ್ಮೆಲ್ಲರ ಮೂಲಭೂತ ಅಗತ್ಯವಾಗಿದೆ. ಹೀಗಾಗಿ ಎಲ್ಲರಿಗೂ ಸುರಕ್ಷಿತ ಹಾಗೂ ಸ್ವಚ್ಛ ಸೂರು ಅತ್ಯಗತ್ಯ. ಆದರೆ ಇಂದು ಹೆಚ್ಚುತ್ತಿರುವ ನಗರೀಕರಣದಿಂದ ಪರಿಸರದ ಮೇಲೆ ಅದರ ಪ್ರಭಾವದಿಂದ ಸುರಕ್ಷಿತ ಸೂರು ಎನ್ನುವುದು ಕನಸು ಎನ್ನುವಂತಾಗಿದೆ. ಹೀಗಾಗಿ ನಗರ, ಪಟ್ಟಣಗಳ ಭವಿಷ್ಯವನ್ನು ರೂಪಿಸುವ ಶಕ್ತಿ ಮತ್ತು ಜವಾಬ್ದಾರಿಯನ್ನು ಎಲ್ಲರೂ ಹೊಂದಿದ್ದಾರೆ. ಇಂದು ಹಾಗೂ ಭವಿಷ್ಯದಲ್ಲಿ ಸ್ವಚ್ಛ ಪರಿಸರವನ್ನು ಯೋಜಿಸಲು ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೊದಲ ಸೋಮವಾರದಂದು ಈ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಆವಾಸ ದಿನದ ಇತಿಹಾಸ

1986ರಲ್ಲಿ ಮೊದಲ ಬಾರಿಗೆ ಕೀನ್ಯಾದ ನೈರೋಬಿಯಾದಲ್ಲಿ ‘ಆಶ್ರಯ ನನ್ನ ಹಕ್ಕು’ ಎಂಬ ಥೀಮ್​ನೊಂದಿಗೆ ‘ವಿಶ್ವ ಆವಾಸ ದಿನ’ ವನ್ನು ಆಚರಿಸಲಾಯಿತು. ವಿಶ್ವ ಆವಾಸ ದಿನವು ಜಾಗತಿಕ ವಸತಿ ಹಾಗೂ ನಗರಾಭಿವೃದ್ಧಿ ಸವಾಲುಗಳ ಮೇಲೆ ಕೇಂದ್ರೀಕರಿಸುತ್ತದೆ. ಯುನೈಟೆಡ್​ ನೇಷನ್ಸ್​ನ ಹ್ಯಾಬಿಟ್ಯಾಟ್​ ಆದೇಶದಂತೆ ಎಲ್ಲರೂ ಆಶ್ರಯತಾಣ ಹೊಂದಿರುವುದನ್ನು ಖಾತ್ರಿ ಪಡಿಸುವ, ಹಾಗೂ ಸುಸ್ಥಿರ ಅಭಿವೃದ್ಧಿ ನೀತಿಗಳನ್ನು ಉತ್ತೇಜಿಸುವ ಸಲುವಾಗಿ ಈ ದಿನದ ಆಚರಣೆಯೂ ಜಾರಿಗೆ ಬಂದಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಆವಾಸ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಆವಾಸ ದಿನದ ಈ ವರ್ಷದ ಥೀಮ್ ಹಾಗೂ ಪ್ರಾಮುಖ್ಯತೆ

“ಉತ್ತಮ ನಗರ ಭವಿಷ್ಯವನ್ನು ನಿರ್ಮಿಸಲು ಯುವಕರನ್ನು ತೊಡಗಿಸಿಕೊಳ್ಳುವುದು”. ಪರಿಸರ ಸುಸ್ಥಿರತೆ, ವಸತಿ ಹಕ್ಕು, ನಗರದಲ್ಲಿನ ಬಡತನ ನಿವಾರಣೆ, ನಗರ ಸ್ಥಿತಿಸ್ಥಾಪಕತ್ವ ಮತ್ತು ಪರಿಸರ ಸಮಸ್ಯೆಗಳ ಮೇಲೆ ಯುವಕರ ಗಮನವನ್ನು ಕೇಂದ್ರೀಕರಿಸುವುದು ಈ ವರ್ಷದ ಥೀಮ್ ಆಗಿದೆ. ನಗರೀಕರಣದ ಪರಿಣಾಮಗಳು, ವಸತಿರಹಿತತೆ, ವಸತಿ ಬಿಕ್ಕಟ್ಟು ಮತ್ತು ಹವಾಮಾನ ಬದಲಾವಣೆಯ ಸವಾಲುಗಳ ಬಗ್ಗೆ ಅರಿವು ಮೂಡಿಸುವುದು.

ಇದನ್ನೂ ಓದಿ: ಬಾಹ್ಯಾಕಾಶದಲ್ಲೂ ಹತ್ತಿ ಬೆಳೆಯುವ ಸಾಹಸಕ್ಕೆ ಕೈ ಹಾಕಿದ್ದ ಚೀನಾ, ಇಲ್ಲಿದೆ ಮಾಹಿತಿ

ಸುಸ್ಥಿರ ಮತ್ತು ಸುರಕ್ಷಿತ ಆವಾಸಸ್ಥಾನವು ಪ್ರತಿಯೊಬ್ಬರ ಹಕ್ಕಾಗಿದೆ. ಆವಾಸ ಸ್ಥಾನಗಳ ಪರಿಸ್ಥಿತಿ ಕುರಿತು ಚಿಂತನೆ ಹೆಚ್ಚಿಸುವುದು, ಸೂಕ್ತವಾದ ಮನೆಯನ್ನು ಹೊಂದುವ ಮೂಲ ಹಕ್ಕನ್ನು ಒತ್ತಿ ಹೇಳುವುದು ಹಾಗೂ ಸುಸ್ಥಿರ ನಗರೀಕರಣವನ್ನು ಉತ್ತೇಜಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಈ ದಿನದಂದು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ