Chanakya Niti: ಚಾಣಕ್ಯರು ಹೇಳ್ತಾರೆ ಯಾವತ್ತಿಗೂ ಇಂತಹ ಜನರಿಗೆ ಸಹಾಯ ಮಾಡಬಾರದೆಂದು

ಮಹಾನ್‌ ವಿದ್ವಾಂಸರಾದ ಆಚಾರ್ಯ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿದ್ದಾರೆ. ದಾಂಪತ್ಯ ಜೀವನ, ಯಶಸ್ವಿ ಜೀವನ, ಎಂತಹವರ ಸ್ನೇಹ ಮಾಡಬೇಕು, ನಮ್ಮ ಶತ್ರುಗಳ್ಯಾರು ಹೀಗೆ ಜೀವನಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ನಾವು ಜೀವನದಲ್ಲಿ ಎಂತಹ ಜನರಿಗೆ ಸಹಾಯ ಮಾಡಬಾರದು ಎಂಬುದನ್ನು ಸಹ ಹೇಳಿದ್ದಾರೆ. ಹಾಗಿದ್ದರೆ ಚಾಣಕ್ಯರ ಪ್ರಕಾರ ಯಾರಿಗೆ ಸಹಾಯ ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಚಾಣಕ್ಯರು ಹೇಳ್ತಾರೆ ಯಾವತ್ತಿಗೂ ಇಂತಹ ಜನರಿಗೆ ಸಹಾಯ ಮಾಡಬಾರದೆಂದು
ಚಾಣಕ್ಯ ನೀತಿ
Image Credit source: Pinterest

Updated on: Jul 13, 2025 | 4:55 PM

ಲೋಕೋಪಕಾರ, ಸಹಾಯ (Helping Nature) ಮಾಡುವುದು ಮನುಷ್ಯನ ಕರ್ತವ್ಯವಾಗಿದೆ. ಪ್ರತಿಯೊಬ್ಬರು ತಮ್ಮವರಿಗೆ ತಮ್ಮ ಸುತ್ತಮುತ್ತಲಿನ ಜನರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯವನ್ನು ಮಾಡುತ್ತಿರುತ್ತಾರೆ. ಹೀಗೆ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಬದುಕಿದ ಸಮಾಜವೂ ಆರೋಗ್ಯಕರವಾಗಿರುತ್ತವೆ. ಯಾರಾದರೂ ಕಷ್ಟ ಅಂತ ಬಂದಾಗ ನೀವು ಸಹ  ಸಾಕಷ್ಟು ಸಹಾಯವನ್ನು ಮಾಡಿರುತ್ತೀರಿ ಅಲ್ವಾ. ಆದ್ರೆ ಎಲ್ಲರಿಗೂ ಈ ರೀತಿ ಸಹಾಯ ಮಾಡುವುದು ಒಳ್ಳೆಯದಲ್ಲವಂತೆ. ಹೌದು ಚಾಣಕ್ಯರು (Acharya Chanakya) ಹೇಳ್ತಾರೆ ಈ ಒಂದಷ್ಟು ಜನರಿಗೆ ಯಾವುದೇ ಕಾರಣಕ್ಕೂ ಸಹಾಯ ಮಾಡಬಾರದೆಂದು. ಚಾಣಕ್ಯರು ಹೇಳುವಂತೆ ಯಾರಿಗೆ ಸಹಾಯ ಮಾಡಬಾರದು, ಯಾಕಾಗಿ ಸಹಾಯ ಮಾಡಬಾರದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬೇಡಿ:

ಕಷ್ಟದ ಸಮಯದಲ್ಲಿ ಒಬ್ಬರಿಗೆ ಸಹಾಯ ಮಾಡುವುದು ಪುಣ್ಯದ ಕೆಲಸ ಅಂತ ಹೇಳ್ತಾರೆ. ಆದ್ರೆ ಯೋಚಿಸದೆ ಯಾರಿಗೂ ಸಹಾಯ ಮಾಡಬೇಡಿ ಇದರಿಂದ ನಿಮ್ಮ ಜೀವನದ ನೆಮ್ಮದಿಯೇ ಹಾಳಾಗುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

ಇದನ್ನೂ ಓದಿ
ಈ ನಾಲ್ಕು ಜನರನ್ನು ತಂದೆಯಂತೆಯೇ ಗೌರವಿಸಬೇಕು ಎನ್ನುತ್ತಾರೆ ಚಾಣಕ್ಯರು
“ಇಲ್ಲ” ಎಂದು ಹೇಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಏಕೆ ಮುಖ್ಯ ಗೊತ್ತಾ?
ನೋಡಿ… ಈ ತಪ್ಪುಗಳೇ ಸಂಬಂಧ ಹಾಳಾಗಲು ಮುಖ್ಯ ಕಾರಣ
ಹೆಂಡತಿಯಾದವಳು ಈ ವಿಷಯಗಳನ್ನು ಗಂಡನಿಂದ ಮುಚ್ಚಿಡುತ್ತಾಳಂತೆ

ದುರಾಸೆ ಹೊಂದಿದವರಿಗೆ: ಚಾಣಕ್ಯರ ಪ್ರಕಾರ, ಜೀವನದಲ್ಲಿ ದುರಾಸೆ ಹೊಂದಿದ ವ್ಯಕ್ತಿಗೆ ಎಂದಿಗೂ ಸಹಾಯ ಮಾಡಬಾರದು. ಅವರು ತಮ್ಮ ಲಾಭಕ್ಕಾಗಿ, ತಮ್ಮ ಸ್ವಾರ್ಥಕ್ಕಾಗಿ ನಿಮ್ಮಿಂದ ಸಹಾಯವನ್ನು ಕೇಳುವ ಸಾಧ್ಯತೆ ಇರುತ್ತದೆ. ಹಾಗೂ ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ಇದರಿಂದ ನೀವು ಸಾಕಷ್ಟು ಕಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ದುರಾಸೆ ಹೊಂದಿದರಿಗೆ ಸಹಾಯ ಮಾಡಬೇಡಿ ಬದಲಿಗೆ ನೀವು ಅವರಿಂದ ದೂರ ಇರುವುದೇ ಸೂಕ್ತ.

ಕೃತಘ್ನ ಭಾವ ಹೊಂದಿರದವರಿಗೆ: ನಿಮ್ಮ ಸಹಾಯಕ್ಕೆ ಬೆಲೆ ಕೊಡದವರಿಗೆ ನೀವು ಯಾವತ್ತಿಗೂ ಸಹಾಯ ಮಾಡಬಾರದು. ಏಕೆಂದರೆ ಅಂತಹವರು ತುಂಬಾನೇ ಸ್ವಾರ್ಥಿಗಳಾಗಿರುತ್ತಾರೆ. ಮತ್ತು ನಿಮ್ಮ ಕಷ್ಟದ ಸಂದರ್ಭದಲ್ಲಿ ನಿಮ್ಮನ್ನು ನಡು ನೀರಿನಲ್ಲಿ ಕೈ ಬಿಡಬಹುದು. ಹಾಗಾಗಿ ಕೃತಘ್ನ ಭಾವವನ್ನು ಹೊಂದಿರದವರಿಗೆ ಸಹಾಯ ಮಾಡಬೇಡಿ.

ಮೋಸಗಾರರಿಗೆ: ಸುಳ್ಳುಗಾರರು ಮತ್ತು ಪ್ರಾಮಾಣಿಕತೆಯನ್ನು ಹೊಂದಿರದ ಮೋಸಗಾರ ಜನರಿಗೆ ಸಹಾಯ ಮಾಡಬೇಡಿ. ಇವರಿಂದ ನೀವು ದೂರ ಇರುವುದೇ ಸೂಕ್ತ. ಏಕೆಂದರೆ ಇಂತಹವರಿಗೆ ಸಹಾಯ ಮಾಡಿದರೆ ನೀವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ.

ಮಾದಕ ವಸ್ತು ವ್ಯಸನಿಗಳಿಗೆ: ಕುಡಿತ, ಜೂಜಾಟ ಇತ್ಯಾದಿ ವ್ಯಸನಗಳಿಗೆ ಹಾಗೂ ಕೆಟ್ಟ ಚಟಗಳಿಗೆ ದಾಸರಾಗಿರುವವರಿಗೆ ಸಹಾಯ ಮಾಡಬೇಡಿ. ನಿಮ್ಮ ಸಹಾಯವು ಅವರ ಜೀವನವನ್ನು ಸುಧಾರಿಸುವುದಿಲ್ಲ. ಇಂತಹವರಿಗೆ ಸಹಾಯ ಮಾಡುವುದೇ ವ್ಯರ್ಥ ಹಾಗೂ ಇಂತಹವರ ಸಹವಾಸದಿಂದ ನೀವು ಆದಷ್ಟು ದೂರವಿರಿ.

ಸುಳ್ಳುಗಾರರಿಗೆ: ಆಚಾರ್ಯ ಚಾಣಕ್ಯರ ಪ್ರಕಾರ, ಮೊದಲು ಸುಳ್ಳು ಹೇಳುವ ವ್ಯಕ್ತಿಗಳಿಗೆ ನಾವು ಸಹಾಯ ಮಾಡಬಾರದು. ಏಕೆಂದರೆ ಇಂತಹ ಜನರು ಸುಳ್ಳು ಹೇಳುವ ಮೂಲಕ ನಿಮ್ಮಿಂದಸಹಾಯ ಪಡೆಯುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಇಂತಹವರಿಗೆ ಹಣವನ್ನು ಸಾಲ ಕೊಡಬೇಡಿ; ಯಾಕೆ ಗೊತ್ತಾ?

ಸೋಮಾರಿಗಳಿಗೆ: ಕಷ್ಟಪಟ್ಟು ಕೆಲಸ ಮಾಡಲು ಇಷ್ಟಪಡದ ಸೋಮಾರಿ ಜನಗಳಿಗೂ ಸಹಾಯ ಮಾಡಬಾರದು ಎನ್ನುತ್ತಾರೆ ಚಾಣಕ್ಯರು. ಇಂತಹವರಿಗೆ ಸಹಾಯ ಮಾಡುವುದರಿಂದ ನಿಮ್ಮ ಹಣ ಮತ್ತು ಸಮಯ ಎರಡೂ ವ್ಯರ್ಥ.

ಎರಡು ಮುಖದ ಜನ: ಮುಂದೆ ನಿಮ್ಮನ್ನು ಹೊಗಳಿ ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಎರಡು ಮುಖವನ್ನು ಹೊಂದಿರುವ ಜನರನ್ನು ಎಂದಿಗೂ ನಂಬಬಾರದು ಜೊತೆಗೆ ಅಂತಹವರಿಗೆ ಸಹಾಯವನ್ನು ಸಹ ಮಾಡಬಾರು ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Sun, 13 July 25