AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Carrot Benefits: ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕ್ಯಾರೆಟ್ ಬೀಜದಿಂದ ತಯಾರಿಸಿದ ತೈಲವನ್ನು ಬಳಸಿ

ಕ್ಯಾರೆಟ್ ಬೀಜದಿಂದ ತಯಾರಿಸಿದ ತೈಲದ ಬಳಕೆಯು ಪ್ರಾಚೀನ ಗ್ರೀಕ್, ರೋಮನ್ ಮತ್ತು ಈಜಿಪ್ಟ್​ನಲ್ಲಿ ಉಲ್ಲೇಖಿತವಾಗಿದೆ. ಉರಿಯೂತವನ್ನು ಶಮನಗೊಳಿಸುವ ಪ್ರಯತ್ನದಲ್ಲಿ ಈ ತೈಲವನ್ನು ಬಳಕೆ ಮಾಡಲಾಗುತ್ತದೆ.

Carrot Benefits: ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕ್ಯಾರೆಟ್ ಬೀಜದಿಂದ ತಯಾರಿಸಿದ ತೈಲವನ್ನು ಬಳಸಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 07, 2021 | 5:06 PM

Share

ಪರಿಶುದ್ಧವಾದ ಎಣ್ಣೆಗಳನ್ನು ಬಳಸುವುದು ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು ಎನ್ನುವ ವಿಚಾರ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನೀಲಗಿರಿ ಎಣ್ಣೆ, ಸೂರ್ಯಕಾಂತಿ ಬೀಜದ ಎಣ್ಣೆ, ಕಡಲೆ ಎಣ್ಣೆ ಹರಳೆಣ್ಣೆ ಆರೋಗ್ಯಯುವಾದ ತೈಲ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಅದರಂತೆ ಹೆಚ್ಚು ಆರೋಗ್ಯಯುತವಾದದ್ದು, ಕ್ಯಾರೆಟ್ ಬೀಜದಿಂದ ತಯಾರಿಸಿದ ಎಣ್ಣೆ. ಈ ತೈಲದ ಬಳಕೆಯು ಪ್ರಾಚೀನ ಗ್ರೀಕ್, ರೋಮನ್ ಮತ್ತು ಈಜಿಪ್ಟ್​ನಲ್ಲಿ ಉಲ್ಲೇಖಿತವಾಗಿದೆ. ಉರಿಯೂತವನ್ನು ಶಮನಗೊಳಿಸುವ ಪ್ರಯತ್ನದಲ್ಲಿ ಈ ತೈಲವನ್ನು ಬಳಕೆಗೆ ತರಲಾಗಿದೆ. ಹೀಗಾಗಿ ಕ್ಯಾರೆಟ್ ಬೀಜಗಳಿಂದ ತಯಾರಿಸಿದ ಈ ತೈಲದ ಉಪಯುಕ್ತತೆಯನ್ನು ತಿಳಿಯುವುದು ಸೂಕ್ತ.

ಕ್ಯಾರೆಟ್ ಬೀಜದಿಂದ ತಯಾರಿಸಿದ ತೈಲದ ಅನುಕೂಲತೆಗಳು

1. ಮನೋಸ್ಥೈರ್ಯವನ್ನು ನೀಡುತ್ತದೆ ಅರೋಮಾಥೆರಪಿ ಮನಸ್ಥಿತಿಯನ್ನು ಉನ್ನತೀಕರಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ ಬೀಜದ ಎಣ್ಣೆಯನ್ನು ಅರೋಮಾಥೆರಪಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಆತಂಕ, ಒತ್ತಡ ಮತ್ತು ಆಯಾಸದ ಲಕ್ಷಣಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.

2. ಆಂಟಾಕ್ಸಿಡೆಂಟ್ಸ್​ (ಉತ್ಕರ್ಷಣ ನಿರೋಧಕ) ಕ್ಯಾರೆಟ್ ಬೀಜದ ಎಣ್ಣೆಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇದು ಚರ್ಮದ ಹೊಳಪನ್ನು ಹೆಚ್ಚಿಸಲು ನೆರವು ನೀಡುತ್ತದೆ. ಅಲ್ಲದೆ ಕೆಲವು ಚರ್ಮ ಸಂಬಂಧಿ ಕಾಯಿಲೆಗೂ ಇದು ರಾಮಬಾಣವಾಗಿದೆ.

3. ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ ಕ್ಯಾರೆಟ್ ಬೀಜದ ಎಣ್ಣೆಯು ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮದ ಮೇಲೆ ಅನೇಕ ಹಾನಿಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ಈ ತೈಲವು ಬ್ಯಾಕ್ಟೀರಿಯಾವನ್ನು ಮಾತ್ರ ಗುರಿಯಾಗಿಸುತ್ತದೆ ಮತ್ತು ಚರ್ಮಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲ.

4. ಉರಿಯೂತದ ಸಮಸ್ಯೆಯನ್ನು ದೂರ ಮಾಡುತ್ತದೆ ಕ್ಯಾರೆಟ್ ಬೀಜದ ಎಣ್ಣೆ ಉರಿಯೂತದ ಗುಣಲಕ್ಷಣಗಳನ್ನು ದೂರವಾಗಿಸುತ್ತದೆ. ಇದು ಮುಖದಲ್ಲಿ ಉಂಟಾಗುವ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕ್ಯಾರೆಟ್ ಬೀಜದ ಎಣ್ಣೆಯನ್ನು ಹೇಗೆ ಬಳಸುವುದು? 1. ಅರೋಮಾಥೆರಪಿಯಲ್ಲಿನ ಬಳಕೆ ಅರೋಮಾಥೆರಪಿಯಲ್ಲಿ ಕ್ಯಾರೆಟ್ ಬೀಜದ ಎಣ್ಣೆಯನ್ನು ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಬಳಸಲಾಗುತ್ತದೆ. ಕುದಿಯುವ ನೀರಿಗೆ 5ರಿಂದ 10 ಹನಿಗಳನ್ನು ಹಾಕಿ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಬಳಸಬಹುದಾಗಿದೆ. ಇದು ದೇಹದ ಭಾಗಗಳಿಗೆ ನವ ಚೈತನ್ಯವನ್ನು ನೀಡುತ್ತದೆ.

2. ತ್ವಚ್ಛೆಯನ್ನು ಕಾಪಾಡಲು ಬಳಸಿ ಕ್ಯಾರೆಟ್ ಬೀಜದಿಂದ ತಯಾರಿಸಿದ ತೈಲವು ನೈಸರ್ಗಿಕವಾಗಿ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಮುಖದಲ್ಲಿನ ಕಲೆಗಳನ್ನು ದೂರ ಮಾಡುತ್ತದೆ. 2 ಚಮಚೆ ತೆಂಗಿನ ಎಣ್ಣೆ, 2 ಚಮಚೆ ಜೇನು ತುಪ್ಪ ಹಾಕಿ. ಬಳಿಕ ಇದಕ್ಕೆ 4 ಚಮಚೆ ಕಾಫಿ ಪುಡಿ ಸೇರಿಸಿ, ನಂತರ ಈ ಮಿಶ್ರಣಕ್ಕೆ 8 ಹನಿ ಕ್ಯಾರೆಟ್ ಬೀಜದ ತೈಲ ಹಾಕಿ, ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ಬಳಿಕ ತೊಳೆಯಿರಿ.

3. ಫೇಸ್ ಪ್ಯಾಕ್ ಮಾಡಲು ಬಳಸಿ ಚರ್ಮದ ಹೊಳಪನ್ನು ಹೆಚ್ಚಿಸಲು, ಮುಲ್ತಾನಿ ಮಿಟ್ಟಿ 1 ಚಮಚೆ, ಜೇಡಿ ಮಣ್ಣು 1 ಚಮಚೆ, ಅಲೋವೆರಾ ಜೆಲ್ ಮತ್ತು 2 ಹನಿ ಕ್ಯಾರೆಟ್ ಬೀಜದಿಂದ ತಯಾರಿಸಿದ ಎಣ್ಣೆಯನ್ನು ಹಾಕಿ ಫೇಸ್ ಪ್ಯಾಕ್ ತಯಾರಿಸಿಕೊಳ್ಳಿ. ಆದರೆ ಕಣ್ಣಿನ ಭಾಗಕ್ಕೆ ಇದು ತಾಗದಂತೆ ನೋಡಿಕೊಳ್ಳಬೇಕು.

ಕ್ಯಾರೆಟ್ ಬೀಜದ ಎಣ್ಣೆಯನ್ನು ಬಳಸುವಾಗ ನೆನಪಿಡುವ ಅಂಶಗಳು

ಕ್ಯಾರೆಟ್ ಬೀಜದ ಎಣ್ಣೆ ಇತರ ಎಣ್ಣೆಗಳಂತೆ ಆಗಿದ್ದು, ನೇರವಾಗಿ ಬಳಸಬಾರದು ಅದಕ್ಕೆ ಇನ್ನಿತರ ವಸ್ತು ಅಥವಾ ತೈಲದ ಜತೆ ಸೇರಿಸಿ ಬಳಸಿ. ಕ್ಯಾರೆಟ್ ಬೀಜದ ಎಣ್ಣೆಯನ್ನು ಸೇವಿಸಬಾರದು.

ಕ್ಯಾರೆಟ್ ಬೀಜದ ಎಣ್ಣೆಯನ್ನು ಬಾಹ್ಯ ಸಮಸ್ಯೆಗಳಿಗೆ ಬಳಸುವುದು ಸೂಕ್ತ. ಉದಾ: ಚರ್ಮ

ಇದನ್ನೂ ಓದಿ:

ಬಿಳಿ ಜಂಬೂ ಅಥವಾ ಪನ್ನೇರಳೆ ಹಣ್ಣು ರುಚಿಯಷ್ಟೇ ಆರೋಗ್ಯಕರ; ರೋಗನಿರೋಧಕ ಶಕ್ತಿ ಹೆಚ್ಚಿಸುವ ಈ ಹಣ್ಣನ್ನು ಒಮ್ಮೆ ತಿಂದು ನೋಡಿ

Beauty Tips: ಮುಖ ಕಾಂತಿ ಕಳೆದುಕೊಳ್ಳುತ್ತಿದೆಯೇ? ಚರ್ಮದ ಹೊಳಪು ಹೆಚ್ಚಿಸಲು ಇಲ್ಲಿದೆ ಸಿಂಪಲ್ ಟಿಪ್ಸ್​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ