Teachers Day Gift Ideas: ನಿಮ್ಮ ನೆಚ್ಚಿನ ಶಿಕ್ಷಕರಿಗೆ ಈ ಉಡುಗೊರೆಗಳನ್ನು ನೀಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿ

| Updated By: ಅಕ್ಷತಾ ವರ್ಕಾಡಿ

Updated on: Sep 02, 2023 | 5:51 PM

ಪ್ರತಿವರ್ಷ ಸೆಪ್ಟೆಂಬರ್ 5 ರಂದು ದೇಶಾದ್ಯಂತ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಶಿಕ್ಷಕರಿಗೆ ಅವರ ಮಾರ್ಗದರ್ಶನ ಮತ್ತು ಅವರು ತೋರಿದ ಪ್ರೀತಿಗಾಗಿ ಧನ್ಯವಾದ ಹೇಳುತ್ತಾರೆ. ನೀವು ಈ ಬಾರಿಯ ಶಿಕ್ಷಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಬೇಕೆಂದು ಬಯಸಿದರೆ, ನಿಮ್ಮ ನೆಚ್ಚಿನ ಶಿಕ್ಷಕರಿಗೆ ಈ ಕೆಲವು ಉಡುಗೊರೆಯನ್ನು ನೀಡುವ ಮೂಲಕ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ.

Teachers Day Gift Ideas: ನಿಮ್ಮ ನೆಚ್ಚಿನ ಶಿಕ್ಷಕರಿಗೆ ಈ ಉಡುಗೊರೆಗಳನ್ನು ನೀಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿ
Teachers Day Gift Ideas
Image Credit source: Youtube
Follow us on

ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವವರು ಹಾಗೂ ಅವರು ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಸಮಾಜದ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಮಕ್ಕಳಿಗೆ ಜೀವನದಲ್ಲಿ ಮುನ್ನಡೆಯಲು ತಂದೆತಾಯಿ ಹೇಗೆ ದಾರಿ ತೋರುತ್ತಾರೋ, ಅದೇ ರೀತಿ ಯಾವುದೇ ಸ್ವಾರ್ಥ ಭಾವನೆಯಿಲ್ಲದೆ ಮಕ್ಕಳಿಗೆ ಸರಿಯಾದ ದಾರಿಯನ್ನು ತೋರುವ ಮೂಲಕ ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸುವವರೇ ಶಿಕ್ಷಕರು.  ನಮ್ಮೆಲ್ಲರ ಜೀವನದಲ್ಲಿ ಶಿಕ್ಷಕರಿಗೆ ವಿಶೇಷ ಮಹತ್ವವಿದೆ.  ಅದೇ ರೀತಿ ಎಲ್ಲರಿಗೂ ಅವರ ಅಚ್ಚುಮೆಚ್ಚಿನ ಶಿಕ್ಷಕರೊಬ್ಬರಿರುತ್ತಾರೆ.  ಆ ನಿಮ್ಮ ನೆಚ್ಚಿನ ಶಿಕ್ಷಕರಿಗೆ ಈ ಬಾರಿಯ ಶಿಕ್ಷಕರ ದಿನಾಚರಣೆಯಂದು ಈ ಕೆಲವು ಉಡುಗೊರೆಗಳನ್ನು ನೀಡುವ ಮೂಲಕ ವಿಶೇಷವಾಗಿ ಶುಭಾಶಯವನ್ನು ಕೋರಿ.

ವಿದ್ಯಾರ್ಥಿಗಳು ಶಿಕ್ಷಕರಿಗೆ ನೀಡಬಹುದಾದ ವಿಶೇಷ ಉಡುಗೊರೆಗಳು:

ಪೆನ್ ಮತ್ತು ಡೈರಿ:

ಪೆನ್ನು ಮತ್ತು ಡೈರಿಗಿಂತ ಶಿಕ್ಷಕರಿಗೆ ಉತ್ತಮ ಕೊಡುಗೆ ಯಾವುದಿದೆ ಹೇಳಿ. ಶಿಕ್ಷಕರಿಗೆ ಯಾವಾಗಲೂ ಪೆನ್ನುಗಳು ಬೇಕಾಗುತ್ತದೆ. ನೀವು ನಿಮ್ಮ ಶಿಕ್ಷಕರಿಗೆ ಪೆನ್ನು ಮತ್ತು ಲೇಖನ ಸಾಮಾಗ್ರಿಗಳ ಸೆಟ್ ಮತ್ತು ಅದರೊಂದಿಗೆ ಸುಂದರವಾದ ಡೈರಿಯನ್ನು ನೀಡಬಹುದು. ಅವರು ದೈನಂದಿನ ಜೀವನದಲ್ಲಿ ಆ ವಸ್ತುಗಳನ್ನು ಬಳಸುವ ಮೂಲಕ ನಿಮ್ಮನ್ನು ನೆನಪಿಸಕೊಳ್ಳುತ್ತಾರೆ.

ಗಿಡಗಳು:

ಅನೇಕ ಜನರು ಗಿಡಗಳನ್ನು ತುಂಬಾ ಇಷ್ಟಪಡುತ್ತಾರೆ. ನಿಮ್ಮ ನೆಚ್ಚಿನ ಶಿಕ್ಷಕರಿಗೂ ಕೂಡಾ ಗಿಡಗಳೆಂದರೆ ಇಷ್ಟವೇ, ಹಾಗಿದ್ದರೆ ಈ ಬಾರಿಯ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಶಿಕ್ಷಕರಿಗೆ ಮುದ್ದಾದ ಗಿಡವನ್ನು ಉಡುಗೊರೆಯನ್ನಾಗಿ ನೀಡಬಹುದು. ಪ್ರತಿನಿತ್ಯ ಆ ಗಿಡಕ್ಕೆ ನೀರೆರೆಯುವ ಮೂಲಕ ಶಿಕ್ಷಕರು ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ.

ಪೆನ್ ಸ್ಟ್ಯಾಂಡ್:

ನೀವು ನಿಮ್ಮ ನೆಚ್ಚಿನ ಶಿಕ್ಷಕರಿಗೆ ವಿಶೇಷವಾದ ಉಡುಗೊತೆಯನ್ನು ನೀಡಬೇಕೆಂದು ಬಯಸಿದರೆ, ಸುಂದರವಾದ ಪೆನ್ಸ್ಟ್ಯಾಂಡ್ ನ್ನು ಉಡುಗೊರೆಯಾಗಿ ನೀಡಬಹುದು. ಈ ವಿಶೇಷ ಉಡುಗೊರೆಯು ಅವರಿಗೆ ಪೆನ್ಗಳನ್ನು ಸಂಗ್ರಹಿಸಲು ಉಪಯುಕ್ತವಾಗುತ್ತದೆ.

ಫೋಟೋ ಕೊಲಾಜ್:

ಫೋಟೋಗಳು ಅನೇಕ ನೆನಪುಗಳನ್ನು ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆ ಆದ್ದರಿಂದ ನೀವು ನಿಮ್ಮ ಶಿಕ್ಷಕರೊಂದಿಗೆ ತೆಗೆದ ಪೋಟೋಗಳನ್ನು ಕೊಲೇಜ್ ಮಾಡಿ ಉಡುಗೊರೆಯನ್ನಾಗಿ ನೀಡಬಹುದು. ಅಥವಾ ಅವರ ಕುಟುಂಬದೊಂದಿಗಿನ ಫೋಟೋವನ್ನು ಫ್ರೇಮ್ ಮಾಡಿ ಉಡುಗೊರೆಯಾಗಿ ನೀಡಬಹುದು.

ಇದನ್ನೂ ಓದಿ: ಈ ನರ್ಸ್​​​ ವಿಶ್ವದಲ್ಲೇ ಅತ್ಯಂತ ಉದ್ದನೆಯ ಜಡೆ ಹೊಂದಿದ್ದಾರೆ! ಎಷ್ಟು ಉದ್ದ ಇರಬಹುದು?

ಕವಿತೆಗಳನ್ನು ಬರೆಯಬಹುದು:

ಹೆಚ್ಚಿನ ಶಿಕ್ಷಕರು ವಿದ್ಯಾರ್ಥಿಗಳಿಂದ ಉಡುಗೊರೆಯನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಏಕೆಂದರೆ ಮಕ್ಕಳು ಸುಖಾಸುಮ್ಮನೆ ಹಣ ಖರ್ಚು ಮಾಡುವುದು ಅವರಿಗೆ ಇಷ್ಟವಿರುವುದಿಲ್ಲ. ಹೀಗಿರುವಾಗ ನಿಮ್ಮ ನೆಚ್ಚಿನ ಶಿಕ್ಷಕರಿಗಾಗಿ ಸುಂದರ ಕವಿತೆ ಬರೆದು ಅಥವಾ ಅರ್ಥಪೂರ್ಣ ಡ್ರಾಯಿಂಡ್ ಮಾಡಿ ಅದನ್ನು ಅವರಿಗೆ ಉಡುಗೊರೆಯಾಗಿ ನೀಡಬಹುದು.

ಪುಸ್ತಕ:

ಪ್ರತಿಯೊಬ್ಬ ಶಿಕ್ಷಕರೂ ಕೂಡ ಪುಸ್ತಕಗಳನ್ನು ಓದಲು ಇಷ್ಟಪಡುತ್ತಾರೆ. ಆದ್ದರಿಂದ ಈ ಸಂದರ್ಭದಲ್ಲಿ ನೀವು ನಿಮ್ಮ ಶಿಕ್ಷಕರಿಗೆ ಅವರ ನೆಚ್ಚಿನ ಬರಹಗಾರರ ಪುಸ್ತಕವನ್ನು ಉಡುಗೊರೆಯಾಗಿ ನೀಡಬಹುದು. ಅವರು ಖಂಡಿತವಾಗಿಯೂ ಈ ಉಡುಗೊರೆಗಳನ್ನು ಇಷ್ಟಪಡುತ್ತಾರೆ.

ಕಾಫಿ ಕಪ್​​​:

ನೀವು ನಿಮ್ಮ ನೆಚ್ಚಿನ ಶಿಕ್ಷಕರಿಗೆ ಸುಂದರವಾದ ಕಾಫಿ ಮಗ್ ಗಳನ್ನು ಉಡುಗೊರೆಯಾಗಿ ನೀಡಬಹುದು. ಅದರಲ್ಲಿ ಶಿಕ್ಷಕರ ಫೋಟೋ ಮುದ್ರಣ ಮಾಡುವ ಮೂಲಕ ಉಡುಗೊರೆಯನ್ನು ಇನ್ನಷ್ಟು ಸುಂದರಗಳಿಸಬಹುದು.

ಹೂಗಚ್ಛ:

ನಿಮ್ಮ ಅಚ್ಚುಮೆಚ್ಚಿನ ಶಿಕ್ಷಕರಿಗೆ ನೀವು ಯಾವ ಉಡುಗೊರೆಯನ್ನು ನೀಡಬೇಕು ಎಂಬ ಗೊಂದಲದಲ್ಲಿದ್ದರೆ, ನೀವು ಸರಳವಾಗಿ ಹೂಗುಚ್ಛವನ್ನು ಉಡುಗೊರೆಯಾಗಿ ನೀಡುವ ಮೂಲಕ ಶಿಕ್ಷಕರ ದಿನಾಚರಣೆಯ ಶುಭಾಶಯವನ್ನು ಕೋರಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: