Chanakya Niti: ಈ ಅಭ್ಯಾಸಗಳು ನಿಮ್ಮನ್ನು ಒಂಟಿಯಾನ್ನಾಗಿಸುತ್ತದೆ ಎಚ್ಚರ!

ಆಚಾರ್ಯ ಚಾಣಕ್ಯರ ಪ್ರಕಾರ ನಮ್ಮ ಅಭ್ಯಾಸಗಳು ಮತ್ತು ಆಲೋಚನಾ ವಿಧಾನಗಳು ನಮ್ಮ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅದರಲ್ಲೂ ಕೆಲವೊಂದು ಕೆಟ್ಟ ಅಭ್ಯಾಸಗಳು, ತಪ್ಪುಗಳು ಕ್ರಮೇಣ ನಮ್ಮನ್ನು ಒಂಟಿತನಕ್ಕೆ ದೂಡುತ್ತವೆ. ಇದರಿಂದಾಗಿ ಜೀವನಪರ್ಯಂತ ಒಂಟಿಯಾಗಿಯೇ ಇರಬೇಕಾಗುತ್ತದೆ. ಹಾಗಿದ್ದರೆ ಒಂಟಿತನಕ್ಕೆ ಕಾರಣವಾಗುವ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಅಭ್ಯಾಸಗಳು ನಿಮ್ಮನ್ನು ಒಂಟಿಯಾನ್ನಾಗಿಸುತ್ತದೆ ಎಚ್ಚರ!
ಚಾಣಕ್ಯ ನೀತಿ
Image Credit source: Pinterest

Updated on: Apr 25, 2026 | 6:09 PM

ನಮ್ಮ ಅಭ್ಯಾಸಗಳು ಕೂಡ ನಮ್ಮ ಉನ್ನತಿ-ಅವನತಿಯನ್ನು ನಿರ್ಧರಿಸುತ್ತವೆ. ಹೌದು ಕೆಲವೊಂದು ಒಳ್ಳೆಯ ಅಭ್ಯಾಸಗಳು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ದರೆ, ಕೆಲವೊಂದು ಅಭ್ಯಾಸಗಳು ಜೀವನಕ್ಕೆ ಮುಳುವಾಗುತ್ತದೆ, ಶಾಂತಿಯನ್ನು ಹಾಳು ಮಾಡುತ್ತದೆ. ಅದರಲ್ಲೂ ಕೆಲವು ಕೆಟ್ಟ ಅಭ್ಯಾಸಗಳು ಕ್ರಮೇಣ ನಮ್ಮನ್ನು ಒಂಟಿತನಕ್ಕೆ (Loneliness) ಕರೆದೊಯ್ಯುತ್ತವೆ. ಇದರಿಂದಾಗಿ ಒಬ್ಬಂಟಿಯಾಗಿಯೇ ಜೀವನಪೂರ್ತಿ ಕಳೆಯಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹಾಗಿದ್ರೆ ಒಂಟಿತನಕ್ಕೆ ಕಾರಣವಾಗುವ ಪ್ರಮುಖ ಅಭ್ಯಾಸಗಳು ಯಾವುವು ಎಂಬುದನ್ನು ತಿಳಿಯೋಣ.

ಈ ಅಭ್ಯಾಸಗಳೇ ಒಂಟಿತನಕ್ಕೆ ಕಾರಣ:

ಇತರರನ್ನು ಅರ್ಥಮಾಡಿಕೊಳ್ಳದಿರುವುದು: ನಾವು ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ಸಂಬಂಧಗಳು ಕ್ರಮೇಣ ದುರ್ಬಲಗೊಳ್ಳುತ್ತದೆ. ಪ್ರತಿಯೊಬ್ಬರೂ ಕೂಡ ತಮ್ಮ ಭಾವನೆಗಳನ್ನು ಗೌರವಿಸುವ ಜನರೊಂದಿಗೆ ಮಾತನಾಡಲು ಮತ್ತು ಇರಲು ಬಯಸುತ್ತಾರೆ. ಆದರೆ ನಾವು ಅವರ ಭಾವನೆಗಳ ಬಗ್ಗೆ ಕಾಳಜಿ ವಹಿಸದಿದ್ದರೆ, ಅವರು ನಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಈ ನಂಬಿಕೆ ಕಳೆದುಹೋದಾಗ, ಅವರು ನಮ್ಮೊಂದಿಗೆ ಮಾತನಾಡುವುದನ್ನು ಸಹ ನಿಲ್ಲಿಸುತ್ತಾರೆ. ಪರಿಣಾಮವಾಗಿ, ನಾವು ಒಂಟಿತನವನ್ನು ಅನುಭವಿಸುತ್ತೇವೆ. ಆದ್ದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುವುದು ತುಂಬಾನೇ ಮುಖ್ಯ.

ಅತಿಯಾದ ಕೋಪ: ಸಣ್ಣ ವಿಷಯಗಳಿಗೂ ಕೋಪಗೊಳ್ಳುವ ಜನರಿಂದ ಸ್ನೇಹಿತರು, ಕುಟುಂಬ ಸದಸ್ಯರು ಸಹ ದೂರವಾಗುತ್ತಾರೆ. ಕೋಪಗೊಂಡಾಗ ನಾವು ಏನು ಮಾತನಾಡುತ್ತೇವೆ ಎಂಬ ಅರಿವು ನಮಗೆ ಇರುವುದಿಲ್ಲ, ಆದರೆ ಇದು ನಮ್ಮ ಸುತ್ತಲಿನ ಜನರ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಕಾಲಾನಂತರದಲ್ಲಿ, ಇದು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ  ಮತ್ತು ಎಲ್ಲರೂ ನಮ್ಮಿಂದ ದೂರ ಹೋಗುತ್ತಾರೆ. ಇದು ಒಂಟಿತನಕ್ಕೆ ಕಾರಣವಾಗುತ್ತದೆ.

ನಂಬಿಕೆಯ ಕೊರತೆ: ಅನುಮಾನ ಮತ್ತು ಅಪನಂಬಿಕೆಯಿಂದ ಸಂಬಂಧಗಳು ದುರ್ಬಲಗೊಳ್ಳುತ್ತವೆ. ಹೌದು ನಂಬಿಕೆ ಇಲ್ಲದಿದ್ದರೆ ಸಂಬಂಧಗಳಲ್ಲಿ ಅಂತರ ಬೆಳೆಯುತ್ತದೆ. ಕಾಲಾನಂತರದಲ್ಲಿ, ಇದು ಒಂಟಿತನಕ್ಕೆ ಕಾರಣವಾಗಬಹುದು ಮತ್ತು ಜನರು ನಮ್ಮಿಂದ ದೂರವಾಗಬಹುದು ಮತ್ತು ನಾವು ಒಬ್ಬಂಟಿಯಾಗಿಯೇ ಜೀವನ ನಡೆಸಬೇಕಾಗುತ್ತದೆ ಎಂದಿದ್ದಾರೆ ಚಾಣಕ್ಯ.

ಇದನ್ನೂ ಓದಿ: ಅಭ್ಯಾಸಗಳು ನಿಮ್ಮಲ್ಲಿದ್ದರೆ ಜೀವನದಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ ಚಾಣಕ್ಯ

ಸ್ವಾರ್ಥಿಯಾಗಿರುವುದು: ಸ್ವಾರ್ಥಿಗಳು ಇತರರ ಅಗತ್ಯತೆಗಳು ಮತ್ತು ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಕಾಲಾನಂತರದಲ್ಲಿ ಇದು ಅವರ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಅವರಿಗೆ ಅಗತ್ಯವಿದ್ದಾಗ ಸಹಾಯ ಮಾಡಲು ಕಡಿಮೆ ಜನರಿರುತ್ತಾರೆ. ಇದು ಅವರನ್ನು ಸಾಮಾಜಿಕವಾಗಿ ಪ್ರತ್ಯೇಕಗೊಳಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮತ್ತು ಒಂಟಿತನಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ ಚಾಣಕ್ಯ.

ನಕಾರಾತ್ಮಕ ಆಲೋಚನೆಗಳು: ನಕಾರಾತ್ಮಕವಾಗಿ ಯೋಚಿಸುವ ಜನರ ಸುತ್ತ ಯಾರೂ ಇರಲು ಬಯಸುವುದಿಲ್ಲ. ಅಂತಹ ಆಲೋಚನೆಗಳು ಸಂಬಂಧಗಳನ್ನು ದುರ್ಬಲಗೊಳಿಸುತ್ತವೆ. ಎಲ್ಲದರಲ್ಲೂ ತಪ್ಪುಗಳನ್ನು ಹುಡುಕುವುದು ಮತ್ತು ನಕಾರಾತ್ಮಕ ರೀತಿಯಲ್ಲಿ ಮಾತನಾಡುವುದು ನಿಮ್ಮ ಸುತ್ತಮುತ್ತಲಿನವರನ್ನು ದೂರವಿಡಬಹುದು. ಇದು ಒಂಟಿತನಕ್ಕೂ ಕಾರಣವಾಗಬಹುದು ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Sat, 25 April 26

Follow Us