
ಮನುಷ್ಯ ಸಂಘಜೀವಿ. ಆತ ತಾನು ಏನೇ ನಿರ್ಧಾರಗಳನ್ನು ತೆಗೆದುಕೊಂಡರೂ ಅಥವಾ ಏನಾದರೂ ಕೆಲಸ ಮಾಡುವಾಗಲೂ ಇತರರೊಂದಿಗೆ ಚರ್ಚಿಸಿ ಅದನ್ನು ಮಾಡುತ್ತಾನೆ. ಆದ್ರೆ ಕೆಲವೊಂದು ನಿರ್ಧಾರಗಳನ್ನು, ಕೆಲಸಗಳನ್ನು ಯಾವುದೇ ಜಂಜಾಟ, ಕಿರಿಕಿರಿಯಿಲ್ಲದೆ ಏಕಾಂತದಲ್ಲಿರುವಾಗಲೇ ಮಾಡಬೇಕು ಎಂದು ಚಾಣಕ್ಯರು (Chanakya) ಹೇಳುತ್ತಾರೆ. ಏಕಾಂತವು ಮನುಷ್ಯನ ಸೃಜನಶೀಲತೆ, ಉತ್ಪಾದಕತೆ ಹೆಚ್ಚಿಸಿಕೊಳ್ಳಲು, ದೈನಂದಿನ ಜಂಜಾಟದಿಂದ ಪುನಶ್ಚೇತನಗೊಳ್ಳಲು ಸಹಾಯ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿದಾಗ ಅದು ಅರ್ಥಪೂರ್ಣವಾಗಿರುತ್ತದೆ ಮತ್ತು ನಿರ್ಧಾರಗಳು ಸರಿಯಾಗಿರುತ್ತವೆ. ಹಾಗಿದ್ದರೆ ಚಾಣಕ್ಯರು ಹೇಳುವಂತೆ ಯಾವ ಕೆಲಸಗಳನ್ನು ಏಕಾಂತದಲ್ಲಿ ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.
ಅಧ್ಯಯನ: ಚಾಣಕ್ಯರು ಹೇಳುವಂತೆ ವ್ಯಕ್ತಿಯ ಜೀವನದಲ್ಲಿ ವಿದ್ಯೆಯು ಬಹಳ ಮುಖ್ಯ. ನಿಮ್ಮ ಭವಿಷ್ಯವು ನೀವು ಎಷ್ಟು ಶಿಕ್ಷಣವನ್ನು ಹೊಂದಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ, ನೀವು ಅಧ್ಯಯನ ಮಾಡುವಾಗ ಅಥವಾ ಜ್ಞಾನವನ್ನು ಪಡೆಯುವಾಗ, ನೀವು ಅದನ್ನು ಏಕಾಂತದಲ್ಲಿ ಮಾಡಬೇಕು. ನೀವು ಗದ್ದಲದ ಸ್ಥಳದಲ್ಲಿ ಅಧ್ಯಯನ ಮಾಡಲು ಪ್ರಯತ್ನಿಸಿದರೆ, ನಿಮ್ಮ ಮನಸ್ಸು, ಗಮನ ಒಂದೆಡೆಯೇ ಕೇಂದ್ರೀಕೃತವಾಗುವುದಿಲ್ಲ. ಇದರಿಂದ ನೀವು ಕಲಿತಂತಹ ವಿಷಯಗಳು ಸಹ ಮರೆತು ಹೋಗುತ್ತವೆ. ಹಾಗಾಗಿ ವಿಶೇಷವಾಗಿ ವಿದ್ಯಾರ್ಥಿಗಳು ಏಕಾಂತದ ಸ್ಥಳದಲ್ಲಿ ಕಲಿಯಬೇಕು.
ಧ್ಯಾನ, ದೇವರ ಕಾರ್ಯ: ನೀವು ದೇವರನ್ನು ಪೂಜಿಸುವಾಗ ಅಥವಾ ಜಪಿಸುವಾಗ ಅಥವಾ ಧ್ಯಾನ ಮಾಡುವಾಗ ವಾತಾವರಣ ಏಕಾಂತದಲ್ಲಿರಬೇಕು. ಆಗ ಮಾತ್ರ ನೀವು ಬಯಸಿದ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಚಾಣಕ್ಯರು ಸಾಧನೆಯನ್ನು ಯಾವಾಗಲೂ ಏಕಾಂತದಲ್ಲಿ ಮಾಡಬೇಕೆಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿಯೊಬ್ಬ ಮನುಷ್ಯನೂ ನಾಯಿಯಿಂದ ಈ ನಾಲ್ಕು ಗುಣಗಳನ್ನು ಕಲಿಯಲೇಬೇಕು ಎನ್ನುತ್ತಾರೆ ಚಾಣಕ್ಯ
ಹಣಕ್ಕೆ ಸಂಬಂಧಿಸಿದ ವಿಷಯಗಳು: ನೀವು ಹಣದ ವಹಿವಾಟು ಮಾಡಲು ಹೋದರೆ ಅಥವಾ ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಹೋದರೈ, ಅದನ್ನು ಏಕಾಂತದ ಸ್ಥಳದಲ್ಲಿಯೇ ಮಾಡಿ ಎಂದು ಚಾಣಕ್ಯ ಹೇಳುತ್ತಾರೆ. ನಿಮ್ಮ ಆಪ್ತರಿಗೂ ತಿಳಿಯದ ರೀತಿಯಲ್ಲಿ ಹಣಕಾಸಿನ ವಹಿವಾಟುಗಳನ್ನು ಮಾಡಿ, ಏಕೆಂದರೆ ನಿಮ್ಮ ಬಳಿ ಎಷ್ಟು ಸಂಪತ್ತು ಇದೆ ಎಂದು ಜನರಿಗೆ ತಿಳಿದರೆ, ನಿಮ್ಮ ಬಗ್ಗೆ ಅಸೂಯೆಪಟ್ಟುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ಹಣದ ವಿಷಯಗಳನ್ನು ಗುಪ್ತವಾಗಿರಿಸಿ ಜೊತೆಗೆ ಹಣದ ವ್ಯವಹಾರಗಳನ್ನು ಏಕಾಂತದಲ್ಲಿ ಮಾಡಿರಿ.
ಆಹಾರ: ಆಚಾರ್ಯ ಚಾಣಕ್ಯರು ಆಹಾರವನ್ನು ಏಕಾಂತದಲ್ಲಿ ಮತ್ತು ಶಾಂತ ಮನಸ್ಸಿನಿಂದ ಸೇವಿಸಬೇಕೆಂದು ಹೇಳುತ್ತಾರೆ. ಊಟ ಮಾಡುವಾಗ ಬೇರೆಯವರೊಂದಿಗೆ ಮಾತನಾಡುವುದು ಅಥವಾ ಆಯೋದೋ ವಿಷಯದ ಬಗ್ಗೆ ಯೋಚಿಸುವುದನ್ನು ತಪ್ಪಿಸಿ, ಏಕೆಂದರೆ ಈ ಆಲೋಚನೆಗಳು ನೀವು ತಿನ್ನುವ ಆಹಾರದ ಮೇಲೂ ಪರಿಣಾಮ ಬೀರಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ