Beer Consumption: ಈ ಲಕ್ಷಣಗಳು ಕಂಡಾಗ ಬಿಯರ್ಗೆ ಹೇಳಿ ಗುಡ್ ಬೈ!
ದೀರ್ಘಕಾಲದವರೆಗೆ ಬಿಯರ್ ಕುಡಿಯುವುದರಿಂದ ದೇಹಕ್ಕೆ ಹಲವಾರು ಗಂಭೀರ ಹಾನಿ ಉಂಟಾಗುತ್ತದೆ. ಇಂದು, ಅಂತಹ ಕೆಲವು ಸಮಸ್ಯೆಗಳ ಬಗ್ಗೆ ತಿಳಿದುಕೊಳೋಣ.
ಸಾಮಾನ್ಯವಾಗಿ ಪಾರ್ಟಿಗಳಲ್ಲಿ ಜನರು ಬಿಯರ್ ಕುಡಿಯುವುದರೊಂದಿದೆ ಆನಂದಿಸುವುದನ್ನು ನೀವು ನೋಡಿರಬಹುದು. ಬಿಯರ್ನ್ನು ಹೆಚ್ಚು ಆದ್ಯತೆಯ ಆಲ್ಕೊಹಾಲ್ಯುಕ್ತ ಪಾನೀಯವೆಂದು ಪರಿಗಣಿಸಲಾಗಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಇದನ್ನು ಸೇವಿಸುತ್ತಾರೆ. ಇಂದಿನ ಯುಗದಲ್ಲಿ ಬಿಯರ್ ಕುಡಿಯುವುದು ಹವ್ಯಾಸವಾಗಿಬಿಟ್ಟಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಬಿಯರ್ ಕುಡಿಯುವ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಬಿಯರ್ ಸಾಮಾನ್ಯವಾಗಿ 5-6 ಪ್ರತಿಶತ ಆಲ್ಕೋಹಾಲ್ನ್ನು ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಕೆಲವು ಪ್ರಯೋಜನಗಳಿವೆ, ಆದರೆ ಇದರ ಚಟವು ನಿಮಗೆ ಮಾರಕವಾಗಬಹುದು. ದೀರ್ಘಕಾಲದವರೆಗೆ ಬಿಯರ್ ಕುಡಿಯುವುದರಿಂದ ದೇಹಕ್ಕೆ ಹಲವಾರು ಗಂಭೀರ ಹಾನಿ ಉಂಟಾಗುತ್ತದೆ. ಇಂದು, ಅಂತಹ ಕೆಲವು ಸಮಸ್ಯೆಗಳ ಬಗ್ಗೆ ತಿಳಿದುಕೊಳೋಣ.
ಆತಂಕ ಮತ್ತು ಖಿನ್ನತೆ:
ಆರೋಗ್ಯ ವರದಿ ಒಂದರ ಪ್ರಕಾರ, ದೀರ್ಘಕಾಲದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಕುಡಿಯುವುದು ಆತಂಕ ಮತ್ತು ಖಿನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಆತಂಕ ಅಥವಾ ಖಿನ್ನತೆಯನ್ನು ಅನುಭವಿಸಿದರೆ, ತಕ್ಷಣ ಬಿಯರ್ ಕುಡಿಯುವುದನ್ನು ನಿಲ್ಲಿಸಬೇಕು. ನೀವು ಅದನ್ನು ನಿರ್ಲಕ್ಷಿಸಿದರೆ, ಸಮಸ್ಯೆ ಉಲ್ಬಣಗೊಳ್ಳಬಹುದು. ಅನೇಕ ಜನರು ಒತ್ತಡವನ್ನು ಕಡಿಮೆ ಮಾಡಲು ಬಿಯರ್ ಕುಡಿಯುತ್ತಾರೆ, ಆದರೆ ಇದು ಉಪಯುಕ್ತಕ್ಕಿಂತ ಹಾನಿಯಾಗಬಹುದು.
ಯಕೃತ್ತಿನ ಸಮಸ್ಯೆ:
ನೀವು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮತ್ತು ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಬಿಯರ್ ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಆಲ್ಕೊಹಾಲ್ಯುಕ್ತ ಹೆಪಟೈಟಿಸ್ನಂತಹ ಗಂಭೀರ ಸಮಸ್ಯೆಗಳನ್ನು ಆಲ್ಕೊಹಾಲ್ ಉಂಟುಮಾಡಬಹುದು. ಇದನ್ನು ತಪ್ಪಿಸಲು, ಬಿಯರ್ನಿಂದ ದೂರವಿರಿ. ಹೆಚ್ಚು ಬಿಯರ್ ಕುಡಿಯುವುದು ಸಿರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಬಹಿರಂಗಪಡಿಸಿವೆ.
ಸ್ಥೂಲಕಾಯ ಹೆಚ್ಚಳ:
ಬಿಯರ್ ಕುಡಿಯುವುದರಿಂದ ತೂಕವು ವೇಗವಾಗಿ ಹೆಚ್ಚಾಗುತ್ತದೆ ಮತ್ತು ಸಾಮಾನ್ಯವಾಗಿ ಇದು ಬೊಜ್ಜಿನ ರೂಪವನ್ನು ಪಡೆದುಕೊಳ್ಳುತ್ತದೆ. 1 ಕ್ಯಾನ್ ಬಿಯರ್‌ನಲ್ಲಿ ಸುಮಾರು 153 ಕ್ಯಾಲೋರಿಗಳಿವೆ. ಇದರ ನಿರಂತರ ಸೇವನೆಯಿಂದ ಬೊಜ್ಜು ಹೆಚ್ಚಾಗುತ್ತದೆ. ನಿಮ್ಮ ಸ್ಥೂಲಕಾಯತೆ ಹೆಚ್ಚಾಗುತ್ತಿದ್ದರೆ ತಕ್ಷಣವೇ ಎಚ್ಚರಗೊಳ್ಳುವ ಅವಶ್ಯಕತೆಯಿದೆ. ಅಂತಹ ಸ್ಥಿತಿಯಲ್ಲಿ, ನೀವು ಬಿಯರ್ನಿಂದ ದೂರವಿರುವುದು ಉತ್ತಮ.
ಅಧಿಕ ರಕ್ತದೊತ್ತಡ:
ನೀವು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ, ಬಿಯರ್ ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ. ರಕ್ತದೊತ್ತಡ ರೋಗಿಗಳು ಯಾವುದೇ ಆಲ್ಕೊಹಾಲ್ಯುಕ್ತ ಪಾನೀಯವನ್ನು ಸೇವಿಸಬಾರದು. ಆಲ್ಕೊಹಾಲ್ಯುಕ್ತ ಪಾನೀಯಗಳನ್ನು ಕುಡಿಯುವುದರಿಂದ ಗಂಟಲು ಮತ್ತು ಬಾಯಿ ಕ್ಯಾನ್ಸರ್ ಸೇರಿದಂತೆ ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಮಧುಮೇಹ ರೋಗಿಗಳು ಸಹ ಬಿಯರ್ ಕುಡಿಯಬಾರದು ಎನ್ನುತ್ತಾರೆ ತಜ್ಞರು.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.