
ಬಡವರಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವರಾಗಿ ಸಾಯುವುದು ತಪ್ಪು ಎಂಬ ಮಾತೊಂದಿದೆ. ಇದಕ್ಕಾಗಿಯೇ ಜೀವನದಲ್ಲಿ ಹಣ ಸಂಪಾದನೆ ಮಾಡಲು, ಶ್ರೀಮಂತಿಕೆಯನ್ನು ಗಳಿಸಲು ಅನೇಕ ಕಠಿಣ ಶ್ರಮ ಪಡುತ್ತಾರೆ. ಇದರ ಜೊತೆಗೆ ಆಚಾರ್ಯ ಚಾಣಕ್ಯರು (Acharya Chanakya) ಹೇಳಿರುವ ಈ ಒಂದಷ್ಟು ತತ್ವಗಳನ್ನು ಪಾಲಿಸುವ ಜನರು ಜೀವನದಲ್ಲಿ ಎಂದಿಗೂ ಆರ್ಥಿಕ ಸಂಕಷ್ಟವನ್ನು ಎದುರಿಸುವುದಿಲ್ಲವಂತೆ. ಹೌದು ಚಾಣಕ್ಯರು ಹೇಳಿರುವ ಈ ತತ್ವಗಳು ವ್ಯಕ್ತಿಯನ್ನು ಆರ್ಥಿಕವಾಗಿ ಸಮೃದ್ಧಗೊಳಿಸುವುದಲ್ಲದೆ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿಯೂ ಸಮೃದ್ಧಗೊಳಿಸುತ್ತದೆ. ಹಾಗಿದ್ದರೆ ಶ್ರೀಮಂತಿಕೆ, ಯಶಸ್ಸು ಗಳಿಸಲು ಪಾಲಿಸಬೇಕಾದ ಆ ನಿಯಮಗಳು ಯಾವುವು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಸಮಯಕ್ಕೆ ಗೌರವ ನೀಡುವುದು: ಸಮಯವನ್ನು ಗೌರವಿಸುವವರಿಗೆ ಮಾತ್ರ ಯಶಸ್ಸಿನ ಹಕ್ಕಿದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಒಬ್ಬ ವ್ಯಕ್ತಿಯು ಪ್ರತಿಯೊಂದು ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದರೆ, ಆತ ಜೀವನದಲ್ಲಿ ಎಂದಿಗೂ ಹಿಂದೆ ಉಳಿಯುವುದಿಲ್ಲ. ಕಠಿಣ ಪರಿಶ್ರಮಿ, ಸಮಯಕ್ಕೆ ಗೌರ ನೀಡುವ ವ್ಯಕ್ತಿ ಎಂದಿಗೂ ಬಡವನಾಗಿಯೂ ಉಳಿಯುವುದಿಲ್ಲ. ಆದ್ದರಿಂದ ಸಮಯವನ್ನು ಬುದ್ಧಿವಂತಿಕೆಯಿಂದ ಸರಿಯಾದ ರೀತಿಯಲ್ಲಿ ಬಳಸಲು ಕಲಿಯಿರಿ ಎನ್ನುತ್ತಾರೆ ಚಾಣಕ್ಯ.
ಜ್ಞಾನ ಸಂಪಾದನೆ: ಆಚಾರ್ಯ ಚಾಣಕ್ಯರು ಹೇಳುವಂತೆ ವ್ಯಕ್ತಿಯ ದೊಡ್ಡ ಸಂಪತ್ತು ಅವನ ಜ್ಞಾನ. ಒಬ್ಬ ವ್ಯಕ್ತಿಯು ಜ್ನಾನ ಸಂಪಾದಿಸುವುದನ್ನು ಮುಂದುವರೆಸಿದರೆ, ಅವನು ಪ್ರತಿಯೊಂದು ಪರಿಸ್ಥಿತಿಯಲ್ಲೂ ತನ್ನನ್ನು ತಾನು ನಿಭಾಯಿಸಿಕೊಳ್ಳಲು ಕಲಿಯುತ್ತಾನೆ. ಅದು ವ್ಯವಹಾರವಾಗಿರಲಿ ಅಥವಾ ಉದ್ಯೋಗವಾಗಿರಲಿ, ಜ್ಞಾನವಿರುವ ವ್ಯಕ್ತಿಯು ಜೀವನದ ಪ್ರತಿ ಹಂತದಲ್ಲೂ ಮುಂದುವರಿಯುತ್ತಲೇ ಇರುತ್ತಾನೆ. ಬುದ್ಧಿವಂತಿಕೆ ಮತ್ತು ತಿಳುವಳಿಕೆಯನ್ನು ಹೊಂದಿರುವ ವ್ಯಕ್ತಿಯು ಯಾವುದೇ ಕಠಿಣ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಎದುರಿಸಿ ಯಶಸ್ಸನ್ನು ಸಾಧಿಸಬಹುದು.
ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮ: ಚಾಣಕ್ಯ ನೀತಿಯ ಪ್ರಕಾರ, ನೀವು ಕಷ್ಟಪಟ್ಟು ಕೆಲಸ ಮಾಡದಿದ್ದರೆ, ನೀವು ಜೀವನದಲ್ಲಿ ನಿಜವಾದ ಯಶಸ್ಸನ್ನು ಎಂದಿಗೂ ಸಾಧಿಸಲು ಸಾಧ್ಯವಿಲ್ಲ. ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮವು ಯಶಸ್ಸಿನ ಕೀಲಿಯಾಗಿದೆ. ಒಬ್ಬ ವ್ಯಕ್ತಿಯು ತನ್ನ ಕರ್ತವ್ಯಗಳನ್ನು ಸಮರ್ಪಣಾಭಾವದಿಂದ ನಿರ್ವಹಿಸಿದಾಗ, ಆತ ಸಂಪತ್ತನ್ನು ಗಳಿಸುವುದು ಮಾತ್ರವಲ್ಲದೆ ಗೌರವವನ್ನೂ ಉಳಿಸಿಕೊಳ್ಳುತ್ತಾನೆ. ಆದರೆ ಸೋಮಾರಿ ವ್ಯಕ್ತಿಗಳು ಬಡತನದಲ್ಲಿ ಸಿಲುಕಿರುತ್ತಾರೆ.
ಇದನ್ನೂ ಓದಿ: ಈ ಒಂದು ತಪ್ಪಿನಿಂದಾಗಿ, ನೀವು ಗಳಿಸಿದ ಹಣವೇ ನಿಮ್ಮ ವಿನಾಶಕ್ಕೆ ಕಾರಣವಾಗಬಹುದು ಎಚ್ಚರ
ಹಣ ಉಳಿತಾಯ: ಆಚಾರ್ಯ ಚಾಣಕ್ಯರು ಹಣವನ್ನು ಉಳಿತಾಯ ಮಾಡಿ ಮತ್ತು ಅದನ್ನು ಬುದ್ಧಿವಂತಿಕೆಯಿಂದ ಬಳಸಿ ಎಂದು ಹೇಳುತ್ತಾರೆ. ಅನೇಕ ಜನರು ತಮ್ಮ ಬಳಿ ಹಣವಿದ್ದರೆ, ಅದನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡುವ ಬದಲು ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ. ಈ ರೀತಿ ಮಾಡಿದರೆ ಶ್ರೀಮಂತಿಕೆ ಗಳಿಸಲು ಸಾಧ್ಯವಿಲ್ಲ, ಆದ್ದರಿಂದ ಗಳಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವುದು, ಎಷ್ಟು ಖರ್ಚು ಮಾಡಬೇಕು, ಎಷ್ಟು ಉಳಿತಾಯ ಮಾಡಬೇಕು ಎಂಬುದರ ಬಗ್ಗೆ ಸರಿಯಾದ ಜ್ಞಾನವಿರಬೇಕು. ಹಣಕ್ಕೆ ಸಂಬಂಧಿಸಿದ ಈ ಜ್ಞಾನ ಹೊಂದಿದವರು ಎಂದಿಗೂ ಆರ್ಥಿಕ ಸಂಕಷ್ಟವನ್ನು ಎದುರಿಸುವುದಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ