Bullet 350cc Price: 1986ರಲ್ಲಿ ಬುಲೆಟ್ 350cc ಬೆಲೆ ಎಷ್ಟಿತ್ತು ಗೊತ್ತಾ?

|

Updated on: Jan 09, 2024 | 4:35 PM

ಇತ್ತೀಚೆಗೆ ಹಳೆಯ ಸಿನಿಮಾ ಟಿಕೇಟುಗಳು, 1985ರ ರೆಸ್ಟೋರೆಂಟ್ ಬಿಲ್ ಮತ್ತು 1937ರ ಸೈಕಲ್ ಬಿಲ್ ಇಂಟರ್‌ನೆಟ್‌ನಲ್ಲಿ ಭಾರೀ ವೈರಲ್ ಆಗಿತ್ತು. ಆದರೆ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿ ಬುಲೆಟ್ 350 ಸಿಸಿ ಬಿಲ್ ಕಾಣಿಸಿಕೊಂಡಿದೆ.

Bullet 350cc Price: 1986ರಲ್ಲಿ ಬುಲೆಟ್ 350cc ಬೆಲೆ ಎಷ್ಟಿತ್ತು ಗೊತ್ತಾ?
1986ರ ಬುಲೆಟ್ 350 ಸಿಸಿ ಬಿಲ್
Image Credit source: Instagram
Follow us on

ಸಾಮಾಜಿಕ ಜಾಲತಾಣ(Social Media)ದಲ್ಲಿ ಪ್ರತಿದಿನ ಸಾಕಷ್ಟು ಪೋಸ್ಟ್​​ಗಳು, ವಿಡಿಯೋಗಳು ಹರಿದಾಡುತ್ತಿರುತ್ತದೆ. ಆದರಲ್ಲಿ ಕೆಲವೊಂದು ಭಾರೀ ಚರ್ಚೆಯಾಗುತ್ತದೆ. ಅಂತದ್ದೇ ಇನ್ಸ್ಟಾಗ್ರಾಮ್(Instagram) ಪೋಸ್ಟ್ ಒಂದು ಭಾರೀ ವೈರಲ್​​ ಆಗಿದೆ. ಇತ್ತೀಚೆಗೆ ಹಳೆಯ ಸಿನಿಮಾ ಟಿಕೇಟುಗಳು, 1985ರ ರೆಸ್ಟೋರೆಂಟ್ ಬಿಲ್ ಮತ್ತು 1937ರ ಸೈಕಲ್ ಬಿಲ್ ಇಂಟರ್‌ನೆಟ್‌ನಲ್ಲಿ ಭಾರೀ ವೈರಲ್ ಆಗಿತ್ತು. ಆದರೆ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿಯ ಬಿಲ್ ಕಾಣಿಸಿಕೊಂಡಿದೆ. ಆದರೆ ಈ ಬಿಲ್ ಸೈಕಲ್, ಸಿನಿಮಾ ಟಿಕೇಟ್​ ಅಥವಾ ರೆಸ್ಟೋರೆಂಟ್‌ ಬಿಲ್​ ಅಲ್ಲ, ಆದರೆ ಈ ಬಿಲ್ ರಾಯಲ್ ಇನ್ ಫೀಲ್ಡ್ ಬುಲೆಟ್​ ಬಿಲ್. ಆಗೀನ ಬೆಲೆ ಎಷ್ಟಿತ್ತು ಅಂತಾ ಗೊತ್ತಾದರೆ ನೀವು ಶಾಕ್​ ಆಗೋದಂತೂ ಖಂಡಿತಾ.

ಈಗೀನ ಕಾಲದಲ್ಲಿ ಒಂದು ಸಿಂಪಲ್ ಸ್ಕ್ರೀನ್​ ಟಚ್​ ಫೋನ್​ ಖರೀದಿಸಬೇಕಾದರೂ ಕಡಿಮೆ ಅಂದರೆ 15ರಿಂದ 20 ಸಾವಿರ ಬೇಕು. ಇದಲ್ಲದೇ ಮಕ್ಕಳಿಗೆ ಒಂದು ಸೈಕಲ್ ಖರೀದಿಸಿ ಕೊಡಬೇಕಾದರೂ ಕಡಿಮೆ ಅಂದರೂ 20 ಸಾವಿರ ಬೇಕು. ಅಂತದರಲ್ಲಿ ಬುಲೆಟ್ ಬೈಕ್ ಖರೀದಿಸುವುದಂತೂ ಕನಸಿನ ಮಾತು. ಹಾಗಿದ್ದಾಗ ಬುಲೆಟ್ 350 ಸಿಸಿ ಬೆಲೆ ಕೇವಲ 18ರಿಂದ 19 ಸಾವಿರ ಎಂದು ಹೇಳಿದರೆ ನೀವು ನಂಬುತ್ತೀರಾ? ಆದರೆ ಈ ಬೆಲೆ ಈಗಲ್ಲ 1986ರಲ್ಲಿ. ಹೌದು 1986ರಲ್ಲಿ ವ್ಯಕ್ತಿಯೊಬ್ಬ ಬುಲೆಟ್ ಖರೀದಿಸಿದ ಬಿಲ್ ಒಂದು ಇದೀಗಾ ಇನ್ಸ್ಟಾಗ್ರಾಮ್​ನಲ್ಲಿ ಸಾಕಷ್ಟು ವೈರಲ್ ಆಗಿದೆ. ಆ ಪೋಸ್ಟ್ ಇಲ್ಲಿದೆ ನೋಡಿ.

ಇದನ್ನೂ ಓದಿ: 70ರ ದಶಕದಲ್ಲಿ ಸಿನಿಮಾ ಟಿಕೇಟ್​​ಗಳ ಬೆಲೆ ಎಷ್ಟಿತ್ತು ಗೊತ್ತಾ?

ಈ ಪೋಸ್ಟ್​ನಲ್ಲಿ ಬುಲೆಟ್ 350 ಸಿಸಿ ಬೆಲೆ ಕೇವಲ 18,700 ರೂ ಎಂದು ಬರೆಯಲಾಗಿದೆ. ನೀವೇ ನೋಡಿ. ಸದ್ಯ ಬುಲೆಟ್ 350 ಸಿಸಿ ಬೈಕ್‌ನ ಆರಂಭಿಕ ಬೆಲೆ 1.60 ಲಕ್ಷ ರೂಪಾಯಿ ಇದೆ. ಆದರೆ ಈ ಬಿಲ್​ ಜನವರಿ 23, 1986ರಂದು ಎಂದು ತಿಳಿದುಬಂದಿದೆ. ಇದು ಪ್ರಸ್ತುತ ಜಾರ್ಖಂಡ್‌ನ ಕೊಥಾರಿ ಮಾರ್ಕೆಟ್‌ನಲ್ಲಿರುವ ಅಧಿಕೃತ ಡೀಲರ್‌ಗೆ ತಿಳಿಸಲಾಗಿದೆ. ಬಿಲ್ ಪ್ರಕಾರ, ಆ ಸಮಯದಲ್ಲಿ 350 ಸಿಸಿ ಬುಲೆಟ್ ಮೋಟಾರ್‌ಸೈಕಲ್‌ನ ಆನ್-ರೋಡ್ ಬೆಲೆ ರೂ 18,800 ಆಗಿತ್ತು, ಇದನ್ನು ರಿಯಾಯಿತಿಯ ನಂತರ ರೂ 18,700 ಕ್ಕೆ ಮಾರಾಟ ಮಾಡಲಾಯಿತು.

ಇದನ್ನೂ ಓದಿ: ಚೀನಾದ ಪುರ್ಹ್ ಟೀ ಬಗ್ಗೆ ನಿಮಗೆಷ್ಟು ಗೊತ್ತು? ಇದು ಭಾರತದಲ್ಲಿ ಲಭ್ಯವಿದೆಯೇ?

ಬಿಲ್‌ನ ಬುಲೆಟ್‌ನ ಈ ಫೋಟೋವನ್ನು ಡಿಸೆಂಬರ್ 13 ರಂದು ಇನ್ಸ್ಟಾಗ್ರಾಮ್​ನ ರಾಯಲ್ ಇನ್ ಫೀಲ್ಡ್ (royalenfield_4567k) ಪೇಜ್​ನಲ್ಲಿ ಪೋಸ್ಟ್ ಮಾಡಲಾಗಿದೆ. 1986 ರಲ್ಲಿ ರಾಯಲ್ ಇನ್ ಫೀಲ್ಡ್ 350ಸಿಸಿ ಎಂಬ ಕ್ಯಾಷ್ಟನ್ ಹಾಕಲಾಗಿದೆ.ಈ ಪೋಸ್ಟ್ ಇದುವರೆಗೆ 54 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಕಾಮೆಂಟ್ ಕೂಡ ಬಂದಿದೆ. ಅದರಲ್ಲಿನ ಒಂದು ಕಾಮೆಂಟ್ ಇಂದು ಒಂದು ತಿಂಗಳ ಕಂತು ಕೂಡ ಇದಕ್ಕಿಂತ ಹೆಚ್ಚಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಹಾಸ್ಯಸ್ಪದವಾಗಿದರೂ ಕೂಡ ಸತ್ಯ ಸಂಗತಿಯಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 9:28 am, Mon, 8 January 24