Chanakya Niti: ಗಂಡ-ಹೆಂಡತಿಯ ಈ ತಪ್ಪುಗಳು ಮನೆಯ ಶಾಂತಿ, ನೆಮ್ಮದಿಯನ್ನೇ ಕೆಡಿಸುತ್ತದೆ

ಗಂಡ ಹೆಂಡತಿಯ ಮಧ್ಯೆ ಸಣ್ಣ ಪುಟ್ಟ ಜಗಳಗಳು, ಮನಸ್ತಾಪಗಳು ನಡೆಯುವುದು ಸಾಮಾನ್ಯ. ಆದರೆ ಗಂಡ ಹೆಂಡತಿಯ ಈ ಕೆಲವು ತಪ್ಪುಗಳು, ಅಭ್ಯಾಸಗಳು ಮನೆಯ ಶಾಂತಿ, ನೆಮ್ಮದಿಯನ್ನೇ ಹಾಳು ಮಾಡುತ್ತದೆ. ಮನೆಯಲ್ಲಿ ಜಗಳಗಳು ಉಲ್ಬಣಗೊಳ್ಳುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಚಾಣಕ್ಯರು ಹೇಳಿರುವಂತೆ ದಂಪತಿಗಳ ಯಾವ ತಪ್ಪುಗಳು ಮನೆಯ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಹಾಳು ಮಾಡುತ್ತವೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಗಂಡ-ಹೆಂಡತಿಯ ಈ ತಪ್ಪುಗಳು  ಮನೆಯ ಶಾಂತಿ, ನೆಮ್ಮದಿಯನ್ನೇ ಕೆಡಿಸುತ್ತದೆ
ಸಾಂದರ್ಭಿಕ ಚಿತ್ರ
Image Credit source: vecteezy

Updated on: Nov 28, 2026 | 7:10 PM

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಗಂಡ-ಹೆಂಡತಿಯ ಸಂಬಂಧ (Relationship) ಮತ್ತು ದಾಂಪತ್ಯ ಜೀವನದ ಬಗ್ಗೆ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅವರ ಪ್ರಕಾರ, ಕುಟುಂಬದ ಸಂತೋಷ ಮತ್ತು ಶಾಂತಿ ಅನ್ನೋದು ಗಂಡ ಮತ್ತು ಹೆಂಡತಿಯ ನಡುವಿನ ಸಾಮರಸ್ಯದ ಮೇಲೆ ಅವಲಂಬಿತವಾಗಿರುತ್ತದೆ.  ಗಂಡ ಮತ್ತು ಹೆಂಡತಿಯ ನಡುವೆ ಪರಸ್ಪರ ಸಾಮರಸ್ಯವಿಲ್ಲದಿದ್ದರೆ ಮನೆಯಲ್ಲಿ ನೆಮ್ಮದಿ ನೆಲೆಸಲು ಸಾಧ್ಯವಿಲ್ಲ. ಅದರಲ್ಲೂ ದಂಪತಿಗಳು ತಿಳಿದೋ ಅಥವಾ ತಿಳಿಯದೆಯೋ ಮಾಡುವ ಈ ಕೆಲವೊಂದು ತಪ್ಪುಗಳು ಮನೆಯ ಶಾಂತಿ ಮತ್ತು ನೆಮ್ಮದಿಯನ್ನೇ ಹಾಳು ಮಾಡಿಬಿಡುತ್ತದೆ. ಹಾಗಿದ್ದರೆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಗಂಡ-ಹೆಂಡತಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

ಗಂಡ ಹೆಂಡತಿಯ ಯಾವ ತಪ್ಪುಗಳು ಮನೆಯ ಶಾಂತಿಯನ್ನು ಹಾಳು ಮಾಡುತ್ತದೆ?

ಒಬ್ಬರನ್ನೊಬ್ಬರು ಅವಮಾನಿಸುವುದು, ಕಠಿಣ ಮಾತುಗಳನ್ನಾಡುವುದು:

ಗಂಡ ಮತ್ತು ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಮೂಡುವುದು ಸಹಜ. ಆದರೆ ಮನಸ್ತಾಪಗಳು ಏರ್ಪಟ್ಟಾಗ, ಒಬ್ಬರನ್ನೊಬ್ಬರು ಅವಮಾನಿಸಿ ಮಾತನಾಡುವುದು, ಕೆಟ್ಟ ಪದಗಳನ್ನು ಮಾತನಾಡುವುದು ಇವೆಲ್ಲವೂ ಸುಂದರ ಸಂಬಂಧವನ್ನು ಹಾಳು ಮಾಡುವುದು ಮಾತ್ರವಲ್ಲದೆ, ಮನೆಯ ಶಾಂತಿಯನ್ನು ಸಹ ಕೆಡಿಸುತ್ತದೆ. ಆದ್ದರಿಂದ ಗಂಡ ಹೆಂಡತಿ ಒಬ್ಬರಿಗೊಬ್ಬರು ಕೆಟ್ಟ ಪದ ಬಳಕೆಯನ್ನು ಮಾಡದೆ ಪರಸ್ಪರರ ಭಾವನೆಗಳನ್ನು ಗೌರವಿಸುವುದು ಮುಖ್ಯ ಎಂದು ಆಚಾರ್ಯ ಚಾಣಕ್ಯರು ಸಲಹೆಯನ್ನು ನೀಡಿದ್ದಾರೆ.

Loading...

ಸೋಮಾರಿತನ ಮತ್ತು ನೈರ್ಮಲ್ಯವನ್ನು ನಿರ್ಲಕ್ಷಿಸುವುದು:

ಮನೆಯ ವಾತಾವರಣವನ್ನು ಸಂತೋಷವಾಗಿಡಲು ಸ್ವಚ್ಛತೆ ಮತ್ತು ಶಿಸ್ತಿಗೆ ಗಮನ ಕೊಡುವುದು ತುಂಬಾನೇ ಮುಖ್ಯ. ಮನೆ ಸ್ವಚ್ಛವಾಗಿಲ್ಲದಿದ್ದರೆ, ಸೋಮಾರಿತನವನ್ನು ತೋರಿ ಮನೆಯ ನೈರ್ಮಲ್ಯ, ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ದೈನಂದಿನ ಜೀವನದಲ್ಲಿ ಒತ್ತಡ ಹೆಚ್ಚಾಗುತ್ತದೆ, ನೆಮ್ಮದಿ ಹಾಳಾಗುತ್ತದೆ. ಆದ್ದರಿಂದ ಗಂಡ ಮತ್ತು ಹೆಂಡತಿ ಪರಸ್ಪರ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಎಚ್ಚರಗೊಳ್ಳುವುದು, ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು, ಒಬ್ಬರಿಗೊಬ್ಬರೂ ಕೆಲಸದಲ್ಲಿ ಸಹಾಯ ಮಾಡುವುದು ಇಂತಹ ಸಣ್ಣ ಅಭ್ಯಾಸಗಳು ಜೀವನದ ಸಂತೋಷವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ ಚಾಣಕ್ಯ.

ಕೌಟುಂಬಿಕ ವಿವಾದಗಳು, ಖಾಸಗಿ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು:

ಎಲ್ಲರ ಮನೆಯ ದೋಸೆ ತೂತೇ ಎಂಬ ಮಾತಿನಂತೆ ಪ್ರತಿ ಮನೆಯಲ್ಲೂ ಸಹ ಕೆಲವೊಮ್ಮ ಕೌಟುಂಬಿಕ ಕಲಹಗಳು, ಜಗಳಗಳು ನಡೆಯುತ್ತವೆ. ಇಂತಹ ತೀರಾ ಖಾಸಗಿ ವಿಷಯಗಳನ್ನು ಸ್ನೇಹಿತರು, ಸಂಬಂಧಿಕರು ಅಥವಾ ಹೊರಗಿನವರ ಜೊತೆ ಚರ್ಚಿಸುವುದು ಒಳ್ಳೆಯದಲ್ಲ. ಕೆಲವೊಮ್ಮೆ, ಹೊರಗಿನವರ ಅನಗತ್ಯ ಹಸ್ತಕ್ಷೇಪವು ವಿವಾದವನ್ನು ಮತ್ತಷ್ಟು ಉಲ್ಬಣಗೊಳಿಸಬಹುದು. ಆದ್ದರಿಂದ ಇಂತಹ ವಿಷಯಗಳನ್ನು ಬೇರೆಯವರೊಂದಿಗೆ ಚರ್ಚಿಸುವ ಬದಲು, ಮನೆಯವರೇ ಮಾತನಾಡಿ ಬಗೆಹರಿಸಬೇಕು.

ಇದನ್ನೂ ಓದಿ: ಮನೆಯ ಯಜಮಾನನಾದವನಿಗೆ ಈ ಅಭ್ಯಾಸಗಳು ಇರಲೇಬಾರದು ಎಂದಿದ್ದಾರೆ ಚಾಣಕ್ಯ

ಪರಸ್ಪರ ಪ್ರಮುಖ ವಿಷಯಗಳನ್ನು ಮರೆಮಾಡುವುದು:

ಗಂಡ ಹೆಂಡತಿ ನಡುವಿನ ಸಂಬಂಧದಲ್ಲಿ ನಂಬಿಕೆ ಅತ್ಯಂತ ಮುಖ್ಯ ಎಂದಿದ್ದಾರೆ ಚಾಣಕ್ಯ. ಹೀಗಿರುವಾಗ ಸುಳ್ಳು ಹೇಳುವುದು, ವಿಷಯಗಳನ್ನು ಮರೆಮಾಡುವುದು ಈ ರೀತಿ ಮಾಡುವುದರಿಂದ ಸಂಬಂಧವು ದುರ್ಬಲಗೊಳ್ಳುತ್ತದೆ, ಜಗಳಗಳು ಏರ್ಪಡಲು ಕಾರಣವಾಗುತ್ತದೆ, ಈ ಜಗಳಗಳು ಮನೆಯ ಶಾಂತಿ, ನೆಮ್ಮದಿಯನ್ನು ಕೆಡಿಸಲು ಕಾರಣವಾಗುತ್ತದೆ. ಆದ್ದರಿಂದ ಗಂಡ ಮತ್ತು ಹೆಂಡತಿ ತಾವು ಪರಸ್ಪರ ಪ್ರಾಮಾಣಿಕರಾಗಿರಬೇಕು,

ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಅಭ್ಯಾಸ:

ಸಂತೋಷದಾಯಕ ದಾಂಪತ್ಯಕ್ಕೆ, ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಪ್ರೀತಿ ಮತ್ತು ವಿಶ್ವಾಸದಷ್ಟೇ ಹಣಕಾಸು ಯೋಜನೆಯೂ ಮುಖ್ಯ. ಆದ್ದರಿಂದ ಅನಗತ್ಯ ಖರ್ಚು ಮಾಡುವ ಅಭ್ಯಾಸವನ್ನು ಬಿಟ್ಟು ಬಿಡಬೇಕು. ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರಿಗೂ ಸಹ ದುಂದುವೆಚ್ಚ ಮಾಡುವ ಅಭ್ಯಾಸವಿದ್ದರೆ, ಇದು ಇಡೀ ಮನೆಯ ನೆಮ್ಮದಿಯನ್ನು ಕೆಡಿಸುತ್ತದೆ. ಹಣಕಾಸಿನ ವಿಚಾರವಾಗಿ ಜಗಳಗಳು ಏರ್ಪಡಲು ಕಾರಣವಾಗುತ್ತದೆ. ಆದ್ದರಿಂದ ದುಂದುವೆಚ್ಚಗಳನ್ನು ಬಿಟ್ಟು, ಸರಿಯಾದ ರೀತಿಯನ್ನು ಹಣಕಾಸಿನ ಯೋಜನೆಗಳನ್ನು ಮಾಡಬೇಡಿ. ಈ ಸಣ್ಣ ಅಭ್ಯಾಸ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us