Toronto: ಭಾರತೀಯ ದೂತವಾಸ ಕಚೇರಿ ಎದುರು ಖಲಿಸ್ತಾನಿಗಳ ಪ್ರತಿಭಟನೆ: ತ್ರಿವರ್ಣ ಧ್ವಜ ಬೀಸುವ ಮೂಲಕ ತಕ್ಕ ಉತ್ತರ ನೀಡಿದ ಭಾರತೀಯರು

ಕೆನಡಾದ ಒಂಟಾರಿಯೋ ರಾಜಧಾನಿ ಟೊರೊಂಟೊ(Toronto)ದಲ್ಲಿ ಭಾರತೀಯ ದೂತವಾಸ ಕಚೇರಿ ಎದುರು ಖಲಿಸ್ತಾನಿ(Khalistani) ಬೆಂಬಲಿಗರು ಪ್ರತಿಭಟನೆ ನಡೆಸಿದರು.

Toronto: ಭಾರತೀಯ ದೂತವಾಸ ಕಚೇರಿ ಎದುರು ಖಲಿಸ್ತಾನಿಗಳ ಪ್ರತಿಭಟನೆ: ತ್ರಿವರ್ಣ ಧ್ವಜ ಬೀಸುವ ಮೂಲಕ ತಕ್ಕ ಉತ್ತರ ನೀಡಿದ ಭಾರತೀಯರು
ಪ್ರತಿಭಟನೆImage Credit source: Free Press Journal
Follow us
ನಯನಾ ರಾಜೀವ್
|

Updated on: Jul 09, 2023 | 11:21 AM

ಕೆನಡಾದ ಒಂಟಾರಿಯೋ ರಾಜಧಾನಿ ಟೊರೊಂಟೊ(Toronto)ದಲ್ಲಿ ಭಾರತೀಯ ದೂತವಾಸ ಕಚೇರಿ ಎದುರು ಖಲಿಸ್ತಾನಿ(Khalistani) ಬೆಂಬಲಿಗರು ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಯಾಗಿ ಭಾರತೀಯರು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಭಯೋತ್ಪಾದಕ ಹರ್ದೀಪ್​ ಸಿಂಗ್ ನಿಜ್ಜರ್ ಹತ್ಯೆಯ ನಂತರ ಜುಲೈ 8ರಂದು ಖಲಿಸ್ತಾನಿ ಬೆಂಬಲಿಗರು ವಿದೇಶದಲ್ಲಿ ಕಿಲ್ ಇಂಡಿಯಾ ರ್ಯಾಲಿ ಆಯೋಜಿಸಿದ್ದರು.

ಎಎನ್​ಐ ಸುದ್ದಿ ಸಂಸ್ಥೆಯ ಮಾಹಿತಿ ಪ್ರಕಾರ, ಖಲಿಸ್ತಾನಿ ಬೆಂಬಲಿಗರು ಟೊರೊಂಟೊದಲ್ಲಿರುವ ಭಾರತೀಯ ದೂತವಾಸದ ಹೊರಗೆ ಹಳದಿ ಬಾವುಟ ಹಿಡಿದು ಪ್ರತಿಭಟನೆ ನಡೆಸಿದರು. ರಸ್ತೆಯ ಇನ್ನೊಂದು ಬದಿಯಲ್ಲಿ ಭಾರತೀಯ ಸಮುದಾಯವು ತ್ರಿವರ್ಣ ಧ್ವಜವನ್ನು ಬೀಸುತ್ತಿದ್ದರು.

ಮತ್ತೊಂದೆಡೆ, ಖಲಿಸ್ತಾನಿ ಬೆಂಬಲಿಗರು ಪ್ರತಿಭಟಿಸುವ ನಿರೀಕ್ಷೆ ಇರುವ ಕಾರಣ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎದುರು ಭದ್ರತೆ ಹೆಚ್ಚಿಸಲಾಗಿದೆ.

ಇದಕ್ಕೂ ಮೊದಲು ಜುಲೈ 2 ರಂದು ಖಲಿಸ್ತಾನಿ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಕ್ಯಾಲಿಫೋರ್ನಿಯಾದಲ್ಲಿರುವ ಭಾರತೀಯ ದೂತವಾಸ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು.

ಮತ್ತಷ್ಟು ಓದಿ: Khalistan Terrorists: ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ 21 ಖಲಿಸ್ತಾನಿಗಳ ಹೆಸರು ಪ್ರಕಟಿಸಿದ ಎನ್​ಐಎ

ಯುಎಸ್ ಸ್ಟೇಟ್ ಡಿಪಾರ್ಟ್​ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಟ್ವೀಟ್​ನಲ್ಲಿ ಖಲಿಸ್ತಾನಿ ಬೆಂಬಲಿಗರ ನಡೆಯನ್ನು ಬಲವಾಗಿ ಖಂಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿಗರು ಭಾರತ ವಿರೋಧಿ ಪೋಸ್ಟರ್​ಗಳನ್ನು ಅಂಟಿಸಿ ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ ಹಾಕಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ