Beetroot wine: ಆರೋಗ್ಯಕರ ಬೀಟ್ರೂಟ್ ವೈನ್ ತಯಾರಿಸಿ, ರೆಸಿಪಿ ಇಲ್ಲಿದೆ
ಬೀಟ್ರೂಟ್ನಲ್ಲಿ ಪೌಷ್ಟಿಕಾಂಶಗಳು ಸಮೃದ್ಧವಾಗಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಆದ್ದರಿಂದ ನೀವು ಮನೆಯಲ್ಲಿಯೇ ಬೀಟ್ರೂಟ್ನ ವೈನ್ ತಯಾರಿಸಿ ಸವಿಯಿರಿ.
ಬೀಟ್ರೂಟ್ನಲ್ಲಿ ಪೌಷ್ಟಿಕಾಂಶಗಳು ಸಮೃದ್ಧವಾಗಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಸೋಡಿಯಂ, ಕಬ್ಬಿಣ, ಪೊಟ್ಯಾಷಿಯಂ, ವಿಟಮಿನ್ ಬಿ-6, ರಂಜಕ, ಮೆಗ್ನೀಷಿಯಂ ಮುಂತಾದ ಪೋಷಕಾಂಶಗಳು ಬೀಟ್ರೂಟ್ನಲ್ಲಿ ಕಂಡುಬರುತ್ತವೆ. ಈ ತರಕಾರಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮಲಬದ್ಧತೆಯ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ. ಜೊತೆಗೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನೀವು ಮನೆಯಲ್ಲಿಯೇ ಬೀಟ್ರೂಟ್ನ ವೈನ್ ತಯಾರಿಸಿ ಸವಿಯಿರಿ. ಬೀಟ್ರೂಟ್ ವೈನ್ ಮಾಡುವ ಸುಲಭ ವಿಧಾನ ಇಲ್ಲಿದೆ.
ಬೀಟ್ರೂಟ್ ವೈನ್ ಮಾಡುವ ವಿಧಾನ:
ಹಂತ 1:
ಮೊದಲು 4 ಬೀಟ್ರೂಟ್ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆಯಿರಿ. ನಂತರ ಅದನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಕುಕ್ಕರ್ನಲ್ಲಿ ಹಾಕಿ. ಜೊತೆಗೆ ಚಕ್ಕೆ, ಲವಂಗ, ಏಲಕ್ಕಿ, ಶುಂಠಿ ಮತ್ತು ಬೇಯಲು ಬೇಕಾದಷ್ಟು ನೀರು ಹಾಕಿ ಬೇಯಿಸಿ. ಸುಮಾರು 2ಲೀಟರ್ನಷ್ಟು ನೀರು ಸೇರಿಸಿ. ಒಂದು ವಿಸಿಲ್ ಬರುವ ವರೆಗೆ ಬೇಯಿಸಿ, ನಂತರ ತಣ್ಣಗಾಗಲು ಬಿಡಿ.
ಇದನ್ನೂ ಓದಿ: ಮನೆಯಲ್ಲಿ ಸುಲಭವಾಗಿ ಮಾಡುಬಹುದು ವೈನ್, ಇಲ್ಲಿದೆ ರೆಸಿಪಿ ಟಿಪ್ಸ್
ಹಂತ 2:
ನಂತರ ಒಂದು ಮಧ್ಯಮ ಗಾತ್ರದ ಗ್ಲಾಸ್ ಜಾರ್ ತೆಗೆದುಕೊಳ್ಳಿ. ನಂತರ ಇದಕ್ಕೆ ಈಗಾಗಲೇ ಬೇಯಿಸಿಟ್ಟ ಬೀಟ್ರೂಟ್ನ್ನು ನೀರು ಸಮೇತ ಹಾಕಿ. ನಂತರ ಇದಕ್ಕೆ 1/4 ಕಪ್ ಗೋಧಿಯನ್ನು ಹಾಕಿ. ಜೊತೆಗೆ 1/2 ಟೀ ಸ್ಪೂನ್ ಹೀಸ್ಟ್ ಪೌಡರ್ ಹಾಕಿ. ಇದನ್ನು ಯಾವುದೇ ನೀರಿನ ಅಂಶವಿಲ್ಲದಿರುವ ಸೌಟು ಬಳಸಿ ಮಿಕ್ಸ್ ಮಾಡಿ. ಇದಕ್ಕೆ ಈಗ ಅರ್ಧ ಕಿಲೋ ಸಕ್ಕರೆ ಹಾಕಿ. ಸಕ್ಕರೆ ಕರಗುವ ವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಗ್ಲಾಸ್ ಜಾರ್ನ್ನು ಕಾಟನ್ ಬಟ್ಟೆಯನ್ನು ಬಳಸಿ ಗಟ್ಟಿಯಾಗಿ ಕಟ್ಟಿ 7 ದಿನಗಳ ವರೆಗೆ ಇಡಿ. 7 ದಿನದ ನಂತರ ಇದನ್ನು ಚೆನ್ನಾಗಿ ಸೋಸಿ ಒಂದು ಜಾರ್ನಿಂದ ಇನ್ನೊಂದು ಜಾರ್ಗೆ ವರ್ಗಾಯಿಸಿ. ಈಗ ಬೀಟ್ರೂಟ್ ವೈನ್ ಸಿದ್ಧವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:30 pm, Tue, 21 February 23