AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಒಂದು ತಪ್ಪಿನಿಂದಾಗಿ, ನೀವು ಗಳಿಸಿದ ಹಣವೇ ನಿಮ್ಮ ವಿನಾಶಕ್ಕೆ ಕಾರಣವಾಗಬಹುದು ಎಚ್ಚರ

ಕೈಯಲ್ಲಿ ಹಣ ಇರುವಂತಹ ಸಂದರ್ಭದಲ್ಲಿ ವ್ಯಕ್ತಿ ಇಡುವಂತಹ ಹೆಜ್ಜೆಯಿಂದ ಹಣ ಆತನ ಅತ್ಯುತ್ತಮ ಸ್ನೇಹಿತನೂ ಆಗಬಹುದು ಅಥವಾ ಆತನ ಶತ್ರುವೂ ಆಗಬಹುದು. ಯಾವ ರೀತಿ ಖರ್ಚು ಮಾಡುತ್ತಾನೆ ಎಂಬುದರ ಮೇಲೆ ಇದು ನಿಂತಿದೆ. ಆದ್ದರಿಂದ ಹೇಗೆ, ಯಾವ ರೀತಿ ಖರ್ಚು ಮಾಡಬೇಕು, ಹೂಡಿಕೆ ಮಾಡಬೇಕು ಎಂಬ ಬಗ್ಗೆ ತಿಳಿದಿರಬೇಕು ಎಂದು ಆಚಾರ್ಯ ಚಾಣಕ್ಯರು ವಿವರಿಸಿದ್ದಾರೆ. ಚಾಣಕ್ಯರು ಹೇಳಿರುವಂತೆ ಯಾವ ತಪ್ಪಿನಿಂದ ವ್ಯಕ್ತಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಾನೆ ಎಂದು ಹೇಳಿದ್ದಾರೆ.

Chanakya Niti: ಈ ಒಂದು ತಪ್ಪಿನಿಂದಾಗಿ, ನೀವು ಗಳಿಸಿದ ಹಣವೇ ನಿಮ್ಮ ವಿನಾಶಕ್ಕೆ ಕಾರಣವಾಗಬಹುದು ಎಚ್ಚರ
ಸಾಂದರ್ಭಿಕ ಚಿತ್ರ Image Credit source: Pexels
ಮಾಲಾಶ್ರೀ ಅಂಚನ್​
|

Updated on: Nov 08, 2025 | 6:14 PM

Share

ಪ್ರತಿಯೊಬ್ಬರೂ ಕೂಡ ಒಂದೊಳ್ಳೆ ಜೀವನ ನಡೆಸುವ ಸಲುವಾಗಿ ಕಷ್ಟಪಟ್ಟು ದುಡಿಯುತ್ತಾರೆ, ಹಣ ಸಂಪಾದನೆ ಮಾಡುತ್ತಾರೆ. ಆದರೆ ನೀವೇನಾದರೂ ಈ ತಪ್ಪುಗಳನ್ನು ಮಾಡಿದರೆ, ನೀವು ಸಂಪಾದಿಸಿದ ಹಣವೇ  (money) ನಿಮ್ಮ ಶತ್ರುವಾಗಬಹುದು, ಇದರ ಕಾರಣದಿಂದಲೇ ನೀವು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೆ ಇವರು ಹಣ ಸಂಪಾದನೆ, ಯಶಸ್ಸಿಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಕೆಲವೊಂದು ತಪ್ಪುಗಳಿಂದ ವ್ಯಕ್ತಿಗೆ ಆತ ಸಂಪಾದಿಸಿದ ಹಣವೇ ಹೇಗೆ ಶತ್ರುವಾಗುತ್ತದೆ ಎಂಬುದನ್ನು ಕೂಡ ವಿವರಿಸಿದ್ದಾರೆ. ಹಾಗಿದ್ದರೆ, ಯಾವ ತಪ್ಪುಗಳಿಂದ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

ಹಣ ಯಾವಾಗ ಶತ್ರುವಾಗುತ್ತದೆ?

ಚಾಣಕ್ಯರು ಹೇಳುವಂತೆ ಒಬ್ಬ ವ್ಯಕ್ತಿಯು ತನ್ನ ಹಣವನ್ನು  ಅನಗತ್ಯ ಖರ್ಚುಗಳು ಮತ್ತು ಸುಖಾಸುಮ್ಮನೆ ಬೇಡದ ವಸ್ತುಗಳಿಗೆ ಖರ್ಚು ಮಾಡುತ್ತಾ ಹೋದರೆ ಅವನ ಸ್ವಂತ ಹಣವೇ ಆತನ ಶತ್ರುವಾಗಬಹುದು. ಹೌದು ಖರ್ಚು ಹೆಚ್ಚಾದಾಗ ಹಣಕಾಸು ನಿರ್ವಹಣೆ ಸರಿಯಾಗಿ ನಡೆಯುವುದಿಲ್ಲ. ಇದರಿಂದ ಆತ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.

ಐಷಾರಾಮಿ ಜೀವನಕ್ಕಾಗಿ ಹಣ ಖರ್ಚು ಮಾಡುವ, ಸಂಪಾದನೆಗಿಂತ ಖರ್ಚು ಹೆಚ್ಚು ಮಾಡುವ ವ್ಯಕ್ತಿಯು ಭವಿಷ್ಯದಲ್ಲಿ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಆರ್ಥಿಕ ತೊದರೆಯಿಂದ ಸಾಲ ಮಾಡುವುದು ಮಾತ್ರವಲ್ಲದೆ ಮಾನಸಿಕ ಒತ್ತಡವನ್ನು ಸಹ ಎದುರಿಸಬೇಕಾಗುತ್ತದೆ ಎಂದು ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ತಪ್ಪು ಉದ್ದೇಶಗಳಿಗೆ ಯಾವುದೇ ಕಾರಣಕ್ಕೂ ಹಣವನ್ನು ಬಳಸಬಾರದು ಎಂದು ಸಲಹೆ ನೀಡಿದ್ದಾರೆ. ಆದ್ದರಿಂದ ಕೈಯಲ್ಲಿ ಹಣ ಇದ್ದಾಗ, ಆ ದುಡ್ಡನ್ನು ಭವಿಷ್ಯಕ್ಕಾಗಿ ಕೂಡಿಡುವ ಬಗ್ಗೆ ಯೋಚನೆ ಮಾಡಬೇಕು.

ಹಣವನ್ನು ಹೇಗೆ ಬಳಸಬೇಕು?

ಹಣವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ನಿಮ್ಮ ಸ್ನೇಹಿತನಂತೆ ಜೊತೆಯಿರುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳುವಂತೆ, ಹಣವನ್ನು ಕುಟುಂಬದ ಅಗತ್ಯಗಳನ್ನು ಪೂರೈಸಲು ಬಳಸಬೇಕು, ಪ್ರತಿಯೊಬ್ಬರೂ ತಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕು, ಇದರಿಂದ  ಆ ಕೂಡಿಟ್ಟ ಹಣವು ಕಷ್ಟದ ಸಮಯದಲ್ಲಿ ಒಬ್ಬ ಒಳ್ಳೆಯ ಸ್ನೇಹಿತನಂತೆ ಸಹಾಯಕ್ಕೆ ಬರುತ್ತದೆ.

ಇದನ್ನೂ ಓದಿ: ನಿಮ್ಮ ಅಭ್ಯಾಸಗಳೇ ಮನೆಯಲ್ಲಿ ದಾರಿದ್ರ್ಯ ನೆಲೆಸಲು ಕಾರಣ ಎನ್ನುತ್ತಾರೆ ಚಾಣಕ್ಯ

ಹಣ ಉಳಿತಾಯ ಮಾಡುವುದು ಹೇಗೆ?

ಎಷ್ಟೇ ಪ್ರಯತ್ನ ಪಟ್ಟರೂ, ಕೆಲವರ ಕೈಯಲ್ಲಿ ಹಣವೇ ಉಳಿಯುವುದಿಲ್ಲ, ಅವರಿಗೆ ಹಣ ನಿರ್ವಹಣೆ ಕಷ್ಟವಾಗುತ್ತದೆ. ಹಾಗಾಗಿ ವ್ಯರ್ಥ ಖರ್ಚುಗಳನ್ನು ಕಡಿಮೆ ಮಾಡಬೇಕು, ಅಗತ್ಯ ವಿಚಾರಗಳಿಗೆ ಮಾತ್ರ ಹಣವನ್ನು ಖರ್ಚು ಮಾಡಬೇಕು, ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸಬೇಕು, ಸರಿಯಾದ ರೀತಿಯಲ್ಲಿ ಹೂಡಿಕೆಯನ್ನು ಮಾಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ