Relationship Tips: ಪ್ರೀತಿಯಿಂದ ತಿರಸ್ಕೃತಗೊಂಡಿದ್ದೀರಾ? ಪ್ರಸ್ತುತ ಸ್ಥಿತಿಯನ್ನು ನಿಭಾಯಿಸುವುದು ಹೇಗೆ, ಈ ಸಲಹೆಗಳು ನಿಮಗೆ ಸಹಾಯವಾಗಬಹುದು
ನಾವು ಒಬ್ಬರನ್ನು ಇಷ್ಟಪಟ್ಟಿದ್ದೇವೆ ಎಂದ ಮಾತ್ರಕ್ಕೆ ಅವರೂ ಕೂಡ ನಮ್ಮನ್ನು ಇಷ್ಟಪಡಬೇಕೆಂದೇನಿಲ್ಲವಲ್ಲ. ಕೆಲವರಿಗೆ ಕೆಲವು ಸಂಗತಿಗಳಲ್ಲಿ ನೀವು ಇಷ್ಟವಾಗಿರಬಹುದು, ಕೆಲವೊಂದು
ನಾವು ಒಬ್ಬರನ್ನು ಇಷ್ಟಪಟ್ಟಿದ್ದೇವೆ ಎಂದ ಮಾತ್ರಕ್ಕೆ ಅವರೂ ಕೂಡ ನಮ್ಮನ್ನು ಇಷ್ಟಪಡಬೇಕೆಂದೇನಿಲ್ಲವಲ್ಲ. ಕೆಲವರಿಗೆ ಕೆಲವು ಸಂಗತಿಗಳಲ್ಲಿ ನೀವು ಇಷ್ಟವಾಗಿರಬಹುದು, ಕೆಲವೊಂದು ವಿಷಯದಲ್ಲಿ ಇಷ್ಟವಾಗದೆ ಇದ್ದಾಗ ನಿಮ್ಮನ್ನು ತಿರಸ್ಕರಿಸಲೂಬಹುದು, ಅವೆಲ್ಲವೂ ಅವರ ಮನಸ್ಥಿತಿಗೆ ಬಿಟ್ಟಿದ್ದು. ಹಾಗೆಂದ ಮಾತ್ರಕ್ಕೆ ನೀವು ನಡೆದುಕೊಳ್ಳುವ ರೀತಿಯೇ ಸರಿಯಿಲ್ಲ ಎಂದು ನೀವು ಅಂದುಕೊಳ್ಳುವುದು ಬೇಡ.
ಜೀವನವೆಂದ ಮೇಲೆ ಸೆಲೆಕ್ಷನ್, ರಿಜೆಕ್ಷನ್ ಎಲ್ಲವೂ ಸಾಮಾನ್ಯ, ಬೇಸರವಾಗುತ್ತದೆ ಆದರೂ ಜೀವನದಲ್ಲಿ ಮುಂದುವರೆಯಲೇಬೇಕಲ್ಲವೇ? ಅದೇ ಕೊರಗಿನಲ್ಲಿದ್ದರೆ ಆತ/ಆಕೆ ನಿಮಗೆ ಮತ್ತೆ ಸಿಗುತ್ತಾರೆಯೇ? ಹಾಗಾಗಿ ನೀವು ತಿರಸ್ಕಾರವನ್ನು ಆರೋಗ್ಯಕರವಾಗಿ ಎದುರಿಸುವುದು ಹೇಗೆ ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ನಮ್ಮಲ್ಲಿ ಪ್ರತಿಯೊಬ್ಬರೂ ಯಶಸ್ಸಿನ ಕೀಲಿಯ ಹಿಂದೆ ಓಡುತ್ತಾರೆ ಆದರೆ ನಿರಾಕರಣೆಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ನಾವು ಪ್ರಜ್ಞಾಪೂರ್ವಕವಾಗಿ ಯೋಚಿಸದ ಹೊರತು ಬೇರೆ ದಾರಿ ಇಲ್ಲ.
ನಿರಾಕರಣೆಯನ್ನು ನಿಮ್ಮ ಸೋಲು ಎಂದು ಭಾವಿಸಿದರೆ ಅದು ನಿಮ್ಮನ್ನು ಮತ್ತಷ್ಟು ಕುಗ್ಗಿಸುತ್ತದೆ, ಹಾಗೆಯೇ ಮುಂದೊಂದು ದಿನ ದೊಡ್ಡ ಅಪಾಯವನ್ನೇ ನೀವು ಎದುರಿಸಬೇಕಾಗಬಹುದು.
ನಿಮ್ಮ ವೈಯಕ್ತಿಕ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು, ಕೆಲವು ಸಂದರ್ಭಗಳಲ್ಲಿ, ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.
ಹಂತ 1: ನಿರಾಕರಣೆಯ ನೋವನ್ನು ಸ್ವೀಕರಿಸಿ ಉದಾಹರಣೆಗೆ: ನೀವು ಒಂದು ಉದ್ಯೋಗವನ್ನರಸಿ ಹೋಗಿರುತ್ತೀರಿ ಎಂದುಕೊಳ್ಳಿ ಆ ಕೆಲಸ ನಿಮಗೇ ಸಿಗಬೇಕೆಂದೇನಿಲ್ಲವಲ್ಲ, ಜೀವನವೂ ಕೂಡ ಹಾಗೆಯೇ ಇಂದು ತಿರಸ್ಕೃತಗೊಂಡ ನಿಮಗೆ ಇನ್ನೆಲ್ಲೋ ಒಳ್ಳೆಯ ಕೆಲಸ ಕಾದಿದೆ ಎಂದರ್ಥ. ಹಾಗೆಯೇ ಪ್ರೀತಿಯಲ್ಲಿ ತಿರಸ್ಕೃತಗೊಂಡರೆ ಇನ್ನೂ ಉತ್ತಮ ಹುಡುಗ/ಹುಡುಗಿ ನಿಮಗೆ ಸಿಗಬಹುದಲ್ಲವೇ? ಈ ರೀತಿ ಆಲೋಚಿಸಿ.
-ನಿಮಗೆ ನೋವಾಗಿಲ್ಲ ಎನ್ನುವ ರೀತಿ ಬಿಂಬಿಸುವ ಅವಶ್ಯಕತೆ ಇಲ್ಲ -ನಿಮಗೆ ಕೆಲಸ ಸಿಕ್ಕಿಲ್ಲ ಎನ್ನುವ ನೋವಿದೆ -ನೀವು ಇಷ್ಟಪಟ್ಟವರು ನಿಮ್ಮನ್ನು ದೂರ ಇಟ್ಟಾಗ ನೋವಾಗುವುದು ಸಹಜ
ಹಂತ 2: ನಿಮ್ಮ ಆಂತರಿಕ ವಿಮರ್ಶೆಯನ್ನು ನಿಲ್ಲಿಸಿ
ಉದಾಹರಣೆ: ನೀವು ಇಷ್ಟಪಡುವ ವ್ಯಕ್ತಿ ನಿಮ್ಮನ್ನು ಮತ್ತೆ ನೋಡಲು ಬಯಸುವುದಿಲ್ಲ. -ನಿಮ್ಮಿಬ್ಬರ ನಡುವೆ ಹೊಂದಾಣಿಕೆಯಿಲ್ಲ ಎಂದಾದಾಗ ಜತೆಗಿದ್ದು ಪ್ರತಿಯೊಂದು ವಿಚಾರಕ್ಕೂ ಜಗಳವಾಡುವುದಕ್ಕಿಂತ ದೂರವಾಗುವುದೇ ಉತ್ತಮ.
-ನಿಮ್ಮಲ್ಲಿ ಏನೋ ತಪ್ಪಾಗಿದೆ ಎಂಬ ಕಾರಣಕ್ಕಾಗಿ ಅಲ್ಲ
-ನಿಮ್ಮ ಬಗ್ಗೆ ನೀವು ದೂಷಿಸುವುದನ್ನು ಬಿಡಿ, ಒಂದೇ ಕೈಯಿಂದ ಚಪ್ಪಾಳೆ ತಟ್ಟಲಾಗದು ಹಾಗೆಯೇ ನಿಮ್ಮದೊಂದೇ ತಪ್ಪಿರುವುದಿಲ್ಲ ಇಬ್ಬರದ್ದೂ ಸರಾಸರಿ ಇರುತ್ತದೆ. ಹಾಗಾಗಿ ನಿಮ್ಮನ್ನು ನೀವು ದೂಷಿಸುವುದನ್ನು ನಿಲ್ಲಿಸಿ.
ಹಂತ 3: ನೀವು ಇದರಿಂದ ಏನು ಕಲಿತಿರಿ ಎಂಬುದನ್ನು ತಿಳಿಯಲು ಪ್ರಯತ್ನಿಸಿ
-ಒಮ್ಮೆ ನೀವು ನೋವನ್ನು ಒಪ್ಪಿಕೊಂಡರೆ, ಅಂತಿಮವಾಗಿ ನಿಮಗೆ ಏನು ಅನುಭವ ದೊರೆಯಿತು ಎಮಬುದರ ಬಗ್ಗೆ ಆಲೋಚಿಸಿ. -ಇದರಿಂದ ನಾನು ಕಲಿತ ಪ್ರಮುಖ ವಿಷಯ ಯಾವುದು?
-ಮುಂದಿನ ಬಾರಿ ಯಾವ ರೀತಿಯ ತಪ್ಪಾಗದಂತೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಆಲೋಚನೆ ಮಾಡಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:51 am, Thu, 1 September 22