Chanakya Niti: ಇತರರಿಗೆ ಸಹಾಯ ಮಾಡುವ ಮುನ್ನ, ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಪಾಲಿಸಲು ಮರೆಯದಿರಿ

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ತುಂಬಾನೇ ಒಳ್ಳೆಯ ಗುಣ. ಸಹಾಯ ಮಾಡುವುದರಿಂದ ಪುಣ್ಯ ಕೂಡ ಲಭಿಸುತ್ತದೆ ಎಂದು ಹೇಳುತ್ತಾರೆ. ಆದ್ರೆ ಕೆಲವೊಮ್ಮೆ ನಾವು ಮಾಡುವ ಸಹಾಯದಿಂದ ನಾವೇ ತೊಂದರೆಗೆ ಸಿಲುಕಿಕೊಳ್ಳುತ್ತೇವೆ. ಆದ್ದರಿಂದ ಒಬ್ರಿಗೆ ಸಹಾಯ ಮಾಡುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಹಾಗಿದ್ರೆ ಸಹಾಯ ಮಾಡುವ ಮುನ್ನ ಯಾವೆಲ್ಲಾ ಅಂಶಗಳನ್ನು ಪರಿಗಣಿಸಬೇಕು ಎಂಬುದನ್ನು ತಿಳಿಯಿರಿ.

Chanakya Niti: ಇತರರಿಗೆ ಸಹಾಯ ಮಾಡುವ ಮುನ್ನ, ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಪಾಲಿಸಲು ಮರೆಯದಿರಿ
ಚಾಣಕ್ಯ ನೀತಿ
Image Credit source: Pinterest

Updated on: Oct 26, 2025 | 6:11 PM

ಪ್ರತಿಫಲಾಪೇಕ್ಷೆಯಿಲ್ಲದೆ ಒಬ್ಬರಿಗೆ ಸಹಾಯ (help) ಮಾಡುವುದು ಬಹುದೊಡ್ಡ ಗುಣ. ಆದ್ರೆ ಎಲ್ಲರಲ್ಲೂ ಈ ಗುಣ ಇರುವುದಿಲ್ಲ. ಕೆಲವರು ಮಾತ್ರ ತಮಗೆ ಕಷ್ಟ ಆದ್ರೂ ಸಹ ಇನ್ನೊಬ್ಬರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು ಎಂದು ಸಹಾಯ ಮಾಡುತ್ತಾರೆ. ಒಮ್ಮೊಮ್ಮೆ ಈ ಸಹಾಯವೇ ನಮ್ಮ ಜೀವನಕ್ಕೆ ಮುಳ್ಳಾಗುವ ಸಾಧ್ಯತೆ ಇರುತ್ತವೆ. ಹೀಗೆ ಒಬ್ಬರಿಗೆ ಸಹಾಯ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಅದೆಷ್ಟೋ ಜನರಿದ್ದಾರೆ. ಆದ್ದರಿಂದ ಒಬ್ಬರಿಗೆ ಸಹಾಯ ಮಾಡುವ ಮುನ್ನ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ನೀವು ಯಾವಾಗಲೂ ವಿವೇಕದಿಂದ ಇತರರಿಗೆ ಸಹಾಯ ಮಾಡಬೇಕು. ಯೋಚಿಸದೆ ಇತರರಿಗೆ ಸಹಾಯ ಮಾಡುವುದು ನಿಮಗೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಚಾಣಕ್ಯರು ಹೇಳಿದ್ದಾರೆ. ಭವಿಷ್ಯದಲ್ಲಿ ಬರುವ ಬರುವ ತೊಂದರೆಗಳನ್ನು ತಪ್ಪಿಸಲು ನೀವು ಬಯಸಿದರೆ, ಯಾರಿಗಾದ್ರೂ ಸಹಾಯ ಮಾಡುವಾಗ ಈ ಕೆಲವೊಂದಿಷ್ಟು ವಿಷಯಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದಿರಿ.

ಒಬ್ಬರಿಗೆ ಸಹಾಯ ಮಾಡುವ ಮುನ್ನ ಈ ವಿಚಾರಗಳನ್ನು ನೆನಪಿಡಿ:

ಭಾವನೆಗಳಿಗೆ ಒಳಗಾಗಿ ಸಹಾಯ ಮಾಡಬೇಡಿ: ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಯಾರಿಗಾದರೂ ಸಹಾಯ ಮಾಡಲು ಹೋದಾಗಲೆಲ್ಲಾ, ಸಂಪೂರ್ಣ ಪ್ರಜ್ಞೆ ಮತ್ತು ಶಾಂತತೆಯಿಂದಿರಿ. ನೀವು ಎಂದಿಗೂ ಭಾವನೆಗಳಿಗೆ ಒಳಗಾಗಿ ಯಾವುದೇ ಕಾರಣಕ್ಕೂ ಆತುರದಿಂದ ಸಹಾಯ ಮಾಡಬೇಡಿ. ಏಕೆಂದರೆ ಭವಿಷ್ಯದಲ್ಲಿ ಇದರಿಂದ ಸಮಸ್ಯೆಗಳಾಗುವ ಸಾಧ್ಯತೆ ಇರುತ್ತವೆ.

ಉದ್ದೇಶ ತಿಳಿಯದೆ ಸಹಾಯ ಮಾಡಬೇಡಿ: ನೀವು ಯಾರಿಗಾದರೂ ಸಹಾಯ ಮಾಡಲು ಬಯಸಿದರೆ, ಮೊದಲು ಸಹಾಯ ಕೇಳಿದವರ ಅವರ ಉದ್ದೇಶಗಳು ಮತ್ತು ಯಾವ ಸಂದರ್ಭದಲ್ಲಿ ಅವರು ಸಹಾಯ ಕೇಳುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಏಕೆಂದರೆ ಕೆಲವರು ಸುಮ್ಮನೆ ಸಹಾಯ ಪಡೆದು ನಂತರದಲ್ಲಿ ನಿಮಗೆಯೇ ದ್ರೋಹ ಬಗೆಯುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ
ಪುರುಷರ ವ್ಯಕ್ತಿತ್ವನ್ನು ಆಕರ್ಷಕಗೊಳಿಸುವ ಗುಣಗಳಿವು
ಜೀವನದಲ್ಲಿ ಈ ಎರಡು ವಿಷಯಗಳಿಗೆ ಹೆದರಬಾರದು
ಈ ಗುಣಗಳನ್ನು ಹೊಂದಿರುವವರು ಸವಾಲುಗಳನ್ನು ಎದುರಿಸುವಲ್ಲಿ ನಿಸ್ಸಿಮರು
ಈ 5 ನಿಯಮಗಳನ್ನು ಪಾಲಿಸಿದರೆ ಲಕ್ಷ್ಮೀ ದೇವಿ ನಿಮ್ಮ ಮನೆಗೆ ಬರುತ್ತಾಳೆ

ಪದೇ ಪದೇ ಸಹಾಯ ಕೇಳುವವರ ಬಗ್ಗೆ ಎಚ್ಚರದಿಂದಿರಿ: ಆಚಾರ್ಯ ಚಾಣಕ್ಯರು ಹೇಳುವಂತೆ, ನಿಮ್ಮ ಬಳಿ ಪದೇ ಪದೇ ಸಹಾಯ ಕೇಳುವ ಜನರಿದ್ದರೆ, ಹಣ ಅಥವಾ ಯಾವುದೇ ರೀತಿಯ ಸಹಾಯವನ್ನು ಅವರಿಗೆ ಮಾಡಬೇಡಿ. ಅಂತಹವರು ಕೂಡ ಕೆಲವೊಮ್ಮೆ ದ್ರೋಹ ಬಗೆಯುವ ಸಾಧ್ಯತೆ ಇರುತ್ತದೆ. ಅಂತಹವರ ಬಗ್ಗೆ ಸ್ವಲ್ಪ ಎಚ್ಚರವಿರಲಿ.

ಇದನ್ನೂ ಓದಿ: ಗುಣಗಳೇ ಪುರುಷರ ವ್ಯಕ್ತಿತ್ವನ್ನು ಆಕರ್ಷಕಗೊಳಿಸುವುದು ಎನ್ನುತ್ತಾರೆ ಚಾಣಕ್ಯ

ನಿಮ್ಮ ಸಾಮರ್ಥ್ಯ ಮೀರಿ ಸಹಾಯ ಮಾಡದಿರಿ: ಕೆಲವೊಮ್ಮೆ, ನಾವು ಇತರರಿಗೆ ಸಹಾಯ ಮಾಡುವ ಮೊದಲು ನಮ್ಮ ಆರ್ಥಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೇಗಿದೆ ಎಂಬುದನ್ನು ತಿಳಿಯುವಲ್ಲಿ ವಿಫಲರಾಗುತ್ತೇವೆ. ಹಾಗಾಗಿ ಇತರರಿಗೆ ಸಹಾಯ ಮಾಡುವ ಮೊದಲು, ನಿಮ್ಮ ಸ್ವಂತ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಸ್ವಂತ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳದೆ ಇತರರಿಗೆ ಸಹಾಯ ಮಾಡುವುದು ದೀರ್ಘಾವಧಿಯಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಚಾಣಕ್ಯರು ಹೇಳುತ್ತಾರೆ.

ಒತ್ತಡಕ್ಕೊಳಗಾಗಿ ಸಹಾಯ ಮಾಡದಿರಿ: ಕೆಲವೊಮ್ಮೆ, ಸಂಬಂಧಗಳ ಒತ್ತಡದಲ್ಲಿ ನಾವು ಇತರರಿಗೆ ಸಹಾಯ ಮಾಡಲು ಮುಂದಾಗುತ್ತೇವೆ. ಆಚಾರ್ಯ ಚಾಣಕ್ಯರ ಪ್ರಕಾರ, ಹಾಗೆ ಮಾಡುವುದು ದೊಡ್ಡ ತಪ್ಪು. ಸಂಬಂಧಗಳ ಒತ್ತಡದಲ್ಲಿ ಸಹಾಯ ಮಾಡುವ ಮೊದಲು, ಯಾವುದು ಸರಿ ಮತ್ತು ಯಾವುದು  ತಪ್ಪು, ಇಂತಹ ವ್ಯಕ್ತಿಗಳಿಗೆ ಸಹಾಯ ಮಾಡುವುದು ಸರಿಯೇ ಎಂಬ ಬಗ್ಗೆ ಯೋಚಿಸಬೇಕು. ಒತ್ತಡಕ್ಕೊಳಗಾಗುವ ಬದಲು ಚಿಂತನಶೀಲವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ