AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಅಭ್ಯಾಸಗಳಿಂದ ನಿಮ್ಮ ಇಮೇಜ್‌ ಹಾಳಾಗಬಹುದು… ಜೋಕೆ!

ಪ್ರತಿಯೊಬ್ಬ ವ್ಯಕ್ತಿಗೂ ಗೌರವ ಎನ್ನುವಂತಹದ್ದು ತುಂಬಾನೇ ಮುಖ್ಯ. ಗೌರವವನ್ನು ಕಳೆದುಕೊಂಡು ಈ ಸಮಾಜದಲ್ಲಿ ಬುದುಕುವುದು ಕಷ್ಟಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಸಹ ದುಡ್ಡು, ಸಂಪತ್ತನ್ನು ಸಂಪಾದಿಸುವ ಜೊತೆ ಜೊತೆಗೆ ಗೌರವ ಗಳಿಸಲು ಕೂಡ ಶ್ರಮಿಸುತ್ತಾರೆ. ಆದರೆ ಈ ಕೆಲವು ಅಭ್ಯಾಸಗಳಿದ್ದರೆ, ಇರುವ ಗೌರವವೂ ಸಹ ಮಣ್ಣುಪಾಲಾಗುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಆ ಅಭ್ಯಾಸಗಳು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Chanakya Niti: ಈ ಅಭ್ಯಾಸಗಳಿಂದ ನಿಮ್ಮ ಇಮೇಜ್‌ ಹಾಳಾಗಬಹುದು… ಜೋಕೆ!
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Dec 16, 2025 | 4:56 PM

Share

ಜಗತ್ತಿನ ಪ್ರತಿಯೊಬ್ಬರಿಗೂ ಸಂಪತ್ತಿನ ಜೊತೆಗೆ ಗೌರವವನ್ನೂ (Respect) ಬಯಸುತ್ತಾರೆ. ಈ ಗೌರವವನ್ನು ಕಾಪಾಡಿಕೊಳ್ಳಲು ಹೆಚ್ಚಿನವರು ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡುತ್ತಾರೆ. ಗೌರವ ಗಳಿಸಲು, ಅದನ್ನು ಕಾಪಾಡಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನೂ ಮಾಡುತ್ತಾರೆ. ಆದರೆ ತಿಳಿದೋ ತಿಳಿಯದೆಯೋ ಮಾಡುವ ಈ ಕೆಲವೊಂದು ತಪ್ಪುಗಳು, ಅಭ್ಯಾಸಗಳಿಂದ ವ್ಯಕ್ತಿಯ ಗೌರವವು ಮಣ್ಣುಪಾಲಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹೌದು ಈ ಕೆಲವೊಂದು ಅಭ್ಯಾಸಗಳ ಕಾರಣದಿಂದಾಗಿ  ಕುಟುಂಬ, ಸಮಾಜ ಮತ್ತು ಕೆಲಸದ ಸ್ಥಳದಲ್ಲಿ ಅವರ ಗೌರವ ಕಡಿಮೆಯಾಗುತ್ತದೆ, ಅಂತಹ ಅಭ್ಯಾಸಗಳನ್ನು ತ್ಯಜಿಸುವುದೇ ಒಳ್ಳೆಯದು ಎಂದು ಅವರ ಸಲಹೆ ನೀಡಿದ್ದಾರೆ. ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಈ ಅಭ್ಯಾಸಗಳಿಂದ ನಿಮ್ಮ ಗೌರವ ಹಾಳಾಗಬಹುದು:

ಅತಿಯಾಗಿ ಮಾತನಾಡುವುದು: ಚಾಣಕ್ಯರ ಪ್ರಕಾರ, ಪ್ರತಿಯೊಂದು ವಿಷಯದ ಬಗ್ಗೆಯೂ ಅತಿಯಾಗಿ ಮಾತನಾಡುವ ವ್ಯಕ್ತಿಯು ತನ್ನ ಗಂಭೀರತೆಯನ್ನು ಕಳೆದುಕೊಳ್ಳುತ್ತಾನೆ. ಅನಗತ್ಯ ಮಾತು ತಪ್ಪು ತಿಳುವಳಿಕೆಯನ್ನು ಸೃಷ್ಟಿಸುವುದಲ್ಲದೆ, ವ್ಯಕ್ತಿಯ ಇಮೇಜ್‌ಗೆ ಹಾನಿ ಮಾಡುತ್ತದೆ. ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಮಾತನಾಡುವವನೇ ಬುದ್ಧಿವಂತ ವ್ಯಕ್ತಿ ಎಂದು ಚಾಣಕ್ಯ ಹೇಳುತ್ತಾರೆ.

ಕೋಪ ನಿಯಂತ್ರಣದ ಕೊರತೆ: ಅತಿಯಾದ ಕೋಪವು ವಿನಾಶಕ್ಕೆ ಕಾರಣವಾಗುತ್ತದೆ ಎಂದು ಹಿರಿಯರು ಆಗಾಗ್ಗೆ ಹೇಳುತ್ತಿರುತ್ತಾರೆ. ಅದೇ ರೀತಿ ಆಚಾರ್ಯ ಚಾಣಕ್ಯರು  ಅತಿಯಾದ ಕೋಪವನ್ನು ಮನುಷ್ಯನ ದೊಡ್ಡ ಶತ್ರು ಎಂದು ಬಣ್ಣಿಸಿದ್ದಾರೆ. ಪದೇ ಪದೇ ಕೋಪಗೊಳ್ಳುವ ವ್ಯಕ್ತಿಯು ಕೋಪದಲ್ಲಾಡುವ ತನ್ನ ಮಾತು ಮತ್ತು ನಡವಳಿಕೆಯ ಮೂಲಕವೇ ತನ್ನ  ಗೌರವವನ್ನು ಕಳೆದುಕೊಳ್ಳುತ್ತಾನೆ. ಕಚೇರಿಯಲ್ಲಿರಲಿ ಅಥವಾ ಮನೆಯಲ್ಲಿರಲಿ, ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು, ಕೋಪದಲ್ಲಾಡುವ ಮಾತುಗಳು  ಹೆಚ್ಚಾಗಿ ವಿಷಾದಕ್ಕೆ ಕಾರಣವಾಗುತ್ತವೆ.

ದುರಾಸೆ ಮತ್ತು ಸ್ವಾರ್ಥ: ಚಾಣಕ್ಯರು ಹೇಳುವಂತೆ ದುರಾಸೆಯು ವ್ಯಕ್ತಿಯನ್ನು ನೈತಿಕತೆಯಿಂದ ದೂರ ಮಾಡುತ್ತದೆ. ಒಬ್ಬ ವ್ಯಕ್ತಿಯು ತಾನು ಸ್ವಾರ್ಥದಿಂದ ಕೆಲಸ ಮಾಡಿದಾಗ, ಜನರು ಅಂತಹ ಸ್ವಾರ್ಥಿಯನ್ನು ನಂಬುವುದನ್ನು ನಿಲ್ಲಿಸುತ್ತಾರೆ. ಮತ್ತು ಇದು ಆತನ ಗೌರವವನ್ನೂ ಹಾಳು ಮಾಡುತ್ತದೆ.

ಸಮಯದ ಮೌಲ್ಯ ನೀಡದಿರುವುದು: ಸಮಯದ ಮಹತ್ವವನ್ನು ಅರ್ಥಮಾಡಿಕೊಳ್ಳದವರನ್ನು ಬೇಜವಾಬ್ದಾರಿಯುತ ವ್ಯಕ್ತಿಗಳು ಎಂದು ಪರಿಗಣಿಸಲಾಗುತ್ತದೆ.  ಚಾಣಕ್ಯನ ಪ್ರಕಾರ, ಸಮಯಕ್ಕೆ ಗೌರವವನ್ನು ನೀಡದವರು ಸಮಾಜದಲ್ಲಿ ಗೌರವವನ್ನು ಗಳಿಸಲು ಸಾಧ್ಯವಿಲ್ಲ. ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದರಿಂದ ಮಾತ್ರ ಗೌರವ ಸಿಗುತ್ತದೆ.

ಇದನ್ನೂ ಓದಿ: ಮನೆಯ ಶಾಂತಿಗೆ ಭಂಗ ತರಬಹುದು ಮಹಿಳೆಯರ ಅಭ್ಯಾಸಗಳು

ದುರಹಂಕಾರ: ದುರಹಂಕಾರ ಕೂಡ ವ್ಯಕ್ತಿಯ ಗೌರವವನ್ನು ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ.  ಅತಿಯಾದ ಹೆಮ್ಮೆ ಮತ್ತು ಹೆಚ್ಚಿನ ದುರಹಂಕಾರ ಹೊಂದಿರುವವರು ಎಷ್ಟೇ ಸಿರಿವಂತರಾದರೂ ಗೌರವವನ್ನು ಗಳಿಸಲು ಸಾಧ್ಯವೇ ಇಲ್ಲ.

ನಕಾರಾತ್ಮಕ ಚಿಂತನೆ ಮತ್ತು ದೂರು ನೀಡುವ ಅಭ್ಯಾಸಗಳು: ಎಲ್ಲದರ ಬಗ್ಗೆಯೂ ಇತತರಿಗೆ ದೂರು ನೀಡುವುದು ಮತ್ತು ನಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವುದು ಸಹ ಗೌರವವನ್ನು ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ