
ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ವಸ್ತುಗಳು ಕೆಲವೊಮ್ಮೆ ನಮಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಅಂತಹ ವಸ್ತುಗಳಲ್ಲಿ ಜೀರಿಗೆ (cumin) ಕೂಡ ಒಂದು. ವಿಟಮಿನ್ ಎ, ಸಿ, ಕ್ಯಾಲ್ಸಿಯಂ, ಉತ್ಕರ್ಷಣ ನಿರೋಧಕ ಗುಣ, ಕಬ್ಬಿಣಾಂಶ ಇತ್ಯಾದಿ ಪೋಷಕಾಂಶಗಳನ್ನು ಹೊಂದಿರುವ ಜೀರಿಗೆ ಆರೋಗ್ಯಕ್ಕೆ ಸಖತ್ ಪ್ರಯೋಜನಕಾರಿ. ಹೌದು ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸಲು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಯೋಜನಕಾರಿ. ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸತತ ಏಳು ದಿನಗಳ ಕಾಲ ಜೀರಿಗೆ ನೀರನ್ನು ಕುಡಿಯೋದು ತುಂಬಾ ಒಳ್ಳೆಯದಂತೆ. ಹಾಗಿದ್ರೆ ಜೀರಿಗೆ ನೀರು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.
ಜೀರಿಗೆ ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿ ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ. ಜೀರಿಗೆಯಲ್ಲಿ ಫೈಬರ್ ಅಧಿಕವಾಗಿದ್ದು, ಇದು ನೈಸರ್ಗಿಕವಾಗಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ.
ಜೀರಿಗೆಯಲ್ಲಿರುವ ಥೈಮೋಲ್ ಸಂಯುಕ್ತವು ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ. 2 ರಿಂದ 3 ದಿನಗಳಲ್ಲಿ, ನೀವು ಅಜೀರ್ಣ, ಗ್ಯಾಸ ಮತ್ತು ಹೊಟ್ಟೆ ಭಾರದಿಂದ ಪರಿಹಾರವನ್ನು ಪಡೆಯಬಹುದು.
ಜೀರಿಗೆ ನೀರು ಕುಡಿಯುವುದರಿಂದ ಉರಿಯೂತಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೀರಿಗೆ ಉರಿಯೂತ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ಗಾಯಗಳನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ಜೀರಿಗೆ ನೀರಿನ ನಿಯಮಿತ ಸೇವನೆಯು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಜೀರಿಗೆ ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಇದು ವಿವಿಧ ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ಊಟದ ನಂತರ ಆಹಾರದಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ಬೇಗನೆ ಜೀರಿಗೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ.
ಜೀರಿಗೆ ನೀರು ಕುಡಿಯುವುದರಿಂದಲೂ ತೂಕ ಇಳಿಸಿಕೊಳ್ಳಬಹುದು. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ದೇಹ ತೂಕ ಕಡಿಮ ಮಾಡಲು ಸಹಾಯಕವಾಗಿದೆ.
ಜೀರಿಗೆ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಜೀರಿಗೆ ನೀರಿಗೆ ಸ್ವಲ್ಪ ನಿಂಬೆಹಣ್ಣು ಸೇರಿಸುವುದರಿಂದ ಈ ಸಂಯೋಜನೆಯು ಅತ್ಯುತ್ತಮವಾಗಿರುತ್ತದೆ ಮತ್ತು ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.
ಇದನ್ನೂ ಓದಿ: ಈ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಸಂಗ್ರಹಿಸುವ ತಪ್ಪನ್ನು ಎಂದಿಗೂ ಮಾಡದಿರಿ
ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ಜೀರಿಗೆ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಆಮ್ಲದ ಮಟ್ಟವು ಸಮತೋಲನಗೊಳ್ಳುತ್ತದೆ, ಇದರಿಂದಾಗಿ ಹೊಟ್ಟೆ ಉಬ್ಬರ ಮತ್ತು ಎದೆಯುರಿ ಕಡಿಮೆಯಾಗುತ್ತದೆ.
ಜೀರಿಗೆ ನೀರಿನಲ್ಲಿ ಆಂತರಿಕ ಶುದ್ಧೀಕರಣ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಇರುವುದರಿಂದ, ಇದರ ಸೇವನೆಯಿಂದ ಚರ್ಮವು 7 ದಿನಗಳಲ್ಲಿ ನೈಸರ್ಗಿಕ ಹೊಳಪನ್ನು ಪಡೆಯಲು ಪ್ರಾರಂಭಿಸುತ್ತದೆ ಮತ್ತು ಮೊಡವೆಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ.
ಜೀರಿಗೆ ನೀರು ನೈಸರ್ಗಿಕ ನಿರ್ವಿಷ ಪಾನೀಯವಾಗಿದ್ದು, ಇದು ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಶುದ್ಧೀಕರಿಸುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದು ಹಾಕಿ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ