
ಗಂಡ ಮತ್ತು ಹೆಂಡತಿಯ (Husband Wife) ನಡುವಿನ ಸಂಬಂಧವು ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯನ್ನು ಆಧರಿಸಿದೆ. ಅಲ್ಲದೆ ಸಂಬಂಧದಲ್ಲಿ ಮುಚ್ಚುಮರೆ ಇರಬಾರದು, ಸಂಬಂಧಗಳು ಪಾರದರ್ಶಕತೆ ಮತ್ತು ನಂಬಿಕೆಯನ್ನು ಆಧರಿಸಿರಬೇಕು. ಪತಿ ಪತ್ನಿಯರ ಸಂಬಂಧ ತೆರೆದ ಪುಸ್ತಕದಂತಿರಬೇಕು ಹೀಗಿದ್ದರೆ ಮಾತ್ರ ಬಂಧವು ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳುತ್ತಾರೆ. ಹೀಗೆ ಗಂಡ ಹೆಂಡತಿ ಪರಸ್ಪರ ಪ್ರತಿಯೊಂದು ವಿಚಾರಗಳನ್ನು ಸಹ ಹಂಚಿಕೊಳ್ಳುತ್ತಾರೆ. ಹೀಗಿದ್ದರೂ ಕೂಡಾ ಹೆಂಡತಿಯಾದವಳು ಒಂದಷ್ಟು ಸೀಕ್ರೆಟ್ ವಿಚಾರಗಳನ್ನು ಯಾವತ್ತಿಗೂ ತನ್ನ ಗಂಡನ ಬಳಿ ಹೇಳಿಕೊಳ್ಳುವುದಿಲ್ಲ ಎಂದು ಚಾಣಕ್ಯ (Acharya Chanakya) ಹೇಳುತ್ತಾರೆ. ಹಾಗಾದ್ರೆ ಹೆಂಡತಿಯಾದವಳು ಯಾವೆಲ್ಲಾ ವಿಚಾರಗಳನ್ನು ತನ್ನ ಗಂಡನಿಂದ ಮರೆ ಮಾಡುತ್ತಾಳೆ ಎಂಬ ಮಾಹಿತಿ ಇಲ್ಲಿದೆ.
ಸೀಕ್ರೆಟ್ ಕ್ರಶ್: ಆಚಾರ್ಯ ಚಾಣಕ್ಯ ಹೇಳುವಂತೆ ಮಹಿಳೆ ಮದುವೆಗೂ ಮುಂಚೆ ಯಾರನ್ನಾದರೂ ಇಷ್ಟಪಟ್ಟಿದ್ದರೆ ಅಥವಾ ಕ್ರಶ್ ಆಗಿದ್ರೆ ಈ ರಹಸ್ಯವನ್ನು ಆಕೆ ಯಾರೊಂದಿಗೂ ಕೂಡಾ ಶೇರ್ ಮಾಡುವುದಿಲ್ಲವಂತೆ. ಜೀವನದುದ್ದಕ್ಕೂ ಆಕೆ ತನ್ನ ಗಂಡನಿಂದ ಈ ರಹಸ್ಯವನ್ನು ಮುಚ್ಚಿಡುತ್ತಾಳಂತೆ
ಪ್ರಣಯದ ರಹಸ್ಯ: ಚಾಣಕ್ಯ ನೀತಿಯ ಪ್ರಕಾರ, ಪತಿ ಮತ್ತು ಪತ್ನಿಯ ನಡುವಿನ ಸಂಬಂಧದಲ್ಲಿ ಪ್ರಣಯವು ಪ್ರಮುಖ ಪಾತ್ರ ವಹಿಸುತ್ತದೆ. ಪತಿ ಪತ್ನಿಯ ಬಳಿ ಇಬ್ಬರೂ ಒಟ್ಟಿಗೆ ಕಳೆದ ಆತ್ಮೀಯ ಕ್ಷಣಗಳ ಬಗ್ಗೆ ಕೇಳಿದಾಗ, ಪತ್ನಿ ಅಪೂರ್ಣ ಸತ್ಯವನ್ನು ಮಾತ್ರ ಹೇಳುತ್ತಾಳೆ. ಪ್ರಣಯದ ಬಗ್ಗೆ ಹೆಂಡತಿಯರಿಗೆ ವಿಭಿನ್ನ ಆಸೆಗಳಿರುತ್ತವೆ ಆದರೆ ಅವರು ತಮ್ಮ ಆಸೆಗಳು ಮತ್ತು ತೃಪ್ತಿಯ ಬಗ್ಗೆ ತಮ್ಮ ಗಂಡಂದಿರಿಗೆ ಬಹಿರಂಗವಾಗಿ ಹೇಳುವುದಿಲ್ಲವಂತೆ.
ಉಳಿತಾಯ: ಹೆಂಡತಿಯನ್ನು ಮನೆಯ ಲಕ್ಷ್ಮಿ ಎಂದು ಕರೆಯಲಾಗುತ್ತದೆ. ಪತ್ನಿ ಮನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಹಾಗೂ ಆರ್ಥಿಕ ಸಂಕಷ್ಟದ ಸಮಯದಲ್ಲಿ ಮನೆಯನ್ನು ಸುಧಾರಿಸುವಲ್ಲಿ ಅವರು ಬಹಳ ನಿರ್ಣಾಯಕ ಪಾತ್ರ ವಹಿಸುತ್ತಾಳೆ. ಆಕೆ ತನ್ನ ಪತಿ ಖರ್ಚಿಗೆ ನೀಡುವ ಹಣವನ್ನು ಜೋಪಾನವಾಗಿ ಎತ್ತಿಡುತ್ತಾಳೆ. ಈ ಉಳಿತಾಯದ ಬಗ್ಗೆ ಆಕೆ ತನ್ನ ಪತಿಯೊಂದಿಗೂ ಕೂಡಾ ಹೇಳುವುದಿಲ್ಲ. ಪತಿ ಅಥವಾ ಕುಟುಂಬ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾಗ ಈ ಹಣವನ್ನು ಆಕೆ ಉಪಯೋಗಿಸುತ್ತಾಳೆ.
ಇದನ್ನೂ ಓದಿ: ನಿಮ್ಮ ಗಂಡ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ್ರೆ, ಅವ್ರನ್ನ ಈ ರೀತಿ ಶಾಂತಗೊಳಿಸಿ
ಅನಾರೋಗ್ಯ: ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರು ತಮ್ಮ ಅನಾರೋಗ್ಯವನ್ನು ಗಂಡಂದಿರಿಂದ ಮರೆಮಾಡುತ್ತಾರೆ. ಹೌದು ಹೆಂಡತಿ ತನ್ನ ಗಂಡನಿಗೆ ಯಾವುದೇ ಸಮಸ್ಯೆಗಳನ್ನು ಉಂಟು ಮಾಡಲು ಬಯಸುವುದಿಲ್ಲ. ಹಾಗಾಗಿ ಅನಗತ್ಯವಾಗಿ ನಮ್ಮಿಂದ ಗಂಡಂದಿರಿಗೆ ತೊಂದರೆ ಆಗುತ್ತೋ ಎಂಬ ಭಯದಿಂದ ಅವರು ಹೀಗೆ ಮಾಡುತ್ತಾರೆ ಎಂದು ಚಾಣಕ್ಯರು ಹೇಳುತ್ತಾರೆ.
ಆಸೆ ಆಕಾಂಕ್ಷೆ: ಹೆಂಡತಿ ಯಾವಾಗಲೂ ತನ್ನ ಆಸೆಗಳನ್ನು ಗಂಡನಿಂದ ಮರೆಮಾಡುತ್ತಾಳೆ. ಅವಳು ತನ್ನ ಗಂಡನ ಇಚ್ಛೆಯಂತೆ ಬದುಕಲು ಇಷ್ಟಪಡುತ್ತಾಳಂತೆ ಮತ್ತು ಆಕೆ ತನ್ನ ಅಭಿಪ್ರಾಯಗಳನ್ನು ತನ್ನ ಗಂಡನ ಮುಂದೆ ಹಂಚಿಕೊಳ್ಳಲು ಹಿಂಜರಿಯುತ್ತಾಳೆ. ಹೀಗೆ ಮದುವೆಯ ನಂತರ ಹೆಂಡತಿ ತನ್ನ ಗಂಡನ ಆಸೆಗಳನ್ನು ಅಳವಡಿಸಿಕೊಂಡು ತನ್ನ ಜೀವನವನ್ನು ನಡೆಸುತ್ತಾಳೆ ಎಂದು ಚಾಣಕ್ಯ ಹೇಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ