
ಆದಾಯವನ್ನು (income) ಹೆಚ್ಚಿಸಿಕೊಳ್ಳಬೇಕು, ಶ್ರೀಮಂತಿಕೆಯನ್ನು ಗಳಿಸಬೇಕು ಎಂದು ಪ್ರತಿಯೊಬ್ಬರು ಸಹ ಬಯಸುತ್ತಾರೆ. ಆದರೆ ಆದಾಯವನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎಂಬುದೇ ಅನೇಕರಿಗೆ ಗೊತ್ತಿಲ್ಲ. ಒಳ್ಳೆಯ ಜೀವನವನ್ನು ನಡೆಸಲು ಆದಾಯವನ್ನು ಹೆಚ್ಚಿಸಲು ನಮ್ಮ ಆಲೋಚನೆಗಳನ್ನು ಮತ್ತು ಅಭ್ಯಾಸಗಳನ್ನು ಬದಲಾಯಿಸಬೇಕು ಎಂದು ಆಚಾರ್ಯ ಚಾಣಕ್ಯರು. ಕೆಲವು ಕೆಟ್ಟ ಅಭ್ಯಾಸಗಳನ್ನು ಸುಧಾರಿಸದಿದ್ದರೆ, ನೀವು ಲಕ್ಷಾಂತರ ರೂಪಾಯಿಗಳನ್ನು ಗಳಿಸಿದರೂ, ಅದು ಎಂದಿಗೂ ಉಳಿಯುವುದಿಲ್ಲ. ಆದ್ದರಿಂದ, ನಿಮ್ಮ ಆದಾಯವನ್ನು ಹೆಚ್ಚಿಸಲು ಬಯಸಿದರೆ ಮೊದಲು ಈ ಕೆಲವೊಂದು ಕೆಟ್ಟ ಅಭ್ಯಾಸಗಳನ್ನು ತ್ಯಜಿಸಲೇಬೇಕು.
ಸಮಯ ವ್ಯರ್ಥ ಮಾಡುವ ಅಭ್ಯಾಸವನ್ನು ಬಿಟ್ಟುಬಿಡಿ: ಆಚಾರ್ಯ ಚಾಣಕ್ಯರ ಪ್ರಕಾರ, ಸಮಯವು ನಮ್ಮ ದೊಡ್ಡ ಸಂಪತ್ತು. ಆದ್ದರಿಂದ, ಸಮಯವನ್ನು ಗೌರವಿಸದ ಯಾರಾದರೂ ಜೀವನದಲ್ಲಿ ಎಂದಿಗೂ ದೊಡ್ಡ ಯಶಸ್ಸನ್ನು ಸಾಧಿಸಲು ಅಥವಾ ಹಣ ಗಳಿಸಲು ಸಾಧ್ಯವಿಲ್ಲ. ನೀವು ಯಾವುದೇ ಕೆಲಸ ಮಾಡದ ಸೋಮಾರಿತನದಿಂದ ಸಮಯವನ್ನು ವ್ಯರ್ಥ ಮಾಡುತ್ತಿದ್ದರೆ, ಈ ಅಭ್ಯಾಸವನ್ನು ಸರಿಪಡಿಸುವುದು ಬಹಳ ಮುಖ್ಯ. ನಿಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸುವುದು ನಿಮ್ಮ ಆದಾಯವನ್ನು ಹೆಚ್ಚಿಸುವ ಮೊದಲ ಹೆಜ್ಜೆ. ನೀವು ಯಾವುದೇ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡಲು ಕಲಿತಾಗ, ನಿಮ್ಮ ಉತ್ಪಾದಕತೆ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಆದಾಯವೂ ಹೆಚ್ಚಾಗುತ್ತದೆ.
ವ್ಯರ್ಥ ಖರ್ಚು ಮಾಡುವ ಅಭ್ಯಾಸವನ್ನು ಬಿಟ್ಟುಬಿಡಿ: ಆಚಾರ್ಯ ಚಾಣಕ್ಯರ ಪ್ರಕಾರ, ಹಣವನ್ನು ಉಳಿಸುವುದು ಗಳಿಸುವಷ್ಟೇ ಮುಖ್ಯ. ಕೈಯಲ್ಲಿ ಹಣ ಇದ್ದಾದ ಅದನ್ನು ನಿಷ್ಪ್ರಯೋಜಕ ವಸ್ತುಗಳನ್ನು ಖರೀದಿಸಲು ಖರ್ಚು ಮಾಡಿದರೆ ಹಣವೆಲ್ಲಾ ವ್ಯರ್ಥವಾಗುತ್ತದೆ. ಅದರ ಬದಲು ಗಳಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವುದನ್ನು ಕಲಿಯಿರಿ. ಇದರಿಂದ ಆದಾಯ ಕೂಡ ಹೆಚ್ಚಾಗುತ್ತದೆ. ಮತ್ತು ನೀವು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ.
ಸೋಮಾರಿತನವನ್ನು ಬಿಟ್ಟುಬಿಡಿ: ನಿಮ್ಮ ಯಶಸ್ಸಿನ ದೊಡ್ಡ ಶತ್ರು ನಿಮ್ಮ ಸ್ವಂತ ಸೋಮಾರಿತನ. ಚಾಣಕ್ಯ ನೀತಿಯ ಪ್ರಕಾರ, ಸೋಮಾರಿತನವನ್ನು ಬಿಟ್ಟು ಪರಿಶ್ರಮದಿಂದ ಕೆಲಸ ಮಾಡುವವರು ಮಾತ್ರ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ನೀವು ಪ್ರತಿಯೊಂದು ಕೆಲಸವನ್ನು ಮುಂದೂಡುತ್ತಲೇ ಇರುವ ಅಥವಾ ಕಠಿಣ ಪರಿಶ್ರಮದಿಂದ ದೂರ ಸರಿಯುವ ವ್ಯಕ್ತಿಯಾಗಿದ್ದರೆ, ನಿಮ್ಮ ಆದಾಯ ಎಂದಿಗೂ ಹೆಚ್ಚಾಗುವುದಿಲ್ಲ. ನೀವು ಮೊದಲು ನಿಮ್ಮ ದೈನಂದಿನ ದಿನಚರಿಯನ್ನು ಸುಧಾರಿಸಬೇಕು ಮತ್ತು ಕಠಿಣ ಪರಿಶ್ರಮವನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು. ಆಗ ಮಾತ್ರ ಆದಾಯವನ್ನು ಹೆಚ್ಚಿಸಲು ಸಾಧ್ಯ.
ಇದನ್ನೂ ಓದಿ: ಈ ಅಭ್ಯಾಸಗಳು ನಿಮ್ಮನ್ನು ಒಂಟಿಯಾನ್ನಾಗಿಸುತ್ತದೆ ಎಚ್ಚರ!
ಕೆಟ್ಟ ಸಹವಾಸದಿಂದ ದೂರವಿರಿ: ನೀವು ಯಾವ ರೀತಿಯ ಜನರೊಂದಿಗೆ ಬೆರೆಯುತ್ತೀರಿ ಎಂಬುದು ನಿಮ್ಮ ಆಲೋಚನೆ ಮತ್ತು ನಿಮ್ಮ ಗಳಿಕೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನೀವು ಕಠಿಣ ಪರಿಶ್ರಮದಿಂದ ದೂರ ಸರಿಯುವ ಅಥವಾ ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವ ಜನರೊಂದಿಗೆ ಸಹವಾಸ ಮಾಡಿದರೆ, ನೀವು ಕೂಡ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ, ಆದಾಯವನ್ನು ಹೆಚ್ಚಿಸಲು ಬಯಸಿದರೆ ಸಕಾರಾತ್ಮಕ ,ಮನೋಭಾವವನ್ನು ಹೊಂದಿರುವ ಮತ್ತು ಕಷ್ಟಪಟ್ಟು ಕೆಲಸ ಮಾಡಲು ನಿಮ್ಮನ್ನು ಪ್ರೇರೇಪಿಸುವ ಜನರೊಂದಿಗೆ ಇರುವುದು ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ