Chanakya Niti: ಈ ಅಭ್ಯಾಸಗಳು ನಿಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸಬಹುದು… ಎಚ್ಚರ!

ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಮನುಷ್ಯನನ್ನು ಕ್ರಮೇಣ ಮಾನಸಿಕವಾಗಿ ದುರ್ಬಲಗೊಳಿಸುವ ಕೆಟ್ಟ ಅಭ್ಯಾಸಗಳ ಬಗ್ಗೆ ವಿವರಿಸಿದ್ದಾರೆ. ಅವುಗಳನ್ನು ತಕ್ಷಣ ಸರಿಪಡಿಸದಿದ್ದರೆ, ಕಾಲಾನಂತರದಲ್ಲಿ ವ್ಯಕ್ತಿಯ ಮಾನಸಿಕ ಶಕ್ತಿಯೇ ಕುಗ್ಗಿ ಹೋಗಬಹುದು. ಹಾಗಿದ್ರೆ ಚಾಣಕ್ಯರು ತಿಳಿಸಿರುವ ಆ ಕೆಟ್ಟ ಅಭ್ಯಾಸಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Chanakya Niti: ಈ ಅಭ್ಯಾಸಗಳು ನಿಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸಬಹುದು… ಎಚ್ಚರ!
ಚಾಣಕ್ಯ ನೀತಿ
Image Credit source: Pinterest

Updated on: Feb 01, 2026 | 3:41 PM

ಮನುಷ್ಯನ ಏಳು-ಬೀಳು, ಯಶಸ್ಸು ಇವೆಲ್ಲವೂ ಆತನ ಅಭ್ಯಾಸಗಳಿಂದಲೂ (habits) ನಿರ್ಧಾರವಾಗುತ್ತದೆ. ಹೌದು ಆತ ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದರೆ ಖಂಡಿತವಾಗಿಯೂ ಆತ ಯಶಸ್ಸನ್ನು ಸಾಧಿಸಲಾರ. ಅದೇ ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ಖಂಡಿತವಾಗಿಯೂ ಆತ ಜೀವನದಲ್ಲಿ ಜಯಿಸುತ್ತಾನೆ. ಅದರಂತೆ ಕೆಲವೊಂದು ಅಭ್ಯಾಸಗಳ ಕಾರಣದಿಂದ ವ್ಯಕ್ತಿ ಮಾನಸಿಕವಾಗಿ ದುರ್ಬಗೊಳ್ಳುತ್ತಾನೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ನಿಮ್ಮಲ್ಲೂ ಆ ಅಭ್ಯಾಸಗಳಿದ್ದರೆ ತಕ್ಷಣ ತ್ಯಜಿಸಿ, ಹೀಗೆ ಮಾಡಿದಾಗ ಮಾತ್ರ ನಿಮ್ಮ ಆಲೋಚನೆ, ಗಮನ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳು ಬಲಗೊಳ್ಳುತ್ತವೆ.

ಮಾನಸಿಕ ಸಾಮರ್ಥ್ಯವನ್ನು ದುರ್ಬಲಗೊಳಿಸುವ ಅಭ್ಯಾಸಗಳಿವು:

ನಕಾರಾತ್ಮಕ ಚಿಂತನೆ: ನೀವು ನಿರಂತರವಾಗಿ ನಕಾರಾತ್ಮಕವಾಗಿ ಯೋಚಿಸಿದರೆ, ನಿಮ್ಮ ಮನಸ್ಸು ವೇಗವಾಗಿ ದುರ್ಬಲಗೊಳ್ಳುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಅವರ ಪ್ರಕಾರ, ಮನಸ್ಸಿನಲ್ಲಿನ ನಕಾರಾತ್ಮಕ ಆಲೋಚನೆಗಳು ಭಯ ಮತ್ತು ಆತಂಕದ ಜೀವನಕ್ಕೆ ಕಾರಣವಾಗುತ್ತವೆ. ನೀವು ನಕಾರಾತ್ಮಕವಾಗಿ ಮಾತ್ರ ಯೋಚಿಸಿದಾಗ, ನಿಮ್ಮ ಸೃಜನಶೀಲತೆ ನಾಶವಾಗುತ್ತದೆ ಮತ್ತು ನೀವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಯಾವಾಗಲೂ ನಿಮಗೆ ಸಂಕಷ್ಟಗಳೇ ಎದುರಾಗುತ್ತದೆ. ಆದ್ದರಿಂದ ಎಂತಹದ್ದೇ ಪರಿಸ್ಥಿತಿಯಲ್ಲೂ ಸಕಾರಾತ್ಮಕವಾಗಿರಿ.

ಕೆಟ್ಟವರ ಸಹವಾಸ: ಚಾಣಕ್ಯ ನೀತಿಯ ಪ್ರಕಾರ, ನೀವು ಕೆಟ್ಟವರ ಸಹವಾಸದಲ್ಲಿದ್ದರೆ ನಿಮ್ಮ ಮನಸ್ಸು ಬಲು ಬೇಗನೇ ದುರ್ಬಲಗೊಳ್ಳುತ್ತದೆ. ಹೌದು ನೀವು ನಕಾರಾತ್ಮಕ ಮತ್ತು ಸೋಮಾರಿ ಜನರ ಸಹವಾಸದಲ್ಲಿದ್ದರೆ ಅವರಂತೆ ನೀವು ಕೂಡಾ ನಕಾರಾತ್ಮಕತೆಯಿಂದ ತುಂಬಿ ಹೋಗುತ್ತೀರಿ. ಈ ಕಾರಣದಿಂದ ನಿಮ್ಮ ಮನಸ್ಸು ಬೇಗನೆ ದುರ್ಬಲಗೊಳ್ಳುತ್ತದೆ. ಮುಖ್ಯವಾಗಿ ನೀವು ನಿಮ್ಮ ಜೀವನದ ಬಗ್ಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಜೀವನದಲ್ಲಿ ಸಂಕಷ್ಟ ಎದುರಾಗಬಾರದೆಂದರೆ ನಿಮ್ಮ ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿಡಿ

ಅಪೂರ್ಣ ಜ್ಞಾನ, ಅಧ್ಯಯನದಿಂದ ದೂರ ಉಳಿಯುವುದು: ಹೊಸ ವಿಷಯಗಳನ್ನು ಅಧ್ಯಯನ ಮಾಡಲು ಅಥವಾ ಕಲಿಯಲು ಹಿಂಜರಿಯುವ ವ್ಯಕ್ತಿಯ ಮನಸ್ಸು  ಕ್ರಮೇಣ ದುರ್ಬಲಗೊಳ್ಳುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ನೀವು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡಾಗ, ನಿಮ್ಮ ಆಲೋಚನಾ ಸಾಮರ್ಥ್ಯವು ಸುಧಾರಿಸುತ್ತದೆ, ಬುದ್ಧಿವಂತಿಕೆಯು ಹೆಚ್ಚಾಗುತ್ತದೆ ಮತ್ತು ನೀವು ಆತ್ಮವಿಶ್ವಾಸದಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಒತ್ತಡ ಮತ್ತು ಆತಂಕ: ಚಾಣಕ್ಯ ನೀತಿಯ ಪ್ರಕಾರ, ಅತಿಯಾದ ಒತ್ತಡ ಮತ್ತು ಚಿಂತೆ ನಿಮ್ಮ ಮನಸ್ಸಿಗೆ ತುಂಬಾ ಹಾನಿಕಾರಕವಾಗಿದೆ. ಮಾನಸಿಕ ಶಾಂತಿ ಇಲ್ಲದೆ, ನಿಮ್ಮ ಬುದ್ಧಿಶಕ್ತಿ ಮತ್ತು ಗಮನ ಎಂದಿಗೂ ಕೇಂದ್ರೀಕೃತವಾಗಿರಲು ಸಾಧ್ಯವಿಲ್ಲ. ನೀವು ಒತ್ತಡದಲ್ಲಿದ್ದಾಗ, ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸ್ಮರಣಶಕ್ತಿ ಎರಡೂ ದುರ್ಬಲಗೊಳ್ಳುತ್ತವೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಆದ್ದರಿಂದ ಸಾಧ್ಯವಾದಷ್ಟು ಒತ್ತಡದಿಂದ ಮುಕ್ತರಾಗಿರಲು ಪ್ರಯತ್ನಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ