China: ಚೀನಾದ ಶಿಶುವಿಹಾರದಲ್ಲಿ ವ್ಯಕ್ತಿಯಿಂದ ಚಾಕು ಇರಿತ, ಮಕ್ಕಳು, ಶಿಕ್ಷಕರು ಸೇರಿ 6 ಮಂದಿ ಸಾವು
ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಶಿಶುವಿಹಾರದಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದು ಮಕ್ಕಳು, ಶಿಕ್ಷಕರು ಸೇರಿ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಶಿಶುವಿಹಾರದಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದು ಮಕ್ಕಳು, ಶಿಕ್ಷಕರು ಸೇರಿ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಬ್ಬರಿಗೆ ಗಂಭೀರ ಗಾಯಗಳಾಗಿವೆ. ಲಿಯಾಂಜಿಯಾಂಗ್ ಕೌಂಟಿಯಲ್ಲಿ ನಡೆದ ದಾಳಿಯ ಬಗ್ಗೆ ಮಾಧ್ಯಮಗಳು ಮಾಹಿತಿ ನೀಡಿವೆ. ಓರ್ವ ಶಂಕಿತನನ್ನು ಬಂಧಿಸಲಾಗಿದೆ.
ಮೃತಪಟ್ಟವರಲ್ಲಿ ಓರ್ವ ಶಿಕ್ಷಕ, ಇಬ್ಬರು ಪೋಷಕರು ಮತ್ತು ಮೂವರು ವಿದ್ಯಾರ್ಥಿಗಳು ಸೇರಿದ್ದಾರೆ. ಓರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಇದನ್ನು ಉದ್ದೇಶಪೂರ್ವ ಹಲ್ಲೆ ಎಂದು ಕರೆದಿದ್ದಾರೆ. ಯಾವುದೋ ದುರುದ್ದೇಶದಿಂದಲೇ ಹಲ್ಲೆ ನಡೆಸಲಾಗಿದೆ ಎನ್ನುವ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಓದಿ: Chikkamagaluru News: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಅನ್ಯಕೋಮಿನ ಗುಂಪಿನಿಂದ ಚಾಕು ಇರಿತ
ಚೀನಾದ ಹಲವು ಶಾಲೆಗಳಲ್ಲಿ ಇತ್ತೀಚೆಗೆ ಸಾಕಷ್ಟು ಇಂತಹ ಘಟನೆಗಳು ನಡೆದಿವೆ. ಆಗಸ್ಟ್ 2022 ರಲ್ಲಿ, ಆಗ್ನೇಯ ಜಿಯಾಂಗ್ಕ್ಸಿ ಪ್ರಾಂತ್ಯದ ಶಿಶುವಿಹಾರದ ಮೇಲೆ ಆಕ್ರಮಣಕಾರರು ನಡೆಸಿದ್ದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದರು ಮತ್ತು ಆರು ಮಂದಿ ಗಾಯಗೊಂಡಿದ್ದರು.
2021ರ ಏಪ್ರಿಲ್ನಲ್ಲಿ ಗುವಾಂಗ್ಕ್ಸಿ ಜುವಾಂಗ್ ಪ್ರದೇಶದ ಬೈಲಿಯು ನಗರದಲ್ಲಿ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು ಮತ್ತು 16 ಇತರರು ಗಾಯಗೊಂಡರು. ಅಕ್ಟೋಬರ್ 2018 ರಲ್ಲಿ, ನೈಋತ್ಯ ಚೀನಾದ ಚಾಂಗ್‌ಕಿಂಗ್‌ನಲ್ಲಿರುವ ಶಿಶುವಿಹಾರದಲ್ಲಿ ನಡೆದ ದಾಳಿಯಲ್ಲಿ 14 ಮಕ್ಕಳು ಗಾಯಗೊಂಡಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ