Indian Air Force Day 2024 : ತ್ಯಾಗ ಹಾಗೂ ಶೌರ್ಯದ ಸಂಕೇತ ಭಾರತೀಯ ವಾಯುಪಡೆ

ವಿಶ್ವದ ಅತೀ ಬಲಿಷ್ಠ ವಾಯುಪಡೆಗಳಲ್ಲಿ ಭಾರತೀಯ ವಾಯುಪಡೆಯು ಕೂಡ ಒಂದಾಗಿದೆ. ಈ ವಾಯುದಳವು ಈಗಾಗಲೇ ಅನೇಕ ಯುದ್ಧಗಳಲ್ಲಿ ಮತ್ತು ರಕ್ಷಣ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿವರ್ಷ ಭಾರತೀಯ ವಾಯುಪಡೆಯ ದಿನವನ್ನು ಅಕ್ಟೋಬರ್ 8 ರಂದು ಆಚರಿಸಲಾಗುತ್ತದೆ. ಈ ಬಾರಿ ಭಾರತೀಯ ವಾಯುಪಡೆಯು ತನ್ನ 92ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಹಾಗಾದ್ರೆ ಈ ದಿನದ ಅಸ್ತಿತ್ವಕ್ಕೆ ಬಂದದ್ದು ಹೇಗೆ? ಈ ದಿನದ ಮಹತ್ವವೇನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Indian Air Force Day 2024 : ತ್ಯಾಗ ಹಾಗೂ ಶೌರ್ಯದ ಸಂಕೇತ ಭಾರತೀಯ ವಾಯುಪಡೆ
ಭಾರತೀಯ ವಾಯುಪಡೆಯ ದಿನ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 08, 2024 | 9:27 AM

ಜಗತ್ತಿನ ನಾಲ್ಕನೇ ಬಲಿಷ್ಠ ಸೇನೆಯಾಗಿರುವ ಭಾರತೀಯ ವಾಯುಪಡೆ ಪ್ರಾರಂಭದಿಂದಲೂ ಅನೇಕ ಯುದ್ಧಗಳಲ್ಲಿ ಭಾಗಿಯಾಗಿದೆ. ಭಾರತವು ಸ್ವಾತಂತ್ರ್ಯ ಪಡೆದ ನಂತರದಲ್ಲಿ ಭಾರತೀಯ ವಾಯುಪಡೆಯು ಪ್ರಮುಖ ಐದು ಯುದ್ಧಗಳಲ್ಲಿ ಭಾಗಿಯಾಗಿದೆ. ಇವುಗಳಲ್ಲಿ ನಾಲ್ಕು ಯುದ್ಧಗಳು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿದ್ದರೆ ಒಂದು ಯುದ್ಧವು ಚೀನಾದ ನಡುವೆ ನಡೆದಿತ್ತು. ನಮ್ಮ ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಾಗಿ ಪ್ರತಿವರ್ಷ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ.

ಭಾರತೀಯ ವಾಯುಪಡೆ ಅಸ್ತಿತ್ವಕ್ಕೆ ಬಂದದ್ದು ಹೇಗೆ?

ಭಾರತೀಯ ವಾಯುಪಡೆಯನ್ನು ಅಕ್ಟೋಬರ್ 08, 1932 ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸಹಾಯಕ ವಾಯುಪಡೆಯಾಗಿ ಸ್ಥಾಪಿಸಲಾಯಿತು. ಆ ಸಮಯದಲ್ಲಿ ಭಾರತೀಯ ವಾಯುಪಡೆಯನ್ನು ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಗುತ್ತಿತ್ತು. ಆದರೆ 1950 ರಲ್ಲಿ ಭಾರತದ ಗಣರಾಜ್ಯವಾದ ಬಳಿಕ ಭಾರತದ ವಾಯುಸೇನೆಯ ರಾಯಲ್ ಎಂಬ ಪದವನ್ನು ತೆಗೆದು ಹಾಕಿ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಯಿತು.

1933ರಲ್ಲಿ ಕೇವಲ ಆರು ಅಧಿಕಾರಿಗಳು ಮತ್ತು 19 ಯೋಧರೊಂದಿಗೆ ಪ್ರಾರಂಭವಾದ ಭಾರತೀಯ ವಾಯುಪಡೆಯು ಇಂದು ವಿಶ್ವದ ನಾಲ್ಕನೇ ಪ್ರಬಲ ವಾಯುಸೇನೆಯಾಗಿ ಬೆಳೆದು ನಿಂತಿದೆ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. 1932 ರಲ್ಲಿ ಭಾರತೀಯ ವಾಯುಸೇನೆಯನ್ನು ಸ್ಥಾಪಿಸಿದ ನೆನಪಿಗಾಗಿ ಮತ್ತು ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶರಕ್ಷಣೆಯಲ್ಲಿ ತೊಡಗಿರುವ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಾಗಿ ಪ್ರತಿವರ್ಷ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಬಾಹ್ಯಾಕಾಶದಲ್ಲೂ ಹತ್ತಿ ಬೆಳೆಯುವ ಸಾಹಸಕ್ಕೆ ಕೈ ಹಾಕಿದ್ದ ಚೀನಾ, ಇಲ್ಲಿದೆ ಮಾಹಿತಿ

ಭಾರತೀಯ ವಾಯುಪಡೆ ದಿನದ ಮಹತ್ವ

ನಮ್ಮ ರಾಷ್ಟ್ರವನ್ನು ರಕ್ಷಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿರುವ ಭಾರತೀಯ ವಾಯುಸೇನೆಯ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಉದ್ದೇಶದಿಂದ ಈ ದಿನವು ಮಹತ್ವವನ್ನು ಪಡೆದುಕೊಂಡಿದೆ. ಈ ದಿನದಂದು ಭಾರತೀಯ ವಾಯುಪಡೆ ದಿನದ ಸ್ಮರಣಾರ್ಥವಾಗಿ ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಯೋಧರನ್ನು ಗೌರವಿಸಲಾಗುತ್ತದೆ. ಅದಲ್ಲದೇ, ನಮ್ಮ ದೇಶದ ಮಿಲಿಟರಿ ಶಕ್ತಿಯ ಪ್ರದರ್ಶನವನ್ನು ಮಾಡುವ ಮುಖೇನವಾಗಿ ನೆರೆಹೊರೆಯ ರಾಷ್ಟ್ರಗಳಿಗೆ ಭಾರತೀಯ ಸೇನೆಯ ಶಕ್ತಿಯನ್ನು ಪ್ರದರ್ಶಿಸಲಾಗುತ್ತದೆ.

ಭಾರತೀಯ ವಾಯುಪಡೆಯ ಗಾತ್ರ ಹಾಗೂ ಕರ್ತವ್ಯಗಳೇನು?

ಭಾರತೀಯ ವಾಯುಪಡೆಯಲ್ಲಿ 1,70 ಸಾವಿರಕ್ಕೂ ಹೆಚ್ಚು ಮಂದಿ ಸೇವೆ ಸಲ್ಲಿಸುತ್ತಿದ್ದು, 1,400 ಕ್ಕೂ ಹೆಚ್ಚು ವಿಮಾನಗಳಿವೆ. ಹೀಗಾಗಿ ವಿಶ್ವದ ನಾಲ್ಕನೇ ದೊಡ್ಡದಾದ ಹಾಗೂ ಬಲಿಷ್ಠ ವಾಯುದಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ವಾಯುಪಡೆಯು ದೇಶದ ವಾಯುಪ್ರದೇಶವನ್ನು ಸಂರಕ್ಷಿಸುವುದು, ಯುದ್ಧ, ಸಂಘರ್ಷಗಳು ನಡೆಯುವ ಸಂದರ್ಭದಲ್ಲಿ ವಾಯುದಾಳಿ ನಡೆಸುವ ಮೂಲಕ ದೇಶವನ್ನು ರಕ್ಷಿಸುವ ಕೆಲಸವನ್ನು ಮಾಡುತ್ತವೆ. ಅದಲ್ಲದೇ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ವೇಳೆಯಲ್ಲಿ ಜನರಲ್ಲಿ ನೆರವು ನೀಡುವ ಮೂಲಕ ಜನರನ್ನು ಆಪತ್ತಿನಿಂದ ರಕ್ಷಿಸುವ ಕೆಲಸವನ್ನು ಯೋಧರು ಮಾಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಯಾಪ್ಟನ್​ಗೆ ಲೈನ್ ಹಾಕೋಕೆ ಆರಂಭಿಸಿದ ಜಗದೀಶ್
ಕ್ಯಾಪ್ಟನ್​ಗೆ ಲೈನ್ ಹಾಕೋಕೆ ಆರಂಭಿಸಿದ ಜಗದೀಶ್
ನವರಾತ್ರಿ 6ನೇ ದಿನ ಕಾತ್ಯಾಯಿನಿ ದೇವಿ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿ 6ನೇ ದಿನ ಕಾತ್ಯಾಯಿನಿ ದೇವಿ ಆರಾಧನೆ ಮಹತ್ವ ತಿಳಿಯಿರಿ
ಈ ರಾಶಿಯವರು ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ‌ ಪ್ರಗತಿ ಕಾಣಲಿದ್ದಾರೆ
ಈ ರಾಶಿಯವರು ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ‌ ಪ್ರಗತಿ ಕಾಣಲಿದ್ದಾರೆ
45 ಲಕ್ಷ ರೂ. ನೋಟುಗಳಿಂದ ದುರ್ಗಾದೇವಿಗೆ ಅಲಂಕಾರ! ಬೆರಗಾದ ಭಕ್ತರು
45 ಲಕ್ಷ ರೂ. ನೋಟುಗಳಿಂದ ದುರ್ಗಾದೇವಿಗೆ ಅಲಂಕಾರ! ಬೆರಗಾದ ಭಕ್ತರು
ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್