Best Color for Dusky Skin: ಕಪ್ಪು ಮೈಬಣ್ಣದವರು ಈ ಕಲರ್ ಬಟ್ಟೆಗಳನ್ನು ಧರಿಸಿದರೆ ಸಖತ್ ಸುಂದರವಾಗಿ ಕಾಣಿಸುತ್ತಾರೆ
ನಮ್ಮ ಸ್ಕಿನ್ ಟೋನ್‌ಗೆ ಅನುಗುಣವಾಗಿ ಬಟ್ಟೆಗಳನ್ನು ಆಯ್ಕೆ ಮಾಡುವುದು ತುಂಬಾನೇ ಮುಖ್ಯ. ನಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗದ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ಅದು ಎಷ್ಟೇ ಸುಂದರವಾದ ಬಟ್ಟೆಯಾದರೂ ನಾವು ಸಖತ್ ಡಲ್ ಆಗಿ ಕಾಣಿಸುತ್ತೇವೆ. ಹಾಗಾಗಿ ಮೈ ಬಣ್ಣಕ್ಕೆ ಹೊಂದಿಕೆಯಾಗುವ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡುವುದು ತುಂಬಾನೇ ಮುಖ್ಯ. ಹೀಗಿರುವಾಗ ಕಪ್ಪು ಮೈ ಬಣ್ಣದವರು ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಸೂಕ್ತ ಎಂಬುದನ್ನು ನೋಡೋಣ ಬನ್ನಿ.

ಮುಖ್ಯಾಂಶಗಳು
- ಡಸ್ಕಿ ಸ್ಕಿನ್ ಟೋನ್‌ಗೆ ಎಲ್ಲಾ ಬಣ್ಣದ ಬಟ್ಟೆಗಳು ಹೊಂದಿಕೆಯಾವುದಿಲ್ಲ
- ಕಪ್ಪು ಮೈ ಬಣ್ಣದವರು ಬಟ್ಟೆ ಆಯ್ಕೆ ವಿಚಾರದಲ್ಲಿ ತುಸು ಹೆಚ್ಚು ಗಮನ ಹರಿಸಬೇಕು
- ಗಾಢ ಹಸಿರು, ರಾಯಲ್ ಬ್ಲೂನಂತಹ ಬಣ್ಣದ ಬಟ್ಟೆಗಳು ಡಸ್ಕಿ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುತ್ತೆ
ಎಷ್ಟೇ ಸುಂದರವಾದ ಬಟ್ಟೆಯಾದರೂ (clothes) ಸರಿ, ಅದು ನಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗದಿದ್ದರೆ, ಅದು ನಮ್ಮ ಸೌಂದರ್ಯವನ್ನು ಕುಗ್ಗಿಸುತ್ತದೆ. ಹಾಗಾಗಿ ನಮ್ಮ ಮೈಬಣ್ಣಕ್ಕೆ ಹೊಂದಿಕೆಯಾಗುವ ಸೂಕ್ತ ಬಣ್ಣದ ಬಟ್ಟೆಗಳನ್ನು ಆರಿಸುವುದು ತುಂಬಾನೇ ಮುಖ್ಯ. ಹೆಚ್ಚಾಗಿ ಈ ಡಸ್ಕಿ ಸ್ಕಿನ್ ಟೋನ್ ಇರುವವರಿಗೆ ಬಟ್ಟೆಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ತುಂಬಾನೇ ಗೊಂದಲಗಳಿರುತ್ತವೆ. ಈ ಬಣ್ಣ ನನಗೆ ಸೂಟ್ ಆಗೋತ್ತೋ, ಈ ಬಣ್ಣದ ಬಟ್ಟೆ ಧರಿಸಿದರೆ ನಾನು ಇನ್ನಷ್ಟು ಕಪ್ಪಾಗಿ ಕಾಣಿಸುತ್ತೀನೋ ಎಂಬ ಗೊಂದಲದಲ್ಲಿರುತ್ತಾರೆ. ನೀವು ಕೂಡ ಕಪ್ಪು ಮೈಬಣ್ಣದವರೇ, ಹಾಗಿದ್ರೆ ಈ ಕೆಲವು ಬಣ್ಣದ ಬಟ್ಟೆಗಳನ್ನೇ ಧರಿಸಿ, ಖಂಡಿತವಾಗಿಯೂ ಇದು ನಿಮ್ಮ ಸೌಂದರ್ಯವನ್ನು ದುಪ್ಪಟ್ಟುಗೊಳಿಸುತ್ತದೆ. ನಿಮ್ಮನ್ನು ರಾಯಲ್ ಆಗಿ ಕಾಣಿಸುವಂತೆ ಮಾಡಿಸುತ್ತದೆ.
ಡಸ್ಕಿ ಸ್ಕಿನ್‌ಟೋನ್‌ಗೆ ಯಾವ ಬಣ್ಣದ ಬಟ್ಟೆ ಸೂಕ್ತ?
ರಾಯಲ್ ಬ್ಲೂ ಬಣ್ಣದ ಬಟ್ಟೆ: ಗಾಢ ನೀಲಿಬಣ್ಣದ ಬಟ್ಟೆಗಳು ಡಸ್ಕಿ ಸ್ಕಿನ್ ಟೋನ್‌ಗೆ ಹೊಂದಿಕೆಯಾಗುತ್ತದೆ. ಕಪ್ಪು ಮೈಬಣ್ಣದವರು ಈ ಬಣ್ಣದ ಬಟ್ಟೆಗಳನ್ನು ಸುಂದರವಾಗಿ ಹಾಗೂ ರಾಯಲ್ ಅಗಿ ಕಾಣಿಸುತ್ತಾರೆ. ಈ ಬಣ್ಣವು ಡಸ್ಕಿ ಸ್ಕಿನ್ ಟೋನ್ ಜೊತೆ ಸುಂದರವಾದ ಸಮತೋಲಿತ ವ್ಯತಿರಿಕ್ತತೆಯನ್ನು ಸೃಷ್ಟಿಸುತ್ತದೆ, ಇದು ನಿಮ್ಮ ನೋಟವನ್ನು ಎದ್ದು ಕಾಣುವಂತೆ ಮಾಡುತ್ತದೆ.
ಮಸ್ಟರ್ಡ್ ಎಲ್ಲೋ: ಸಾಮಾನ್ಯವಾಗಿ ಡಾರ್ಕ್ ಸ್ಕಿನ್ ಟೋನ್ ಇರುವವರು ಹಳದಿ ಬಣ್ಣದ ಬಟ್ಟೆಯನ್ನು ಧರಿಸಲು ಹಿಂದೆ ಸರಿಯುತ್ತಾರೆ. ಡಾರ್ಕ್‌ಸ್ಕಿನ್ ಟೋನ್‌ಗೆ ಹಳದಿ ಬಣ್ಣ ಮ್ಯಾಚ್ ಆಗೋದಿಲ್ಲ ಎಂದು ಭಾವಿಸುತ್ತಾರೆ. ಆದರೆ ಮಸ್ಟರ್ಡ್ ಎಲ್ಲೋ ಅಂದರೆ ಗಾಢ ಹಳದಿ ಬಣ್ಣದ ಬಟ್ಟೆಗಳು ಕಪ್ಪು ಮೈಬಣ್ಣದವರಿಗೆ ತುಂಬಾನೇ ಚೆನ್ನಾಗಿ ಕಾಣಿಸುತ್ತದೆ.
ಗಾಢ ಹಸಿರು: ಡಾರ್ಕ್ ಗ್ರೀನ್ ಬಣ್ಣದ ಬಟ್ಟೆಗಳು ಕಪ್ಪು ಮೈಬಣ್ಣದವರಿಗೆ ಸುಂದರ ನೋಟವನ್ನು ನೀಡುತ್ತದೆ. ಈ ಬಣ್ಣವು ತುಂಬಾ ಪ್ರಕಾಶಮಾನವಾಗಿಲ್ಲ ಜೊತೆಗೆ ಹೊಳೆಯುವಂತಿಲ್ಲ ಹಾಗಾಗಿ ಡಾರ್ಕ್ ಸ್ಕಿನ್ ಟೋನ್‌ಗೆ ಈ ಬಣ್ಣ ಹೊಂದಿಕೆಯಾಗುತ್ತದೆ. ಮದುವೆ ಇತ್ಯಾದಿ ಸಮಾರಂಭಗಳಲ್ಲಿ ರಾಯಲ್ ಆಗಿ ಕಾಣಿಸಿಕೊಳ್ಳಲು ಕಪ್ಪು ಮೈಬಣ್ಣದವರು ಗಾಢ ಹಸಿರು ಬಣ್ಣದ ಸೀರೆ, ಸಲ್ವಾರ್, ಕುರ್ತಾ ಧರಿಸಬಹುದು.
ಆಫ್-ವೈಟ್ ಅಥವಾ ಕ್ರೀಮ್: ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಕಪ್ಪು ಮೈಬಣ್ಣದವರಿಗೆ ಹಾಲಿನಂತಿರುವ ಶುದ್ಧ ಬಿಳಿ ಬಣ್ಣ ಹೊಂದಿಕೆಯಾಗುವುದಿಲ್ಲ. ಅವರು ಯಾವಾಗಲೂ ಆಫ್ ವೈಟ್ ಅಥವಾ ಕ್ರೀಮ್ ಬಣ್ಣದ ಬಟ್ಟೆಗಳನ್ನೇ ಆಯ್ಕೆ ಮಾಡಬೇಕು. ಈ ಕ್ರೀಮ್ ಬಣ್ಣದ ಬಟ್ಟೆಗಳು ಕಪ್ಪು ಮೈಬಣ್ಣದವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಇದನ್ನೂ ಓದಿ: ನೀವು ರಾತ್ರಿಯಲ್ಲಿ ಬಟ್ಟೆ ಒಗೆಯುತ್ತೀರಾ?, ಈ ತಪ್ಪು ನಿಮ್ಮನ್ನು ಬಡವರನ್ನಾಗಿ ಮಾಡುತ್ತವೆ
ವೈನ್ ರೆಡ್ ಅಥವಾ ಮೆರೂನ್: ಮೆರೂನ್ ತುಂಬಾನೇ ಸುಂದರವಾಗಿರುವಂತಹ ಬಣ್ಣ. ಈ ಬಣ್ಣದ ಬಟ್ಟೆಗಳು ಡಸ್ಕಿ ಸ್ಕಿನ್‌ಟೋನ್‌ಗೆ ಮ್ಯಾಚ್ ಆಗುತ್ತೆ. ಕೆಂಪು ಬಣ್ಣವನ್ನು ಇಷ್ಟಪಡುವವರು ಪ್ರಕಾಶಮಾನವಾಗಿರುವ ಟೊಮೆಟೊದಂತಹ ಕೆಂಪು ಬಣ್ಣದ ಉಡುಗೆಯನ್ನು ಆಯ್ಕೆ ಮಾಡುವ ಬದಲು ವೈನ್ ರೆಡ್, ಬರ್ಗಂಟಿ, ಮೆರೂನ್ ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡಿ. ಇದು ನಿಮ್ಮ ನೋಟವನ್ನು ದುಪ್ಪಟ್ಟುಗೊಳಿಸುತ್ತದೆ.
ಪೀಚ್ ಬಣ್ಣ: ಹಸಿರು, ಮೆರೂನ್, ರಾಯಲ್ ಬ್ಲೂನಂತಹ ಡಾರ್ಕ್ ಬಣ್ಣ ಮಾತ್ರವಲ್ಲ ಕಿತ್ತಳೆ ಮತ್ತು ಗುಲಾಬಿ ಬಣ್ಣದ ಮಿಶ್ರಣವಾದ ಪೀಚ್ ಬಣ್ಣವೂ ಡಸ್ಕಿ ಸ್ಕಿನ್ ಟೋನ್‌ಗೆ ಹೊಂದಿಕೆಯಾಗುತ್ತದೆ. ನೀವು ಮೃದು ಮತ್ತು ತಿಳಿ ಬಣ್ಣವನ್ನು ಇಷ್ಟಪಡುವವರಾಗಿದ್ದರೆ, ಪೀಚ್ ಬಣ್ಣವನ್ನು ಆಯ್ಕೆ ಮಾಡಿ. ಇದು ನಿಮಗೆ ಖಂಡಿತವಾಗಿ ಆಕರ್ಷಕ ನೋಟವನ್ನು ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




