Winter Drinks- ಚಳಿಗಾಲಕ್ಕೆ ಆರೋಗ್ಯ ಕಾಪಾಡುವ ಸೂಪರ್ ಟಾನಿಕ್; ಬಾಬಾ ರಾಮದೇವ್ ಮಾಹಿತಿ
Baba Ramdev suggests supertonic drinks for immunity: ಬಾಬಾ ರಾಮದೇವ್ ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಆಗಾಗ್ಗೆ ಮನೆಮದ್ದುಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಈಗ ತೀವ್ರವಾದ ಚಳಿಗಾಲ ಅಡಿ ಇಟ್ಟಿದೆ. ಈ ಹೊತ್ತಲ್ಲಿ, ಶೀತ, ಕೆಮ್ಮು ಇತ್ಯಾದಿ ಆರೋಗ್ಯ ಸಮಸ್ಯೆ ಕಾಡುತ್ತದೆ. ಈ ಕಾಲಕ್ಕೆ ಶರೀರ ಅನಾರೋಗ್ಯಗೊಳ್ಳದಂತೆ ಕಾಪಾಡಬಲ್ಲ ಒಂದು ಸೂಪರ್ ಟಾನಿಕ್ ಡ್ರಿಂಕ್ಸ್ ಬಗ್ಗೆ ಬಾಬಾ ರಾಮದೇವ್ ವಿವರ ನೀಡಿದ್ದಾರೆ.

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವುದು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ ಮುಖ್ಯ. ಚಳಿ ವಾತಾವರಣದಲ್ಲಿ ಶೀತ, ಕೆಮ್ಮು ಮತ್ತು ವೈರಲ್ ಫಿವರ್ಗಳಂತಹ ಕಾಯಿಲೆಗಳು ಬೇಗನೆ ಬರಬಹುದು. ಅಂತಹ ಸಂದರ್ಭದಲ್ಲಿ, ನಮ್ಮ ಆಹಾರ ಪದ್ಧತಿಯಿಂದ ಸ್ವಲ್ಪ ಆಚೆ ಈಚೆಯಾದರೂ ಆರೋಗ್ಯ ಕ್ಷೀಣಿಸಬಹುದು. ಆಯುರ್ವೇದ ತಜ್ಞರು ದೇಹವನ್ನು ಬೆಚ್ಚಗಿಡುವ ಮತ್ತು ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುವ ಪಾನೀಯಗಳು ಮತ್ತು ಆಹಾರಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಜನರು ಮನೆಯಲ್ಲಿ ತಯಾರಿಸಿದ ಮತ್ತು ನೈಸರ್ಗಿಕ ಪದಾರ್ಥಗಳನ್ನು ಬಳಸುವಂತೆ ಯೋಗ ಗುರು ಬಾಬಾ ರಾಮದೇವ್ (Baba Ramdev) ಸಲಹೆ ನೀಡುತ್ತಾರೆ.
ಇನ್ಸ್ಟಾಗ್ರಾಮ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಬಾಬಾ ರಾಮದೇವ್ ಅವರು ಆರೋಗ್ಯ, ಆಹಾರ ಮತ್ತು ಫಿಟ್ನೆಸ್ ಕುರಿತು ಮಾಹಿತಿ ಮತ್ತು ಸಲಹೆ ನೀಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ಒಂದು ಪೋಸ್ಟ್ನಲ್ಲಿ ಅವರು ಚಳಿಗಾಲದಲ್ಲಿ ದೈನಂದಿನ ಆಹಾರದಲ್ಲಿ ಪಾನೀಯವನ್ನೂ ಸೇರಿಸಿಕೊಂಡರೆ ಶೀತವನ್ನು ಹೇಗೆ ದೂರ ಇಡಬಹುದು ಎಂಬುದನ್ನು ವಿವರಿಸಿದ್ದಾರೆ. ಹಾಗಾದರೆ, ಅದು ಯಾವ ಪಾನೀಯ ಮತ್ತು ಯಾವ ಅಗತ್ಯ ಪದಾರ್ಥಗಳು ಬೇಕಾಗುತ್ತವೆ ಎಂಬುದರ ವಿವರ ಇಲ್ಲಿದೆ…
ಇದನ್ನೂ ಓದಿ: ಆಹಾರ ಸೇವನೆಯಲ್ಲಿ ಈ ತಪ್ಪು ಯಾವತ್ತೂ ಆಗಬಾರದು: ಬಾಬಾ ರಾಮದೇವ್ ಸಲಹೆಗಳು
ಬಾಬಾ ರಾಮದೇವ್ ಅವರ ಸೂಪರ್ ಟಾನಿಕ್ ಡ್ರಿಂಕ್
ಯೋಗ ಗುರು ಬಾಬಾ ರಾಮ್‌ದೇವ್ ಅವರು ಚಳಿಯನ್ನು ಹೋಗಲಾಡಿಸುವ ದೇಸಿ ಪಾನೀಯವೊಂದನ್ನು ವಿವರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಪಾನೀಯವು ಚಳಿಗಾಲಕ್ಕೆ ಸೂಪರ್ ಟಾನಿಕ್ ಎಂದು ಹೇಳುತ್ತಾರೆ. ಸ್ಥಳೀಯ ಪದಾರ್ಥಗಳನ್ನು ಬಳಸಿ ಈ ಡ್ರಿಂಕ್ಸ್ ತಯಾರಿಸಬಹುದು. ಅಲ್ಲದೆ, ಇದು ಕುಡಿಯಲು ಸಂಪೂರ್ಣವಾಗಿ ಸುರಕ್ಷಿತವಾಗಿದೆ.
ಸೂಪರ್ ಟಾನಿಕ್ ತಯಾರಿಸುವ ಕ್ರಮ
ಸೂಪರ್ ಟಾನಿಕ್ ಪಾನೀಯವನ್ನು ತಯಾರಿಸಲು, ನಿಮಗೆ ಒಂದು ದೊಡ್ಡ ಗ್ಲಾಸ್ ಹಾಲು ಬೇಕು. ಹಾಲು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದ್ದು ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಾಲಿಗೆ ತುರಿದ ಶುಂಠಿಯನ್ನು ಸೇರಿಸಿ. ನಂತರ, ಅರಿಶಿನ, ಪತಂಜಲಿ ಕೇಸರಿ, 1-2 ಹನಿ ಶಿಲಾಜಿತ್ ಮತ್ತು ಜೇನುತುಪ್ಪವನ್ನು ಸೇರಿಸಿ ಮಿಶ್ರಣ ಮಾಡಿ. ಇದರ ಬಣ್ಣವು ಕಾಫಿಯನ್ನು ಹೋಲುತ್ತದೆ. ಮೇಲೆ ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ. ಚಳಿಗಾಲದಲ್ಲಿ ನೀವು ಪ್ರತಿದಿನ ಈ ಪಾನೀಯವನ್ನು ಸೇವಿಸಬೇಕು. ಇದಲ್ಲದೆ, ನೀವು ಈ ಹಾಲಿನೊಂದಿಗೆ ಚ್ಯವನಪ್ರಾಶವನ್ನು ಸೇವಿಸಿದರೆ, ಚಳಿಗಾಲದ ಉದ್ದಕ್ಕೂ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ.
ಇದನ್ನೂ ಓದಿ: ಯೂರಿಕ್ ಆ್ಯಸಿಡ್ನಿಂದ ಕೀಲು ನೋವಾಗುತ್ತಿರಬಹುದು; ಈ 4 ಯೋಗಾಸನಗಳಿಂದ ಸಿಗುತ್ತೆ ಪರಿಹಾರ
ಹಾಲು ಇಲ್ಲದೆ ಚಳಿಗಾಲದ ಪಾನೀಯ ಹೇಗೆ ತಯಾರಿಸುವುದು?
ಹಾಲು ಕುಡಿಯದವರು ಚಿಂತಿಸಬೇಕಾಗಿಲ್ಲ. ಅಂಥವರಿಗೂ ಚಳಿಗಾಲದ ಕಷಾಯ ತಯಾರಿಸುವ ವಿಧಾನವನ್ನು ಬಾಬಾ ರಾಮದೇವ್ ತಿಳಿಸಿದ್ದಾರೆ. ಈ ಪಾನೀಯವನ್ನು ಹಾಲು ಇಲ್ಲದೆಯೂ ತಯಾರಿಸಬಹುದು. ಒಂದು ಗ್ಲಾಸ್ ತೆಗೆದುಕೊಂಡು ಕೆಲವು ಎಳೆಗಳ ಕೇಸರಿಯನ್ನು ಸೇರಿಸಿ. ನಂತರ, ಒಂದು ಚಿಟಿಕೆ ಶುಂಠಿ, ಒಂದು ಚಿಟಿಕೆ ಅರಿಶಿನ, ಒಂದು ಚಿಟಿಕೆ ಶಿಲಾಜಿತ್ ಪುಡಿ ಮತ್ತು ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಇದು ಉತ್ತಮ ರುಚಿಯನ್ನು ನೀಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶರೀರಕ್ಕೆ ಚೈತನ್ಯ ನೀಡುತ್ತದೆ.
ಇನ್ನಷ್ಟು ಲೈಫ್ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




