Meditation: ಧ್ಯಾನ ಮಾಡಲು ಸಾಧ್ಯವಾಗುತ್ತಿಲ್ಲವೇ? ಗಮನವನ್ನು ಹೆಚ್ಚಿಸಲು ಈ 6 ಸುಲಭ ಮಾರ್ಗಗಳನ್ನು ಅನುಸರಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 16, 2022 | 6:23 PM

ನಿಮ್ಮ ಮನಸ್ಸು ಬೇರೆ ಕಡೆ ಗಮನ ನೀಡುವುದನ್ನು ಮೊದಲು ನಿಲ್ಲಿಸಿ. ಧಾನ್ಯದಿಂದ  ಬೇರೆ ಕಡೆ  ನಿಮ್ಮ ಮನಸ್ಸನ್ನು ಅಲೆದಾಡುವುದನ್ನು ನಿಲ್ಲಿಸಬಹುದು ಮತ್ತು ಧ್ಯಾನದ ಸಮಯದಲ್ಲಿ ನಿಮ್ಮ ಆಲೋಚನೆಗಳಲ್ಲಿ ಕಳೆದುಹೋಗುವುದನ್ನು ತಡೆಯಬಹುದು.

Meditation: ಧ್ಯಾನ ಮಾಡಲು ಸಾಧ್ಯವಾಗುತ್ತಿಲ್ಲವೇ? ಗಮನವನ್ನು ಹೆಚ್ಚಿಸಲು ಈ 6 ಸುಲಭ ಮಾರ್ಗಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us on

ನೀವು ಧ್ಯಾನ ಮಾಡುವಾಗ, ನಿಮ್ಮ ಮನಸ್ಸನ್ನು ಏಕಾಗ್ರತೆಯಲ್ಲಿ ಇರಿಸುವ ಪ್ರಯತ್ನವನ್ನು ಮಾಡಿ. ನಿಮ್ಮ ಮನಸ್ಸಿನಲ್ಲಿ  ಬೇರೆ ಬೇರೆ ಗೊಂದಲಗಳು, ಯೋಚನೆಗಳು ಇರಬಹುದು ಆದರೆ ಅವುಗಳಿಂದ ಮುಕ್ತವಾಗಿ ಧ್ಯಾನವನ್ನು ಮಾಡಬೇಕು.  ನಿಮ್ಮ ಮನಸ್ಸು ಬೇರೆ ಕಡೆ ಗಮನ ನೀಡುವುದನ್ನು ಮೊದಲು ನಿಲ್ಲಿಸಿ. ಧಾನ್ಯದಿಂದ  ಬೇರೆ ಕಡೆ  ನಿಮ್ಮ ಮನಸ್ಸನ್ನು ಅಲೆದಾಡುವುದನ್ನು ನಿಲ್ಲಿಸಬಹುದು ಮತ್ತು ಧ್ಯಾನದ ಸಮಯದಲ್ಲಿ ನಿಮ್ಮ ಆಲೋಚನೆಗಳಲ್ಲಿ ಕಳೆದುಹೋಗುವುದನ್ನು ತಡೆಯಬಹುದು. ಧ್ಯಾನದ ಸಮಯದಲ್ಲಿ ಗಮನವನ್ನು ಹೆಚ್ಚಿಸಲು ಇಲ್ಲಿ ಕೆಲವೊಂದು ತಜ್ಞರು ಸಲಹೆ ಇದೆ.

ಮಂತ್ರವನ್ನು ಪಠಿಸಿ 

ಮನಸ್ಸಿನ ವಿಶ್ರಾಂತಿ ಸ್ಥಿತಿಗಾಗಿ, ಧ್ಯಾನ ಮಾಡುವಾಗ ನಿಧಾನವಾಗಿ ಮಂತ್ರವನ್ನು ಹೇಳಿ. ವಾಸ್ತವವಾಗಿ, ನೀವು ಸ್ಥಾನದಲ್ಲಿ ಆರಾಮದಾಯಕವಾಗುವವರೆಗೆ ಮತ್ತು ಧ್ಯಾನ ಮಾಡಲು ಸಿದ್ಧವಾಗುವವರೆಗೆ ನೀವು ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಬಹುದು. ಧ್ಯಾನದ ಸಮಯದಲ್ಲಿ ಮಂತ್ರ ಪಠಿಸಿದರೆ ನಿಮ್ಮ ದೇಹಕ್ಕೆ ಒಮದು ರೀತಿಯ ಸಮಾಧನ ಮತ್ತು ಮಾನಸಿಕ ನೆಮ್ಮದಿ, ಜೊತೆಗೆ ಧ್ಯಾನದ ಸಮಯದಲ್ಲಿ ನಿಮ್ಮ ಮನಸ್ಸು ಬೇರೆ ಕಡೆಗೆ ಹೋಗದಂತೆ ನೋಡಿಕೊಳ್ಳತ್ತದೆ.

ಇದನ್ನೂ ಓದಿ
ಬೆಂಗಳೂರು ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ! ಟೆಂಪೋ, ಬಿಎಂಟಿಸಿ ಬಸ್ ನಡುವೆ ಸಿಲುಕಿ ಆಟೋ ಜಖಂ
36 ವರ್ಷದ ಬಳಿಕ ಮರುಕಳಿಸಿತು ಇತಿಹಾಸ; ಕಮಲ್​ ಹಾಸನ್​-ಚಿರಂಜೀವಿ ಸ್ನೇಹದ ರೆಟ್ರೋ ಫೋಟೋ ವೈರಲ್
ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ಚುನಾವಣೆ: ಇಂದು ಮೂರು ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Chicago Shootings: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು, ಚಿಕಾಗೊದಲ್ಲಿ ಐವರು ಸಾವು, 16 ಮಂದಿಗೆ ಗಾಯ

ಮೌನವಾಗಿರುವ ಸಮಯದಲ್ಲಿ ಧ್ಯಾನ ಮಾಡಿ 

ಬೆಳಿಗ್ಗೆ ಧ್ಯಾನ ಮಾಡಲು ಉತ್ತಮ ಸಮಯ ಏಕೆಂದರೆ ಪರಿಸರವು ಶಾಂತಿಯುತವಾಗಿದೆ. ತಜ್ಞರು ಹೇಳುವಂತೆ  ನೀವು ಮುಂಜಾನೆ ಸಮಯದಲ್ಲಿ ಧ್ಯಾನ ಮಾಡಬೇಕು, ಈ ಸಮಯದಲ್ಲಿ  ವಿಶಾಲವಾದ, ಶಾಂತಿಯುತ ವಾತಾವರಣ ಇರುತ್ತದೆ.  ಆಕಾಶದ ಮೇಲೆ ನಿಮ್ಮ ಕಣ್ಣುಗಳನ್ನು ಇರಿಸಿ ಮತ್ತು ನೀವು ಆಂತರಿಕ ಮೌನವನ್ನು ಅವಲಮಭಿಸುವ ಮೂಲಕ,  ​​ಉದಯಿಸುವ ಸೂರ್ಯನೊಂದಿಗೆ ಧ್ಯಾನವನ್ನು ಆರಂಭಿಸಿದಾಗ  ನಿಮ್ಮ ಮೇಲೆ ಅದ್ಭುತವಾದ ಪರಿಣಾಮವನ್ನು ಉಂಟು ಮಾಡುತ್ತದೆ.

ನಿಮ್ಮ ದೇಹವನ್ನು ಮುದ್ದಿಸಲು ಕೆಲವು ಯೋಗಗಳನ್ನು ಮಾಡಿ 

ನಿಮ್ಮ ದೇಹವು ತುಂಬಾ ಬಿಗಿತ ಅಥವಾ ಒತ್ತಡದಲ್ಲಿ ಇದ್ದಾಗ ಧ್ಯಾನವನ್ನು ಮಾಡಬೇಕು.  ನೀವು ಕೆಲವು ಯೋಗ ಆಸನಗಳನ್ನು ಮಾಡುವ ಮೂಲಕ ಈ ಬಿಗಿತ ಮತ್ತು ಚಡಪಡಿಕೆಯನ್ನು ತೊಡೆದುಹಾಕಬಹುದು  ಎಂದು ತಜ್ಞರು ಹೇಳುತ್ತಾರೆ.  ನಿಮ್ಮ ಮನಸ್ಸು ಶಾಂತವಾಗುತ್ತದೆ ಮತ್ತು ನೀವು ಧ್ಯಾನಕ್ಕೆ ಹೆಚ್ಚು ಮನಸ್ಸನಲ್ಲಿ ನೀಡಬಹುದು. ಯೋಗ ಮಾಡುವಾಗ ನಿಮ್ಮ ದೇಹಕ್ಕೆ ಬಿಗಿತ ನೀಡುವ ಯೋಗಗಲನ್ನು ಮಾಡಬಾರದ ಮತ್ತು ಹೆಚ್ಚು ಒತ್ತಡವನ್ನು ಹಾಕಬಾರದು.

ಆಹಾರದ ಮೇಲೆ ಗಮನ ನೀಡಿ

ಕರಿದ, ಎಣ್ಣೆಯುಕ್ತ ಮತ್ತು ಮಾಂಸಾಧಾರಿತ ಊಟಗಳನ್ನು ಸೇವಿಸಿದ ನಂತರ ನೀವು ಧ್ಯಾನ ಮಾಡಿದರೆ ಅದರಿಂದ ಯಾವುದೇ ಪ್ರಯೋಜನ ಇಲ್ಲ. ದೇಹದ ಆರೋಗ್ಯ ಮೇಲೆ ಹೆಚ್ಚು ಗಮನ ನೀಡುವ ಹಾರಗಳನ್ನು ಸೇವನೆ ಮಾಡಿ.  ಆರೋಗ್ಯಕರ ಊಟವನ್ನು ಸೇವಿಸಿದ ನಂತರ ನೀವು ಧ್ಯಾನ ಮಾಡಿದರೆ ನಿಮ್ಮ ದಿನ ಉತ್ತಮವಾಗಿರುತ್ತದೆ.  ಇದರಿಂದ ನಿಮ್ಮ ದೇಹದ ಮೇಲೆ ಯಾವೆಲ್ಲ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬುದನ್ನು ನೀವು ನೋಡಿ.

ಹಾಡು ಅಭ್ಯಾಸ ಇರಲಿ 

ಸಂಗೀತಗಳು ನಮ್ಮ ಮನಸ್ಸಿಗೆ ಒಂದು ಶಾಂತಿಯನ್ನು ಸೃಷ್ಟಿ ಮಾಡುತ್ತದೆ. ಜೊತೆಗೆ ನಮ್ಮ ಮನಸ್ಸಿನ ಮೂಡುಗಳನ್ನು ಬದಲಾವಣೆ ಮಾಡುತ್ತದೆ. ನಮ್ಮ ಮನಸ್ಸು ಮತ್ತು ಆಲೋಚನೆಗಳಿಗೆ ಶಾಂತಿ ನೀಡುವ ಹಾಡುಗಳನ್ನು ಧ್ಯಾನ ಮಾಡುವಾಗ ಹಾಡಿದರೆ ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಮನಸ್ಸಿಗೆ ಹೆಚ್ಚು ಭಾವನಾತ್ಮಕವಾಗಿರಲು ಹೆಚ್ಚು ಪ್ರೇರಣೆಯನ್ನು ನೀಡುತ್ತದೆ.

ಧ್ಯಾನದ ಅವಧಿಯನ್ನು ಯೋಜಿಸಿ

ಧ್ಯಾನವೆಂಬುದು ಹೆಚ್ಚು ರಹಸ್ಯವಾಗಿರುತ್ತದೆ ಮತ್ತು  ಶಿಸ್ತನ್ನು ಕಾಪಾಡಿಕೊಳ್ಳುವುದು ಮತ್ತು ಅಭ್ಯಾಸವನ್ನು ಗೌರವಿಸುವುದು. ಆದ್ದರಿಂದ, ಪ್ರತಿ ದಿನವೂ ನಿಗದಿತ ಸಮಯದಲ್ಲಿ ಧ್ಯಾನ ಮಾಡಿ.

Published On - 6:22 pm, Sat, 16 July 22