AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಮನೆಯ ಶಾಂತಿಗೆ ಭಂಗ ತರಬಹುದು ಮಹಿಳೆಯರ ಈ ಅಭ್ಯಾಸಗಳು

ಮಹಿಳೆಯನ್ನು ಕುಟುಂಬದ ಆಧಾರಸ್ತಂಭ ಎಂದು ಹೇಳಲಾಗುತ್ತದೆ. ಮನೆಯ ಶ್ರೇಯೋಭಿವೃದ್ಧಿ, ಕುಟುಂಬದ ಶಾಂತಿ, ನೆಮ್ಮದಿ ಆಕೆಯ ಮೇಲೆಯೇ ಅವಲಂಬಿತವಾಗಿರುತ್ತದೆ. ಹೀಗಿರುವಾಗ ಆಕೆಯಲ್ಲಿ ಈ ಕೆಲವು ಅಭ್ಯಾಸಗಳು, ಗುಣಗಳಿದ್ದರೆ, ಇದರಿಂದ ಮನೆಯ ಶಾಂತಿ, ನೆಮ್ಮದಿಯೆಲ್ಲಾ ಹಾಳಾಗಬಹುದು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹಾಗಾದರೆ ಮಹಿಳೆಯರ ಯಾವ ಅಭ್ಯಾಸಗಳು ಮನೆಯ ಶಾಂತಿಯನ್ನು ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಮನೆಯ ಶಾಂತಿಗೆ ಭಂಗ ತರಬಹುದು ಮಹಿಳೆಯರ ಈ ಅಭ್ಯಾಸಗಳು
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Dec 15, 2025 | 3:00 PM

Share

ಹೆಣ್ಣು (women) ಮನೆಯ ಕಣ್ಣು, ಗಂಡ, ಮಕ್ಕಳು, ಮನೆ, ಕುಟುಂಬವನ್ನು ನಿಭಾಯಿಸುವಲ್ಲಿ ಆಕೆಯ ಪಾತ್ರ ಮಹತ್ತರವಾದದ್ದು. ಆಕೆಯ ಜ್ಞಾನ, ತಿಳುವಳಿಕೆ, ಗುಣ ನಡವಳಿಕೆಯ ಆಧಾರದ ಮೇಲೆ ಆಕೆಯ ಇಡಿ ಕುಟುಂಬ ನಿಂತಿರುತ್ತದೆ, ಆಕೆಯ ಗುಣ ನಡವಳಿಕೆಗಳು ಮನೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹೌದು ಗಂಡಸರು ಮಅಡುವ ಸಾಲ, ಅನೈತಿಕ ಸಂಬಂಧ, ದುಂದು ವೆಚ್ಚಗಳು ಕುಟುಂಬದ ನೆಮ್ಮದಿಯನ್ನು ಹಾಳು ಮಾಡುವಂತೆ, ಮಹಿಳೆಯರ ಈ ಕೆಲವು ಅಭ್ಯಾಸಗಳು ಸಹ ಮನೆಯ ಶಾಂತಿ, ನೆಮ್ಮದಿ ಹಾಳಾಗಲು ಮುಖ್ಯ ಕಾರಣವಂತೆ. ಮನೆಯ ಶಾಂತಿಗೆ ಭಂಗ ತರುವ ಮಹಿಳೆಯರ ಆ ಅಭ್ಯಾಸಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮನೆಯ ನೆಮ್ಮದಿಯನ್ನು ಹಾಳು ಮಾಡುತ್ತದೆ ಮಹಿಳೆಯರ ಈ ಅಭ್ಯಾಸ:

ಅನಗತ್ಯ ಖರ್ಚು: ಅನಗತ್ಯ ಖರ್ಚು ಶ್ರೀಮಂತ ವ್ಯಕ್ತಿಯನ್ನು ಸಹ ಬಡವನನ್ನಾಗಿ ಮಾಡಬಹುದು. ಅದೇ ರೀತಿ  ಮಹಿಳೆ ಅನಗತ್ಯವಾಗಿ ಖರ್ಚು ಮಾಡುವ ಅಭ್ಯಾಸವನ್ನು ಹೊಂದಿದ್ದರೆ, ಆಕೆಯ ಮನೆಯಲ್ಲಿ ಹಣ ಎಂದಿಗೂ ಉಳಿಯುವುದಿಲ್ಲ. ಇದರಿಂದ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ.

ಟೀಕಿಸುವ ಮತ್ತು ತಪ್ಪುಗಳನ್ನು ಹುಡುಕುವ ಅಭ್ಯಾಸ: ಇತರರನ್ನು ಟೀಕಿಸುವ ಮತ್ತು ತಪ್ಪುಗಳನ್ನು ಹುಡುಕುವ ಅಭ್ಯಾಸ ಹೊಂದಿರುವ ಮಹಿಳೆಯಿಂದಲೂ ಕುಟುಂಬದ ನೆಮ್ಮದಿ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯ. ಈ ಅಭ್ಯಾಸದಿಂಸ ಆಕೆಯ ಸಾಮಾಜಿಕ ಸ್ಥಾನಮಾನ ಕುಸಿಯುತ್ತದೆ, ಇದು ಕುಟುಂಬದೊಳಗೆ ಆಗಾಗ್ಗೆ ಘರ್ಷಣೆಗಳು ಮತ್ತು ಕಲಹಗಳಿಗೆ ಕಾರಣವಾಗುತ್ತದೆ. ಸಂಬಂಧಗಳು ಹದಗೆಡುತ್ತವೆ. ಮತ್ತು ಗಂಡನ ಆದಾಯವನ್ನು ಕಡಿಮೆ ಅಂದಾಜು ಮಾಡುವ ಅಭ್ಯಾಸವು ಮನೆಯ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ಹಾಳು ಮಾಡುತ್ತದೆ.

ಅಹಂಕಾರ: ಅಹಂಕಾರವು ಎಂದಿಗೂ ಒಳ್ಳೆಯದಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ.  ಅದರಲ್ಲೂ ಮಹಿಳೆ ಎಂದಿಗೂ ಹಣ, ಸೌಂದರ್ಯ, ಮನೆತನದ ವಿಷಯದಲ್ಲಿ ಅಹಂಕಾರ ಪಡಬಾರದು. ಅಹಂ ಭಾವನೆ ಅದು ಇಡೀ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ ಈ ಅಹಂಕಾರವು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಸಹ ಹಾಳುಮಾಡುತ್ತದೆ ಮತ್ತು ಈ ಕೆಟ್ಟ ಅಭ್ಯಾಸವು ದಾಂಪತ್ಯ ಜೀವನಕ್ಕೆ ತುಂಬಾ ಹಾನಿಕಾರಕವಾಗಿದೆ.

ಇದನ್ನೂ ಓದಿ: ಪುರುಷರಲ್ಲಿ ಅಭ್ಯಾಸಗಳಿದ್ದರೆ, ಮನೆಯ ನೆಮ್ಮದಿಯೇ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯ

ಜಗಳವಾಡುವ ಅಭ್ಯಾಸ:  ಜಗಳಗಂಟಿ ಮಹಿಳೆ ತಾನು ಸಂತೋಷವಾಗಿರುವುದಿಲ್ಲ, ಇತರರನ್ನೂ ಸಂತೋಷವಾಗಿರಲು ಬಿಡುವುದಿಲ್ಲ. ಇಂತಹ ಮಹಿಳೆಯ ಕಾರಣದಿಂದಾಗಿಯೇ ಮನೆಯಲ್ಲಿ ಯಾವಾಗಲೂ ನಕಾರಾತ್ಮಕತೆ ತುಂಬಿರುತ್ತದೆ, ಕುಟುಂಬದ ನೆಮ್ಮದಿಯೇ ಹಾಳಾಗುತ್ತದೆ. ಅಲ್ಲದೆ ಇಂತಹ ಮನೆಯಲ್ಲಿ ಲಕ್ಷ್ಮಿ ದೇವಿ ಎಂದಿಗೂ ವಾಸಿಸುವುದಿಲ್ಲ, ಮನೆ  ಸಮೃದ್ಧಿಯೂ ಆಗುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ