ಊಟ ಮಾಡಿದ ಬಳಿಕ 10 ನಿಮಿಷಗಳ ಕಾಲ ಅತ್ತಿಂದಿತ್ತ ನಡೆದಾಡುವುದರಿಂದ ಲಭಿಸುವ ಪ್ರಯೋಜನಗಳು

ಜನರು ಸಾಮಾನ್ಯವಾಗಿ ಮಧ್ಯಾಹ್ನ ಊಟವಾದ ತಕ್ಷಣ ಸೋಫಾ ಅಥವಾ ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ, ಇನ್ನೂ ರಾತ್ರಿ ಊಟವಾದ ಬಳಿಕ ಸೀದಾ ಹೋಗಿ ಮಲಗುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ. ಇದರ ಬದಲು 10 ನಿಮಿಷಗಳ ಕಾಲ ಅತ್ತಿಂದಿತ್ತ ಲಘವಾಗಿ ನಡೆಯಿರಿ. ಈ ಒಂದು ಸಣ್ಣ ಅಭ್ಯಾಸ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ.

ಊಟ ಮಾಡಿದ ಬಳಿಕ 10 ನಿಮಿಷಗಳ ಕಾಲ ಅತ್ತಿಂದಿತ್ತ ನಡೆದಾಡುವುದರಿಂದ ಲಭಿಸುವ ಪ್ರಯೋಜನಗಳು
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 22, 2026 | 7:58 PM

ಊಟವಾದ ಬಳಿಕ ಅದರಲ್ಲೂ ವಿಶೇಷವಾಗಿ ಮಧ್ಯಾಹ್ನ ಊಟ ಮಾಡಿದ ನಂತರ ಆಲಸ್ಯ ಆವರಿಸಿ ನಿದ್ದೆ ಬಂದಂತಾಗುತ್ತದೆ. ಇದಕ್ಕಾಗಿ ಅನೇಕರು ಊಟವಾದ ತಕ್ಷಣವೇ ಸೋಫಾ ಅಥವಾ ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಸ್ವಲ್ಪ ಹೊತ್ತು ಲಘು ನಿದ್ರೆಯನ್ನು ಸಹ ಮಾಡುತ್ತಾರೆ. ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯ ಅಭ್ಯಾವಲ್ಲ. ಹೀಗೆ ಊಟ ಮಾಡಿದ ನಂತರ ಸುಮ್ಮನೆ ಕೂರುವ ಬದಲು 10 ನಿಮಿಷಗಳ ಕಾಲ ಲಘು ವಾಕಿಂಗ್‌ (walking) ಮಾಡ್ಬೇಕು ಎಂದು ತಜ್ಞರು ಸಲಹೆಯನ್ನು ನೀಡುತ್ತಾರೆ.  ಜೀರ್ಣಕ್ರಿಯೆ ಸುಧಾರಿಸುವುದರಿಂದ ಹಿಡಿದು ಚಯಾಪಚಯಕ್ರಿಯೆಯ ವರೆಗೆ ಊಟ ಮಾಡಿದ ನಂತರ ಸ್ವಲ್ಪ ಹೊತ್ತು ವಾಕಿಂಗ್‌ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳು ಲಭಿಸುತ್ತದೆ.

ಊಟ ಮಾಡಿದ ಬಳಿಕ 10 ನಿಮಿಷಗಳ ಕಾಲ ನಡೆದರೆ ಲಭಿಸುವ ಪ್ರಯೋಜನಗಳು:

ತೂಕ ನಿಯಂತ್ರಣಕ್ಕೆ ಸಹಕಾರಿ:

ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ನಂತರ 10 ನಿಮಿಷಗಳ ಕಾಲ ನಡೆಯುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ.  ಊಟದ ನಂತರ ನಡೆಯುವುದು  ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ, ಊಟದ ನಂತರ ವಾಕಿಂಗ್‌ ಮಾಡುವುದು ತುಂಬಾ ಪ್ರಯೋಜನಕಾರಿ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ಊಟದ ನಂತರ ನಡೆಯುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಊಟದ ಬಳಿಕದ ಲಘು ನಡಿಗೆಯು ದೇಹದ ಚಲನೆಯನ್ನು ಹೆಚ್ಚಿಸುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯು ಆಹಾರವನ್ನು ಮುಂದಕ್ಕೆ ಸಾಗಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯಲ್ಲಿ ಭಾರವಾದ ಭಾವನೆ ಮತ್ತು ಆಲಸ್ಯದಂತಹ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ:

ರಾತ್ರಿ ಊಟವಾದ ಬಳಿಕ ಸ್ವಲ್ಪ ವಾಕಿಂಗ್‌ ಮಾಡಿ ನಂತರ ನೀವು ನಿದ್ರೆ ಮಾಡಿದರೆ, ನಿಮ್ಮ ಚಯಾಪಚಯ ಕ್ರಿಯೆಯು ಹೆಚ್ಚಾಗುತ್ತದೆ, ಇದರಿಂದಾಗಿ ಕ್ಯಾಲೊರಿಗಳನ್ನು ಸುಡಲು ಸುಲಭವಾಗುತ್ತದೆ. ಇದು ತೂಕ ಇಳಿಸಿಕೊಳ್ಳಲು ಸುಲಭವಾಗುತ್ತದೆ.

ಊಟದ ನಂತರ ಆಲಸ್ಯವನ್ನು ಕಡಿಮೆ ಮಾಡುತ್ತದೆ:

ಅನೇಕ ಜನರು ಊಟ ಮಾಡಿದ ನಂತರ ಇದ್ದಕ್ಕಿದ್ದಂತೆ ಆಲಸ್ಯ ಮತ್ತು ನಿದ್ರೆಯ ಭಾವನೆಯನ್ನು ಅನುಭವಿಸುತ್ತಾರೆ. ಭಾರೀ ಊಟದ ನಂತರ ಈ ಭಾವನೆ ವಿಶೇಷವಾಗಿ ತೀವ್ರವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ, ಒಂದು ಸಣ್ಣ, ಹಗುರವಾದ ನಡಿಗೆ ದೇಹವನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ರಾತ್ರಿ ಮಲಗುವ ಒಂದು ಲೋಟ ಕೊತ್ತಂಬರಿ ಬೀಜದ ನೀರನ್ನು ಕುಡಿಯುವುದರಿಂದ ಏನಾಗುತ್ತೆ ಗೊತ್ತಾ?

ಒತ್ತಡವನ್ನು ಕಡಿಮೆ ಮಾಡುತ್ತದೆ:

ನಡಿಗೆಯು ಮಾನಸಿಕ ಆರೋಗ್ಯವನ್ನೂ ಉತ್ತೇಜಿಸುತ್ತದೆ. ನಡಿಗೆಯು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಸೇರಿದಂತೆ ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಒಬ್ಬ ವ್ಯಕ್ತಿಯು ನಡೆಯಲು ಹೋದಾಗ, ದೇಹವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ, ಇದು ನೈಸರ್ಗಿಕ ನೋವು ನಿವಾರಕಗಳಾಗಿ ಕಾರ್ಯನಿರ್ವಹಿಸುತ್ತದೆ. ನಡಿಗೆಯು ಮನಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ.

ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ:

ತ್ರಿ ಊಟದ ನಂತರ 10 ನಿಮಿಷಗಳ ವಾಕಿಂಗ್‌ ಮಾಡುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೇವಲ 10 ನಿಮಿಷಗಳ ನಡಿಗೆಯು ನಿಮ್ಮ ದೇಹವು ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ನೆನಪಿಡಿ,  ಊಟದ ನಂತರ ನೀವು ತುಂಬಾ ವೇಗವಾಗಿ ನಡೆಯಬಾರದು. ನಿಮ್ಮ ಹೊಟ್ಟೆಗೆ ಹೊರೆಯಾಗದಂತೆ ನಿಧಾನ ಅಥವಾ ಮಧ್ಯಮ ನಡಿಗೆ ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us